More

    ವಾಯುಮಾಲಿನ್ಯ ತಡೆಯಲು ದೀಪಗಳನ್ನು ಹಚ್ಚಿ

    ಶನಿವಾರಸಂತೆ: ಹೆಚ್ಚುತ್ತಿರುವ ವಾಯುಮಾಲಿನ್ಯ ದುಷ್ಪರಿಣಾಮ ತಡೆಯಲು ಪರಿಸರ ಸ್ನೇಹಿ ಪಟಾಕಿಯನ್ನು ಬಳಸುವಂತೆ ಸೋಮವಾರಪೇಟೆ ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ಜಿ.ಎಂ.ಹೇಮಂತ್ ಹೇಳಿದರು.


    ಮುಳ್ಳೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಕನಹಳ್ಳಿ ಸರ್ಕಾರಿ ಪ್ರೌಢ ಮತ್ತು ಹಿರಿಯ ಪ್ರಾಥಮಿಕ ಶಾಲೆ ಸಹಭಾಗಿತ್ವದಲ್ಲಿ ಶನಿವಾರ ಪರಿಸರ ಸ್ನೇಹಿ ಹಸಿರು ದೀಪಾವಳಿ ಹಾಗೂ ಮಕ್ಕಳ ದಿನಾಚರಣೆ ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, 125 ಡಿಸಿಬಲ್‌ಗಿಂತ ಕಡಿಮೆ ಶಬ್ಧ ಬರುವ ಹಾಗೂ ಗ್ರೀನ್ ಪ್ಲೇಯರ್ ವರ್ಕ್ಸ್ ಲೋಗೋ ಇರುವಂತಹ ಪಟಾಕಿಗಳು ಸ್ವಲ್ಪ ಮಟ್ಟಿಗೆ ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುತ್ತದೆ ಎಂದರು.


    ಮುಳ್ಳೂರು ಶಾಲೆ ಮುಖ್ಯ ಶಿಕ್ಷಕ ಸಿ.ಎಸ್.ಸತೀಶ್ ಮಾತನಾಡಿ, ಶಬ್ದಕಿಂತ ಬೆಳಕಿಗೆ ಹೆಚ್ಚಿನ ಮೌಲ್ಯ ಇರುವುದರಿಂದ ಪಟಾಕಿ ಹಚ್ಚುವ ಬದಲು ಜ್ಞಾನದ ಸಂಕೇತವಾದ ಕತ್ತಲಿನಿಂದ ಬೆಳಕಿನೆಡೆಗೆ ಸಾಗುವಂತಹ ಹಣತೆಯನ್ನು ಬೆಳಗಿಸುವ ಮೂಲಕ ದೀಪಾವಳಿಯನ್ನು ಸಂಭ್ರಮದಿಂದ ಆಚರಿಸೋಣ ಎಂದು ಸಲಹೆ ನೀಡಿದರು.


    ಅಂಕನಹಳ್ಳಿ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸಾವಿತ್ರಿ, ಶನಿವಾರಸಂತೆ ಕ್ಲಸ್ಟರ್ ಸಿಆರ್‌ಪಿ ಸಿ.ಕೆ.ದಿನೇಶ್, ಹಂಡ್ಲಿ ಕ್ಲಸ್ಟರ್ ಸಿಆರ್‌ಪಿ ಮನೋಹರ್, ಅಂಕನಹಳ್ಳಿ ಶಾಲಾ ಶಿಕ್ಷಕರಾದ ಶಿವಕುಮಾರ್, ದೇವರಾಜ್, ದಿವಾಕರ್, ಲತಾ ಮುಳ್ಳೂರು, ಅತಿಥಿ ಶಿಕ್ಷಕಿ ಎಂ.ಆರ್.ನವ್ಯಾ ಇದ್ದರು.


    ದೀಪಾವಳಿ ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳು ಹಣತೆಯನ್ನು ಹಚ್ಚುವ ಮೂಲಕ ಹಸಿರು ದೀಪಾವಳಿಯನ್ನು ಆಚರಿಸಿದರು. ನಂತರ ಮಕ್ಕಳ ದಿನಾಚರಣೆ ಪ್ರಯುಕ್ತ ಉಭಯ ಶಾಲಾ ವಿದ್ಯಾರ್ಥಿಗಳು ಪಕ್ಕದ ತ್ರಿವಳಿ ಜೈನ ಬಸದಿ ಕೇಂದ್ರದ ತಂಪಾದ ನೆರಳಿನಲ್ಲಿ ಆಟ ಆಡಿ ಸಂಭ್ರಮಪಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts