More

    ಜಾನಪದ ಸಾಹಿತ್ಯದ ಜಾಗೃತಿ ಅಗತ್ಯ; ಎಸಿ ರಾಹುಲ್ ಸಂಕನೂರು ಹೇಳಿಕೆ

    ಲಿಂಗಸುಗೂರು: ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ಆಧುನಿಕತೆ ಭರಾಟೆಯಲ್ಲಿ ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ ನಶಿಸುತ್ತಿದ್ದು, ಇಂತಹ ಪುರಾತನ ಪರಂಪರೆಯುಳ್ಳ ಗ್ರಾಮೀಣ ಸೊಗಡಿನ ಜಾನಪದ ಕಲೆ, ಸಾಹಿತ್ಯ, ಸಂಸ್ಕೃತಿ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ ಎಂದು ಎಸಿ ರಾಹುಲ್ ಸಂಕನೂರು ಹೇಳಿದರು.

    ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಕರ್ನಾಟಕ ಜಾನಪದ ಪರಿಷತ್ ಮತ್ತು ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ಗಡಿ, ನಾಡು, ನುಡಿಚಿಂತನೆ ಮತ್ತು ಮುದಗಲ್ ಕೋಟೆ ಕೃತಿ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

    ಜಾನಪದ ಸಾಹಿತ್ಯ ಕಥೆ, ನೃತ್ಯ, ಹಾಡು ಸೇರಿ ವಿಶಿಷ್ಟ ಆಯಾಮಗಳಲ್ಲಿ ಕಾಣಬಹುದಾಗಿದ್ದು, ಈ ಸಾಹಿತ್ಯವು ಯಾವಾಗ, ಯಾರು ರಚಿಸಿದರು ಎನ್ನುವುದಕ್ಕಿಂತ ಬಾಯಿಂದ ಬಾಯಿಗೆ ಬಂದಿರುವ ಶುದ್ಧ ಸಾಹಿತ್ಯ. ಇಂತಹ ವಿಶಿಷ್ಟ ಜಾನಪದ ಸಾಹಿತ್ಯವನ್ನು ಕಳೆದುಕೊಂಡರೆ ನಮ್ಮತನ ನಾಶವಾಗುತ್ತದೆ. ಸನಾತನ ಭಾರತೀಯ ಪರಂಪರೆ ಜಾನಪದ ಸಾಹಿತ್ಯದ ಮರು ಆವಿಷ್ಕಾರವಾಗಬೇಕಿದೆ. ನಗರ ಪ್ರದೇಶ, ಶಾಲಾ-ಕಾಲೇಜುಗಳಲ್ಲಿ ಜಾನಪದ ಸಾಹಿತ್ಯ, ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸಬೇಕಿದೆ ಎಂದರು.

    ಪರಿಷತ್ ಜಿಲ್ಲಾಧ್ಯಕ್ಷೆ ಡಾ.ಅರುಣಾ ಹಿರೇಮಠ ಮಾತನಾಡಿ, ವಿಜ್ಞಾನ, ತಂತ್ರಜ್ಞಾನ ಬೆಳೆದಂತೆಲ್ಲ ನಗರ ಪ್ರದೇಶಗಳಲ್ಲಿ ಜಾನಪದ ಸಾಹಿತ್ಯ ಕ್ಷಿಣಿಸುತ್ತಿದ್ದು, ಪರಿಷತ್‌ನಿಂದ ಜಾನಪದ ಸಾಹಿತ್ಯ ಉಳಿವಿಗಾಗಿ ಸಮ್ಮೇಳನ ಮತ್ತು ಕಲೆ, ಸಾಹಿತ್ಯ ಸಂಕಿರಣ ಏರ್ಪಡಿಸುವ ಮೂಲಕ ಜಾಗೃತಿ ಮೂಡಿಸುವ ಕಾರ್ಯವನ್ನು ನಿರಂತರವಾಗಿ ನಡೆಸಲಾಗುವುದು ಎಂದರು.

    ಪರಿಷತ್ ಜಿಲ್ಲಾಧ್ಯಕ್ಷ ಡಾ.ಶರಣಪ್ಪ ಆನೆಹೊಸೂರು, ಸಾಹಿತಿ ಗಿರಿರಾಜ ಹೊಸಮನಿ, ಡಾ.ಅಶೋಕ ಪಾಟೀಲ್, ಲಕ್ಷ್ಮೀದೇವಿ ನಡುವಿನಮನಿ, ಶಿವಮ್ಮ ಪಟ್ಟದಕಲ್, ಗುರುರಾಜ ಗೌಡೂರು, ಮೌನೇಶ ಹಿರೇಹಣಗಿ, ಡಾ.ಮಹಾಂತಗೌಡ ಪಾಟೀಲ್, ಕೆ.ಖಾದರ್ ಪಾಷಾ, ಶಿವಾನಂದ ನರಹಟ್ಟಿ, ಡಾ.ಬಸವರಾಜ ನಾಯಕ, ವಿಜಯಲಕ್ಷ್ಮೀ, ಬಸವರಾಜ, ನಿರ್ಮಲಾ ಹಿರೇಮಠ, ಸುಮಂಗಲಾ ಪತ್ತಾರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts