More

    ಲಿಂಗರಾಜ ಕಾಲೇಜಿಗೆ ಅತ್ಯುತ್ತಮ ಎನ್‌ಸಿಸಿ ಘಟಕ ಪ್ರಶಸ್ತಿ

    ಬೆಳಗಾವಿ: ಬೆಂಗಳೂರಿನ ಕ್ರೈಸ್ತ ವಿಶ್ವವಿದ್ಯಾಲಯದಲ್ಲಿ ಈಚೆಗೆ ಏರ್ಪಡಿಸಿದ್ದ ಸಮಾರಂಭದಲ್ಲಿ ಕರ್ನಾಟಕ ಮತ್ತು ಗೋವಾ ಎನ್‌ಸಿಸಿ ನಿರ್ದೇಶನಾಲಯವು ಬೆಳಗಾವಿ ಕೆಎಲ್‌ಇ ಸಂಸ್ಥೆಯ ಲಿಂಗರಾಜ ಕಾಲೇಜಿಗೆ 2023-24ನೇ ಸಾಲಿನ ಅತ್ಯುತ್ತಮ ಎನ್‌ಸಿಸಿ ಘಟಕ ಪ್ರಶಸ್ತಿ ನೀಡಿ ಗೌರವಿಸಿದೆ.

    ಕಾಲೇಜಿನ ಎನ್‌ಸಿಸಿ ಘಟಕದ 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಜರುಗಿದ ವಿವಿಧ ಶಿಬಿರಗಳಲ್ಲಿ ಪಾಲ್ಗೊಂಡು ಪದಕ ಪಡೆದಿದ್ದಾರೆ. ಹಲವು ಎನ್‌ಸಿಸಿ ಕೆಡೆಟ್‌ಗಳು ಅಗ್ನಿವೀರ ಮೊದಲ್ಗೊಂಡು ಸಶಸ್ತ್ರಪಡೆಗೆ ಆಯ್ಕೆಯಾಗಿ ರಾಷ್ಟ್ರಸೇವೆಯಲ್ಲಿ ತೊಡಗಿದ್ದಾರೆ. ಲಿಂಗರಾಜ ಕಾಲೇಜಿನ ಎನ್‌ಸಿಸಿ ಘಟಕದ ಕೊಡುಗೆ ಪರಿಶೀಲಿಸಿದ ಕರ್ನಾಟಕ ಮತ್ತು ಗೋವಾ ಎನ್‌ಸಿಸಿ ನಿರ್ದೇಶನಾಲಯವು ಲಿಂಗರಾಜ ಕಾಲೇಜಿಗೆ ಅತ್ಯುತ್ತಮ ಎನ್‌ಸಿಸಿ ಘಟಕ ಪ್ರಶಸ್ತಿ ನೀಡಿ ಗೌರವಿಸಿದೆ.

    ಏರ್ ಕಮಾಂಡರ್ ಬಿ.ಎಸ್.ಕನ್ವರ್, ಉಸ್ತುವಾರಿ ನಿರ್ದೇಶಕ ಕರ್ನಲ್ ಬಸಂತ್‌ಸಿಂಗ್, ಲಿಂಗರಾಜ ಕಾಲೇಜಿನ ಎನ್‌ಸಿಸಿ ಅಧಿಕಾರಿ ಕ್ಯಾಪ್ಟನ್ ಡಾ.ಮಹೇಶ ಗುರನಗೌಡರ, ಪ್ರಾಧ್ಯಾಪಕ ಪ್ರೊ.ಸಿ.ಮಲ್ಲಣ್ಣ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಸಾಧನೆಗೆ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಎನ್‌ಸಿಸಿ ಬಟಾಲಿಯನ್ ಕಮಾಂಡರ್ ಕರ್ನಲ್ ಎಸ್.ದರ್ಶನ, ಕರ್ನಲ್ ಶಂಕರ ಯಾದವ್, ಕೆಎಲ್‌ಇ ಜಂಟಿಕಾರ್ಯದರ್ಶಿ ಡಾ.ಪ್ರಕಾಶ ಕಡಕೋಳ, ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ, ಪಿಯು ಪ್ರಾಚಾರ್ಯ ಗಿರಿಜಾ ಹಿರೇಮಠ, ಮೇಜರ್ ಕಲ್ಲಪ್ಪ ಪಾಟೀಲ ಹರ್ಷ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts