More

    ಲಿಂಗಸುಗೂರಿನಲ್ಲಿ ಹೋಳಿ ಸಂಭ್ರಮ

    ಲಿಂಗಸುಗೂರು: ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಹೋಳಿ ನಿಮಿತ್ತ ಜನರು ಪರಸ್ಪರ ಬಣ್ಣ ಎರಚುವ ಮೂಲಕ ಮಂಗಳವಾರ ಸಂಭ್ರಮಿಸಿದರು. ಛಾವಣಿ ಹೋಳಿ ಉತ್ಸವ ಸಮಿತಿ ನೇತೃತ್ವದಲ್ಲಿ ಪಟ್ಟಣದ ದೊಡ್ಡ ಹನುಮಂತ ದೇವಸ್ಥಾನ, ಗಡಿಯಾರ ಚೌಕ್, ಅಂಚೆ ಕಚೇರಿ, ಬಸ್ ನಿಲ್ದಾಣ ವೃತ್ತ ಸೇರಿ ಪ್ರಮುಖ ಬೀದಿಗಳ ಮೂಲಕ ಡಿಜೆ ಬಳಸಿ ಹೋಳಿ ಆಚರಣೆ ನಡೆಸಲಾಯಿತು. ನೂರಾರು ಯುವಕರು ನೃತ್ಯ ಮಾಡುತ್ತ ಬಣ್ಣ ಎರಚಿದರು.

    ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮಹಿಳೆಯರು ಹಾಗೂ ಮಕ್ಕಳು ಹೋಳಿ ಸಂಭ್ರಮದಲ್ಲಿ ಪಾಲ್ಗೊಂಡರು. ಯುವಕರು ಓಕಳಿ ತುಂಬಿದ ಗಡಿಗೆ ಒಡೆದರು. ಪಟ್ಟಣದಲ್ಲಿ ಮಧ್ಯಾಹ್ನದವರೆಗೆ ಬಹುತೇಕ ಹೋಟೆಲ್, ಅಂಗಡಿಗಳನ್ನು ಮುಚ್ಚಲಾಗಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts