More

    ತಾಲ್ಲೂಕು ಆಡಳಿತ ಸೌಧದ ಮೇಲಂತಸ್ತಿಗೆ ಏರಲು ಅಂಗವಿಕಲರ ಹರಸಾಹಸ

    ದೇವನಹಳ್ಳಿ: ತಾಲ್ಲೂಕು ಆಡಳಿತದ ಸೌಧಕ್ಕೆ ಅಗತ್ಯ ಕೆಲಸಕ್ಕಾಗಿ ಬರುವ ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ ಮೇಲಂತಸ್ತಿಗೆ ಏರಲು ಸುಲಭವಾಗುವ ಲಿಫ್ಟ್ ಅಥವಾ ಇನ್ನಾವುದೇ ವ್ಯವಸ್ಥೆಯಿಲ್ಲದೆ, ತುಂಬಾ ತೊಂದರೆ ಅನುಭವಿಸುತ್ತಿರುವುದು ದೇವನಹಳ್ಳಿ ತಾಲ್ಲೂಕು ಆಡಳಿತ ಸೌಧದಲ್ಲಿ ಕಂಡುಬಂದಿದೆ.

    ರೇಷನ್ ಕಾರ್ಡ್ ಇತ್ಯಾದಿ ದಾಖಲೆಗಳಿಗಾಗಿ ಮೆಟ್ಟಿಲಿನ ಮೇಲೆ ಹತ್ತಲಾಗದಿದ್ದರೂ ಕಷ್ಟಪಟ್ಟು ಹರಸಾಹಸದಿಂದ ಹತ್ತಿಹೋಗಿ ಅಗತ್ಯ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿರುವ ದೃಶ್ಯಗಳು ಮನಕಲಕುತ್ತವೆ. ವಿಜಯಪುರದ ಧರ್ಮಪುರ ಕೃಷ್ಣಮೂರ್ತಿ ಹಾಗೂ ಯಲುವಳ್ಳಿಯ ನಂಜೇಗೌಡ ಎಂಬವರು ಶುಕ್ರವಾರ ಈ ದೃಶ್ಯಗಳಿಗೆ ಸಾಕ್ಷಿಯಾದರು.

    ಸರ್ಕಾರದ ಹಲವು ಸೌಲಭ್ಯಗಳನ್ನು, ಸೌಕರ್ಯಗಳನ್ನು ಅರ್ಹ ನಾಗರಿಕರಿಗೆ ಒದಗಿಸಿಕೊಡುವ ಕೇಂದ್ರವಾಗಿರುವ ತಾಲ್ಲೂಕು ಆಡಳಿತ ಸೌಧದಲ್ಲೇ ಸಂಚರಿಸಲು ಅಗತ್ಯವಾದ ಸೌಕರ್ಯ ಇಲ್ಲದಿರುವುದು ದುರಂತವಾಗಿದೆ.
    ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ೨೦೧೬ರಡಿ ಹಲವು ಸೌಕರ್ಯಗಳನ್ನು ನೀಡಬೇಕು. ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಡಿ ಇಂತಹ ಸೌಲಭ್ಯಗಳನ್ನೇಕೆ ಕಡೆಗಣಿಸಲಾಗಿದೆ ಎಂಬುದು ಪ್ರಶ್ನೆಯಾಗಿದೆ.

    ಲಿಫ್ಟ್ ಸೌಲಭ್ಯ ನೀಡಲು ಸಾಧ್ಯವಿಲ್ಲವೆಂದಾದರೆ ಅಂಗವಿಕಲರಿಗೆ, ಹಿರಿಯ ನಾಗರಿಕರಿಗೆ ಕೆಳ ಅಂತಸ್ತಿನಲ್ಲೇ ಎಲ್ಲಾ ಅಗತ್ಯ ಕೆಲಸಗಳನ್ನು ಮಾಡಿಸಿಕೊಳ್ಳಲು ಸೇವಾಕೇಂದ್ರಗಳನ್ನು ತೆರೆಯಬೇಕಲ್ಲವೇ?

    ಫೇಸ್​​ಬುಕ್​​ ಗೆಳತಿಗೆ ಸಿನಿಮಾ ನಟಿ ಮಾಡುವ ಆಮಿಷ: ಹಣ, ಚಿನ್ನಾಭರಣ ದೋಚಿದ್ದ ನಕಲಿ ಫೋಟೋಗ್ರಾಫರ್ ಬಂಧನ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts