More

    ಅನಕ್ಷರಸ್ಥರಿಗೆ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಪ್ರಮುಖ; ತಾಪಂ ಇಒ ಲಕ್ಷ್ಮೀದೇವಿ ಅಭಿಪ್ರಾಯ

    ಎರಡು ದಿನದ ಕಾರ್ಯಗಾರ

    ಲಿಂಗಸುಗೂರು: ಮಕ್ಕಳಿಗೆ ನೀಡುವ ಶಿಕ್ಷಣಕ್ಕೂ, ಅನಕ್ಷರಸ್ಥರಿಗೆ ನೀಡುವ ಶಿಕ್ಷಣಕ್ಕೂ ತುಂಬಾ ವ್ಯತ್ಯಾಸವಿದ್ದು, ಅನಕ್ಷರಸ್ಥರಿಗೆ ಶಿಕ್ಷಣ ನೀಡುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ ಎಂದು ತಾಪಂ ಇಒ ಲಕ್ಷ್ಮೀದೇವಿ ಅಭಿಪ್ರಾಯಪಟ್ಟರು.

    ಪಟ್ಟಣದ ತಾಪಂ ಸಭಾಂಗಣದಲ್ಲಿ ಜಿಪಂ, ಜಿಲ್ಲಾ ಲೋಕ ಶಿಕ್ಷಣ ಸಮಿತಿ, ತಾಪಂ, ಬಿಇಒ ಕಚೇರಿ ಸೋಮವಾರ ಆಯೋಜಿಸಿದ್ದ 2021-22ನೇ ಸಾಲಿನ ಪಢನಾ-ಲಿಖನಾ ಕಾರ್ಯಕ್ರಮದಡಿ ಸಂಪನ್ಮೂಲ ಶಿಕ್ಷಕರಿಗೆ ಎರಡು ದಿನದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

    ಕಲ್ಯಾಣ ಕರ್ನಾಟಕ ಭಾಗದ ರಾಯಚೂರು ಜಿಲ್ಲೆಯಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚುತ್ತಿಲ್ಲ. ತಾಲೂಕಿನಲ್ಲಿ ಸುಮಾರು 9 ಸಾವಿರ ಅನಕ್ಷರಸ್ಥರಿದ್ದು, ಅವರನ್ನು ಶಿಕ್ಷಣವಂತರನ್ನಾಗಿ ಮಾಡಿ ಮುಖ್ಯವಾಹಿನಿಗೆ ತರುವಲ್ಲಿ ಸಂಪನ್ಮೂಲ ಶಿಕ್ಷಕರು ಶ್ರಮಿಸಬೇಕಿದೆ. ಅನಕ್ಷರಸ್ಥರಿಗೆ ಶಿಕ್ಷಣ ನೀಡುವ ಕುರಿತು ಕಾರ್ಯಾಗಾರದಲ್ಲಿ ತರಬೇತಿ ನೀಡಲಾಗುತ್ತಿದ್ದು, ಇದರ ಮಹತ್ವ ಅರಿಯಬೇಕು. ಕಾರ್ಯಕ್ರಮ ಯಶಸ್ವಿಗೆ ಎಲ್ಲರೂ ಸಹಕಾರ ನೀಡಬೇಕೆಂದರು.

    ತಾಲೂಕು ಸಂಯೋಜಕರಾದ ಅಮರೇಗೌಡ, ರಾಮನಗೌಡ, ರಾಜಕುಮಾರ, ಅಬ್ದುಲ್ ರಹಿಮಾನ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts