More

    ಮೊದಲಿನ ಈಚನಾಳ ತಾಪಂ ಉಳಿಸಿ – ನೀರಲಕೇರಿ ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರ ಒತ್ತಾಯ

    ಲಿಂಗಸುಗೂರು: ಹೊಸದಾಗಿ ಅಸ್ಥಿತ್ವಕ್ಕೆ ತಂದ ಪೂಲಬಾವಿ ತಾಪಂ ಕ್ಷೇತ್ರ ರದ್ದುಗೊಳಿಸುವಂತೆ ಒತ್ತಾಯಿಸಿ ಸಹಾಯಕ ಆಯುಕ್ತರ ಕಚೇರಿ ನೌಕರ ಗುರುರಾಜ ಛಲವಾದಿಗೆ ಗ್ರಾಮಸ್ಥರು ಮಂಗಳವಾರ ಮನವಿ ಸಲ್ಲಿಸಿದರು.

    ಸರ್ಕಾರ ಇತ್ತೀಚೆಗೆ ಸರ್ವೇ ಮಾಡಿ ಈಚನಾಳ ತಾಪಂ ವ್ಯಾಪ್ತಿಗೆ ಒಳಪಡುವ ಗ್ರಾಮಗಳನ್ನು ಸೇರಿಸಿ ಫೂಲಬಾವಿ ತಾಪಂ ಅಸ್ಥಿತ್ವಕ್ಕೆ ತರಲಾಗಿದೆ. ಇದನ್ನು ರದ್ದ್ಧುಗೊಳಿಸಿ ಈ ಹಿಂದಿದ್ದ ಈಚನಾಳ ತಾಪಂಅನ್ನು ಮೊದಲಿನಂತೆ ಉಳಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

    ಜನಸಂಖ್ಯೆಗೆ ಅನುಗುಣವಾಗಿ ತಾಪಂ ಕ್ಷೇತ್ರ ರಚನೆಗೆ ಸರ್ವೇ ಮಾಡುವಾಗ ಈಚನಾಳ ತಾಪಂ ವ್ಯಾಪ್ತಿಯಲ್ಲಿದ್ದ ನೀರಲಕೇರಿ ಗ್ರಾಪಂನ ನೀರಲಕೇರಿ, ಅಡವಿಬಾವಿ, ಮರಗಂಟನಾಳ, ಚಿತ್ರನಾಳ ಗ್ರಾಮಗಳನ್ನು ಫೂಲಬಾವಿ ತಾಪಂಗೆ ಸೇರಿಸಿರುವುದು ಸೂಕ್ತವಲ್ಲ. ಈಚನಾಳ ತಾಪಂ ಈ ಗ್ರಾಮಗಳಿಗೆ 3-4 ಕಿ.ಮೀ.ದೂರವಿದೆ. ಫೂಲಬಾವಿ 24 ಕಿ.ಮೀ. ದೂರವಾಗುತ್ತದೆ. ಜನರ ಅನಿಸಿಕೆ, ಅಭಿಪ್ರಾಯ ಕೇಳದೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಆದ್ದರಿಂದ ತಕ್ಷಣವೇ ನಿರ್ಧಾರ ಹಿಂಪಡೆದು, ಮೊದಲಿನಂತೆ ಈಚನಾಳ ತಾಪಂ ಉಳಿಸಬೇಕು. ಇಲ್ಲದಿದ್ದರೆ ಹೋರಾಟ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts