More

    ಲಿಂಗಸುಗೂರು ಬಂದ್‌ಗೆ ಮಿಶ್ರ ಪ್ರತಿಕ್ರಿಯೆ; ಜನಪರ ಸಂಘಟನೆಗಳ ವೇದಿಕೆ ಶಾಂತಿಯುತ ಪ್ರತಿಭಟನೆ

    ದಲಿತ ವ್ಯಕ್ತಿ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕ್ರಮಕ್ಕೆ ಆಗ್ರಹ

    ಲಿಂಗಸುಗೂರು: ತಾಲೂಕಿನ ಕಿಲಾರಹಟ್ಟಿ ಗ್ರಾಮದಲ್ಲಿ ದಲಿತ ವ್ಯಕ್ತಿಯ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ದಲಿತ ಹಾಗೂ ಜನಪರ ಸಂಘಟನೆಗಹಳ ಹೋರಾಟ ವೇದಿಕೆ ಸೋಮವಾರ ಕರೆ ನೀಡಿದ್ದ ಲಿಂಗಸುಗೂರು ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

    ಡಿವೈಎಸ್ಪಿ ಕಚೇರಿಯಿಂದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ ವೇದಿಕೆ ಮುಖಂಡರು, ಬಸ್ ನಿಲ್ದಾಣ ವೃತ್ತದ ಬಳಿ ಧರಣಿ ನಡೆಸಿದರು. ಪಟ್ಟಣದಲ್ಲಿ ಕೆಲ ಅಂಗಡಿ, ಹೋಟೆಲ್ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗಿತ್ತು. ಶಾಲಾ-ಕಾಲೇಜು, ಬ್ಯಾಂಕ್‌ಗಳು, ಕಚೇರಿಗಳು, ಬಸ್ ಸಂಚಾರ ಎಂದಿನಂತೆ ಇದ್ದವು.

    ಅಪ್ರಾಪ್ತೆಯನ್ನು ಯುವಕನೊಬ್ಬ ಅಪಹರಿಸಿದ ಕುರಿತು ಮುದಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ವರ್ಷ ಕಳೆದರೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ಅಪ್ರಾಪ್ತೆಯ ತಂದೆ ಬೈಲಪ್ಪ ಅಸಮಾಧಾನ ವ್ಯಕ್ತಪಡಿಸಿದ್ದನ್ನೇ ನೆಪವಾಗಿಟ್ಟುಕೊಂಡು ನ.13ರಂದು ಕೆಲವರು ಆತನನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದಾರೆ. ಬೈಲಪ್ಪನ ಪತ್ನಿ ರೇಣುಕಮ್ಮ ನ.18ರಂದು ದೂರು ನೀಡಿದರೂ ಪೊಲೀಸರು ದಾಖಲಿಸಿಕೊಂಡಿಲ್ಲ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

    ಕಿಲಾರಹಟ್ಟಿ ಪ್ರಕರಣಕ್ಕೆ ಸಂಬಂಧಿಸಿ ಎಲ್ಲ ದೂರುಗಳು ದಾಖಲಾಗಬೇಕು. ಆರೋಪಿಗಳನ್ನು ಬಂಧಿಸಿ ಹಲ್ಲೆಗೊಳಗಾದ ಕುಟುಂಬಕ್ಕೆ ಶಾಸನಬದ್ಧ ಪರಿಹಾರ ಒದಗಿಸಬೇಕು. ಕರ್ತವ್ಯ ಮರೆತ ಮುದಗಲ್ ಪಿಎಸ್‌ಐ, ಎಎಸ್‌ಐ, ಮಸ್ಕಿ ಸಿಪಿಐ, ಡಿವೈಎಸ್‌ಪಿ ಮತ್ತು ಜಿಲ್ಲಾ ಮಹಿಳಾ ಠಾಣೆ ಸಿಪಿಐ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

    ವೇದಿಕೆ ಮುಖಂಡರಾದ ಅಂಬಣ್ಣ ಅರೋಲಿ, ಸಿ.ದಾನಪ್ಪ, ಬಾಲಸ್ವಾಮಿ ಕೊಡ್ಲಿ, ಚಿನ್ನಪ್ಪ ಕೊಟ್ರಿಕಿ, ದೊಡ್ಡಪ್ಪ ಮುರಾರಿ, ದಾನಪ್ಪ ಮಸ್ಕಿ, ಚಿನ್ನಪ್ಪ ನಗನೂರು, ಎಚ್.ಎನ್.ಬಡಿಗೇರ, ಬಸವರಾಜ ಸಾಸಲಮರಿ, ಯಲ್ಲಾಲಿಂಗ, ತಿಪ್ಪರಾಜ, ನಾಗರಾಜ, ದುರುಗಪ್ಪ, ಹನುಮಂತ ವೆಂಕಟಾಪುರ, ಮಲ್ಲಯ್ಯ ಬುಳ್ಳಾ, ಲಿಂಗಪ್ಪ ಪರಂಗಿ, ಜೆ.ಬಿ.ರಾಜು, ಚಿನ್ನಪ್ಪ ಕಂದಳ್ಳಿ, ಹುಲಗಪ್ಪ ಕೆಸರಟ್ಟಿ, ರಮೇಶ ಗೋಸ್ಲೆ, ಪ್ರೇಮಜೀವಿ, ದುರುಗಪ್ಪ ಅಗ್ರಹಾರ, ಶರಣಪ್ಪ ಮುದಗಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts