More

    ಲಿಫ್ಟ್​​ ನಿರ್ವಹಣೆ ಕಡ್ಡಾಯಕ್ಕೆ ನೀತಿ ರೂಪಿಸಲಿ; ಖಾಸಗಿ ಕಂಪನಿ ಸರ್ವೆಯಲ್ಲಿ ಸಾರ್ವಜನಿಕರ ಆಗ್ರಹ

    ಬೆಂಗಳೂರು: ಅಪಾರ್ಟ್‌ಮೆಂಟ್ ಸೇರಿದಂತೆ ಎತ್ತರದ ಕಟ್ಟಡಗಳಲ್ಲಿನ ಮಹಡಿ ತಲುಪಲು ಬಳಸಲಾಗುವ ಲಿಫ್ಟ್​​ ನಿರ್ವಹಣೆಯನ್ನು ಕಡ್ಡಾಯಗೊಳಿಸುವ ನೀತಿಯೊಂದನ್ನು ರೂಪಿಸಬೇಕಿದೆ ಎಂಬ ಜನಾಭಿಪ್ರಾಯ ದೇಶಾದ್ಯಂತ ವ್ಯಕ್ತವಾಗಿದೆ.

    ಇತ್ತೀಚಿನ ದಿನಗಳಲ್ಲಿ ಸ್ವಂತ ಮನೆಗಳು ಸೇರಿದಂತೆ ವಸತಿ ಸಮುಚ್ಛಯಗಳಲ್ಲಿ ಲಿಫ್ಟ್​​ ಅಳವಡಿಕೆ ಹೆಚ್ಚುತ್ತಿದೆ. ಅದರಲ್ಲೂ ಬೃಹತ್ ಕಟ್ಟಡಗಳು, ಶಾಪಿಂಗ್ ಮಾಲ್, ಚಿತ್ರಮಂದಿರ ಸೇರಿದಂತೆ ವಸತಿ ಹಾಗೂ ವಸತಿಯೇತರ ಬಿಲ್ಡಿಂಗ್‌ಗಳಲ್ಲಿ ಹಲವು ಲಿಫ್ಟ್​​ಗಳು ಕಾರ್ಯಾಚರಣೆಯಲ್ಲಿವೆ. ಆದರೆ, ಒಮ್ಮೆ ಅಳವಡಿಕೆ ಬಳಿಕ ವಾರಂಟಿ ಅವಧಿ ಮುಗಿಯುತ್ತಿದ್ದಂತೆ ದುರಸ್ತಿ ಹಾಗೂ ನಿರ್ವಹಣೆ ಕಡೆಗಣಿಸಲಾಗುತ್ತದೆ. ನಿಯಮಿತವಾಗಿ ನಿರ್ವಹಣೆ ಮಾಡದ ಲಿಫ್ಟ್​​ ಗಳು ತಾಂತ್ರಿಕ ಕಾರಣಕ್ಕಾಗಿ ಆಗಾಗ್ಗೆ ಸ್ಥಗಿತಗೊಂಡು ಅದರಲ್ಲಿ ಜನರು ಸಿಕ್ಕಿಹಾಕಿಕೊಳ್ಳುವ ಕಹಿ ಘಟನೆಗಳು ಹೆಚ್ಚುತ್ತಿವೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಲಿಫ್ಟ್​​ ನಿರ್ವಹಣೆಗೆಂದೇ ಪ್ರತ್ಯೇಕ ನಿಯಮ ರೂಪಿಸಿ ಅದಬನ್ನು ಕಡ್ಡಾಯವಾಗಿ ಪರಿಪಾಲಿಸಲು ಸರ್ಕಾರ ಕಾನೂನು ರೂಪಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.

    ಪ್ರಸ್ತುತ ದೇಶದಲ್ಲಿ ಏಕರೂಪದ ಲಿಫ್ಟ್​​ ಕಾಯ್ದೆ ಜಾರಿಯಲ್ಲಿ ಇಲ್ಲ. ಬದಲಾಗಿ ಲಿಫ್ಟ್​​ ಹಾಗೂ ಎಸ್ಕಲೇಟರ್ಸ್‌ ವಿಷಯವನ್ನು ನ್ಯಾಷನಲ್ ಬಿಲ್ಡಿಂಗ್ ಕೋಡ್ ಆಫ್​​ ಇಂಡಿಯಾ ಅಡಿಯಲ್ಲಿ ನಿಯಂತ್ರಿಸಲಾಗುತ್ತಿದೆ. ಭಾರತೀಯ ಮಾಪನ ಬ್ಯೂರೊ (ಬಿಐಎಸ್) -2022ರ ನಿಯಮದನ್ವಯ ಸುರಕ್ಷತೆ ಹಾಗೂ ಹಳೆಯ ಲಿಫ್ಟ್​​ಗಳ ಮೇಲ್ದರ್ಜೆಗೇರಿಸುವ ವಿಷಯಗಳಲ್ಲಿ ನಿಯಮ ಪಾಲನೆ ಕಡ್ಡಾಯಗೊಳಿಸಲಾಗಿದೆ. ಆದರೆ, ನಿರ್ವಹಣೆ ವಿಷಯವನ್ನು ಕಟ್ಟಡಗಳಲ್ಲಿರುವ ವ್ಯವಸ್ಥಾಪಕರು ಹಾಗೂ ನಿವಾಸಿ ಸಂಘಗಳ ಜವಾಬ್ದಾರಿಗೆ ಬಿಟ್ಟಿರುವ ಕಾರಣ ಕೆಲವೊಮ್ಮೆ ಅವಘಡಗಳು ಸಂಭವಿಸಲು ಆಸ್ಪದ ನೀಡಿದೆ. ಸರ್ಕಾರ ಪರವಾನಗಿ ಹಾಗೂ ಪ್ರಮಾಣಪತ್ರ ಪಡೆಯಲು ಹೆಚ್ಚು ಮುತುವರ್ಜಿ ವಹಿಸುತ್ತದೆ. ನಿರ್ವಹಣೆ ವಿಷಯದಲ್ಲಿ ನಿಯಮ ಪಾಲನೆ ಆಗುತ್ತಿದೆ ಎಂಬುದನ್ನು ಖಾತರಿಪಡಿಸಿಕೊಳ್ಳಲು ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ ಎಂಬುದನ್ನು ಲಿಫ್ಟ್​​ ತಯಾರಿಕೆ ಹಾಗೂ ಸರಬರಾಜುದಾರರು ಪ್ರತಿಕ್ರಿಯಿಸಿದ್ದಾರೆ.

    ಇತ್ತೀಚಿಗೆ ಖಾಸಗಿ ಕಂಪನಿಯೊಂದು ಕರ್ನಾಟಕವೂ ಸೇರಿದಂತೆ ದೇಶದ 329 ಜಿಲ್ಲೆಗಳ ನಗರ, ಅರೆನಗರ ಹಾಗೂ ಗ್ರಾಮೀಣ ಪ್ರದೇಶ ಒಳಗೊಂಡಂತೆ ನಡೆಸಿದ ಸರ್ವೆಯಲ್ಲಿ ಈ ಅಂಶ ವ್ಯಕ್ತವಾಗಿದೆ. ಸರ್ವೆಗೆ ಒಳಪಡಿಸಿದ 42 ಸಾವಿರ ಮಂದಿಯಲ್ಲಿ ಶೇ.76 ಮಂದಿ ಲಿಫ್ಟ್​​ ನಿರ್ವಹಣೆಗೆ ಪ್ರಥಮ ಆದ್ಯತೆ ನೀಡಬೇಕು. ಕೇವಲ ಕಾಟಾಚಾರಕ್ಕಾಗಿ ನಿರ್ವಹಣೆ ಮಾಡದೆ ಜನರ ಸುರಕ್ಷತೆ ಕ್ರಮಗಳನ್ನು ಒಳಗೊಂಡ ಸ್ಪಷ್ಟ ನಿಯಮಾವಳಿ ರೂಪಿಸಿ ಅದನ್ನು ಕಡ್ಡಾಯವಾಗಿ ಪರಿಪಾಲಿಸುವ ಕಾನೂನು ತರಬೇಕಿದೆ ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

    3ನೇ ವ್ಯಕ್ತಿಗಳಿಂದ ನಿರ್ವಹಣೆ ಸಾಧುವೇ?:

    ಕಟ್ಟಡಗಳಲ್ಲಿ ಅವಳಡಿಸಲಾಗುವ ಲಿಫ್ಟ್​​ಗಳನ್ನು ಅವುಗಳ ತಯಾರಕರು ಅಥವಾ ಸರಬರಾಜುದಾರರು ಕೆಲ ವರ್ಷಗಳ ಮಟ್ಟಿಗೆ ನಿರ್ವಹಣೆ ಮಾಡುವುದುಂಟು. ಹೆಚ್ಚಿನ ಲ್‌ಟಿಗಳು ಅಳವಡಿಕೆಯಾದ ಕೆಲ ವರ್ಷದ ಬಳಿಕ ಖಾಸಗಿಯವರಿಗೆ ಗುತ್ತಿಗೆ ನೀಡುವ ಪರಿಪಾಠ ಇದೆ. ಇನ್ನೂ ಕೆಲವೆಡೆ 3ನೇ ವ್ಯಕ್ತಿಯಿಂದ ಉಪ ಗುತ್ತಿಗೆ ನೀಡಿ ನಿರ್ವಹಣೆ ಮಾಡಿಸಲಾಗುತ್ತದೆ. ಅಪಾರ್ಟ್‌ಮೆಂಟ್ ಹಾಗೂ ಖಾಸಗಿ ಕಂಪನಿಗಳಲ್ಲಿ ಇಂತಹ ಪದ್ಧತಿ ಇದೆ. ಸರ್ವೆಯಲ್ಲಿ ಮಾಹಿತಿ ಸಂಗ್ರಹಿಸಿರುವಂತೆ ಶೇ.46 ಕಟ್ಟಡಗಳಲ್ಲಿ ಲಿಫ್ಟ್​​ ತಯಾರಕರಿಂದ ನಿರ್ವಹಣೆ ಮಾಡಿಸಲಾಗುತ್ತಿದೆ. ಶೇ.42 ಕಟ್ಟಡಗಳಲ್ಲಿ 3ನೇ ವ್ಯಕ್ತಿಗಳಿಂದ ಹಾಗೂ ಶೇ.7 ಕಟ್ಟಡಗಳಲ್ಲಿ ನಿವಾಸಿಗಳ ಸಂಘದ ಸಿಬ್ಬಂದಿ ಮೊರೆ ಹೋಗಲಾಗಿದೆ. ಉಳಿದ ಶೇ.5 ಕಟ್ಟಡಗಳಲ್ಲಿ ಲಿಫ್ಟ್​​ ಕೆಟ್ಟುಹೋಗುವವರೆಗೂ ನಿರ್ವಹಣೆಯನ್ನೇ ಮಾಡುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts