More

    ಫಲಾಪೇಕ್ಷೆ ಬಯಸದ ಏಕೈಕ ಜೀವ ಅಮ್ಮ


    ನಂದವಾಡಗಿ ಹಿರೇಮಠದ ಡಾ.ಚನ್ನಬಸವ ದೇವರು ಹೇಳಿಕೆ ಜನನಿ ಗ್ರಂಥ ಬಿಡುಗಡೆ

    ಲಿಂಗಸುಗೂರು: ಪೃಥ್ವಿಯ ಮೇಲಿನ ಚರಾಚರ ಜೀವರಾಶಿಗಳ ಪೈಕಿ ಮಾತೃ ಜೀವಿ ಸರ್ವ ಶ್ರೇಷ್ಠ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಪ್ರೀತಿಸುವ ಏಕೈಕ ಜೀವವೇ ಅಮ್ಮ ಎಂದು ನಂದವಾಡಗಿ ಹಿರೇಮಠದ ಡಾ.ಚನ್ನಬಸವ ದೇವರು ಹೇಳಿದರು.

    ತಾಲೂಕಿನ ಯರಡೋಣ ಕ್ರಾಸ್ ಸಿದ್ಧರಾಮೇಶ್ವರ ಗುರುಮಠದ ಮುರುಘೇಂದ್ರ ಶಿವಯೋಗಿಗಳ ಸಂಪಾದನೆಯ ಜನನಿ ಗ್ರಂಥ ಬಿಡುಗಡೆ ಹಾಗೂ ಕಮ್ಮಟ ಕಾರ್ಯಕ್ರಮದಲ್ಲಿ ಶನಿವಾರ ಹಿತವಚನ ನೀಡಿದರು. ಅಕ್ಷರದಿಂದ ವರ್ಣಿಸಲಾಗದ ಶಕ್ತಿಯೇ ಅಮ್ಮ. ಜನ್ಮ ನೀಡಿದ ತಾಯಿಯ ತ್ಯಾಗದ ಬಗ್ಗೆ ಬರೆಯುತ್ತ ಹೋದರೆ ಅಕ್ಷರಗಳೇ ಕಡಿಮೆ ಬೀಳುತ್ತವೆ. ತಾಯಿಗೆ ತಾಯಿಯೇ ಸಾಟಿ. ತಾಯಿ ಎಂಬ ಪದದ ಸ್ಥಾನ ತುಂಬಲು ಯಾವುದರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

    ಹಿಂದೆ ಅನಕ್ಷರಸ್ಥರ ಸಂಖ್ಯೆ ಹೆಚ್ಚಿದ್ದರೂ ವೃದ್ಧಾಶ್ರಮಗಳಿರಲಿಲ್ಲ, ಅನಾಥಾಶ್ರಮಗಳಿದ್ದವು. ಆಧುನಿಕತೆ ಬೆಳೆದಂತೆ ಮನುಷ್ಯ ಏನೆಲ್ಲ ಪದವಿ ಪಡೆದರೂ, ಉನ್ನತ ಸ್ಥಾನ ಅಲಂಕರಿಸಿದರೂ ವೃದ್ಧಾಶ್ರಮಗಳು ಹೆಚ್ಚುತ್ತಿವೆ. ಇದಕ್ಕೆ ಬದುಕಿನ ಜ್ಞಾನದಲ್ಲಿ ಸಣ್ಣವರಾಗಿರುವುದೇ ಪ್ರಮುಖ ಕಾರಣ. ಸಂಪಾದನೆ ವ್ಯಾಮೋಹ, ನೌಕರಿ, ಚಾಕರಿ ಕೆಲಸಗಳಿಂದ ತಂದೆ-ತಾಯಿ ಸೇವೆ ಮಾಡಲು ಪುರಸೊತ್ತಿಲ್ಲದಂತಾಗಿದೆ ಎಂದು ಡಾ.ಚನ್ನಬಸವ ದೇವರು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts