More

    ಸಂಚಾರಕ್ಕೆ ಹಳೆಯ ಬಸ್‌ಪಾಸ್ ಪರಿಗಣಿಸಿ; ವಿದ್ಯಾರ್ಥಿಗಳ ಒತ್ತಾಯ


    ಸಾರಿಗೆ ಡಿಪೋ ವ್ಯವಸ್ಥಾಪಕ ಆದಪ್ಪಗೆ ಮನವಿ

    ಲಿಂಗಸುಗೂರು: ಕಾಲೇಜುಗಳು ಆರಂಭಗೊಂಡಿದ್ದು, ಕೂಡಲೇ ಎಲ್ಲ ವಿದ್ಯಾರ್ಥಿಗಳಿಗೆ ಬಸ್‌ಪಾಸ್ ವಿತರಿಸಬೇಕು ಇಲ್ಲದಿದ್ದರೆ ಹಳೆಯ ಪಾಸ್ ಮತ್ತು ಶುಲ್ಕ ಕಟ್ಟಿದ ರಸೀತಿಯನ್ನು ಮಾನ್ಯ ಮಾಡಬೇಕೆಂದು ಆಗ್ರಹಿಸಿ ಎಸ್‌ಎಫ್‌ಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.

    ತಾಲೂಕಾದ್ಯಂತ ಕಾಲೇಜುಗಳು ಆರಂಭಗೊಂಡು ಮೂರು ತಿಂಗಳು ಕಳೆದರೂ ಗ್ರಾಮೀಣ ಭಾಗದ ಎಲ್ಲ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಿಸುವಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಫಲವಾಗಿದೆ. ಇದರಿಂದ ನಿತ್ಯ ಕಾಲೇಜಿಗೆ ಬರುವ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ತೊಂದರೆ ಉಂಟಾಗಿ ಕಾಲೇಜಿಗೆ ಬರಲು ಹಿಂದೇಟು ಹಾಕುವಂತಾಗಿದೆ. ಅಲ್ಲದೆ, ಇವರ ಶಿಕ್ಷಣ ಕುಂಠಿತವಾಗುತ್ತಿದೆ. ಕೂಡಲೇ ಎಲ್ಲ ವಿದ್ಯಾರ್ಥಿಗಳಿಗೆ ಬಸ್‌ಪಾಸ್ ವಿತರಿಸಬೇಕು. ಇಲ್ಲದಿದ್ದರೆ ಹಳೆಯ ಬಸ್‌ಪಾಸ್‌ಗೆ ಅವಕಾಶ ಕಲ್ಪಿಸಬೇಕು. ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಸಮಯಕ್ಕೆ ಸರಿಯಾಗಿ ಸಾರಿಗೆ ಬಸ್‌ಗಳ ಸಂಚರಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಸಾರಿಗೆ ಡಿಪೋ ವ್ಯವಸ್ಥಾಪಕ ಆದಪ್ಪ ಕುಂಬಾರಗೆ ಮನವಿ ಸಲ್ಲಿಸಿದರು.

    ವಿದ್ಯಾರ್ಥಿಗಳಾದ ನಾಗರಾಜ, ಮಾನಮ್ಮ, ಅನಿತಾ, ಹುಲಿಗೆಮ್ಮ, ಶಿಲ್ಪಾ, ಪುಷ್ಪಾ ಸೇರಿದಂತೆ ನೂರಾರು ವಿದ್ಯಾರ್ಥಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts