ಬಿರಿಯಾನಿ ರುಚಿಯ ಉಪ್ಪಿನಕಾಯಿ ಬಗ್ಗೆ ಎಂದಾದರೂ ಕೇಳಿದ್ದೀರಾ? ಇದರ ವಿಶೇಷತೆ ಏನು ಗೊತ್ತಾ? Biryani Pickle

ಖದೀಮ್ ಆಚಾರ್ ಘರ್ ಅಂಗಡಿ 1954ರಲ್ಲಿ ದಿನಸಿ ಅಂಗಡಿಯಾಗಿ ಆರಂಭವಾಯಿತು. ಆರಂಭದಲ್ಲಿ ಉಪ್ಪಿನಕಾಯಿಯನ್ನು ಹೆಚ್ಚುವರಿ ಉತ್ಪನ್ನವಾಗಿ ಮಾರಾಟ ಮಾಡಲಾಗುತ್ತಿತ್ತು. ಆದರೆ, ಶೀಘ್ರದಲ್ಲೇ ಅದು ಅಂಗಡಿಯ ಜನಪ್ರಿಯ ಉತ್ಪನ್ನಗಳಲ್ಲಿ ಒಂದಾಯಿತು.
Biryani Pickle
ಬಿರಿಯಾನಿ ಉಪ್ಪಿನಕಾಯಿ
Published on: 

Biryani Pickle : ಭಾರತೀಯ ಅಡುಗೆಯಲ್ಲಿ ಉಪ್ಪಿನಕಾಯಿಗೆ ವಿಶೇಷ ಸ್ಥಾನವಿದೆ. ಮಾವು, ನಿಂಬೆ ಸೇರಿದಂತೆ ಹಲವು ಬಗೆಯ ಉಪ್ಪಿನಕಾಯಿಗಳನ್ನು ನಾವು ಸಾಮಾನ್ಯವಾಗಿ ನೋಡಿರುತ್ತೇವೆ ಹಾಗೂ ತಿಂದಿರುತ್ತೇವೆ. ಆದರೆ, ಬಿರಿಯಾನಿ ಫ್ಲೇವರ್‌ನ ಉಪ್ಪಿನಕಾಯಿ ಬಗ್ಗೆ ಎಂದಾದರೂ ಕೇಳಿದ್ದೀರಾ? ಹೈದರಾಬಾದ್‌ನ ಅಂಗಡಿಯೊಂದು ಇಂತಹ ವಿಶಿಷ್ಟ ಉಪ್ಪಿನಕಾಯಿಯನ್ನು ಗ್ರಾಹಕರಿಗೆ ದಶಕಗಳಿಂದ ಉಣಬಡಿಸುತ್ತಿದೆ. ಹೈದರಾಬಾದ್‌ನ ಮುರ್ಗಿ ಚೌಕ್‌ನಲ್ಲಿರುವ ಖದೀಮ್ ಆಚಾರ್ ಘರ್ 16 ಬಗೆಯ ಉಪ್ಪಿನಕಾಯಿಗಳನ್ನು ಮಾರಾಟ ಮಾಡುತ್ತದೆ. ಅವುಗಳಲ್ಲಿ ಬಿರಿಯಾನಿ ಫ್ಲೇವರ್‌ನ ಉಪ್ಪಿನಕಾಯಿಯೂ ವಿಶೇಷವಾಗಿದೆ.

ಬಿರಿಯಾನಿ ಫ್ಲೇವರ್‌ನ ಉಪ್ಪಿನಕಾಯಿ

ಖದೀಮ್ ಆಚಾರ್ ಘರ್ ಅಂಗಡಿ 1954ರಲ್ಲಿ ದಿನಸಿ ಅಂಗಡಿಯಾಗಿ ಆರಂಭವಾಯಿತು. ಆರಂಭದಲ್ಲಿ ಉಪ್ಪಿನಕಾಯಿಯನ್ನು ಹೆಚ್ಚುವರಿ ಉತ್ಪನ್ನವಾಗಿ ಮಾರಾಟ ಮಾಡಲಾಗುತ್ತಿತ್ತು. ಆದರೆ, ಶೀಘ್ರದಲ್ಲೇ ಅದು ಅಂಗಡಿಯ ಜನಪ್ರಿಯ ಉತ್ಪನ್ನಗಳಲ್ಲಿ ಒಂದಾಯಿತು. ಬಿರಿಯಾನಿ ಉಪ್ಪಿನಕಾಯಿಯನ್ನು ಕೆಲವು ವರ್ಷಗಳ ಹಿಂದಷ್ಟೇ ಪರಿಚಯಿಸಲಾಯಿತು. ಹೈದರಾಬಾದಿ ಬಿರಿಯಾನಿಯ ಮಸಾಲೆಯುಕ್ತ ಮತ್ತು ರುಚಿಕರವಾದ ಸ್ವಾದದಿಂದ ಪ್ರೇರಣೆ ಪಡೆದು ಇದನ್ನು ತಯಾರಿಸಲಾಗಿದೆ.

Also Read
ಒಂದೊಂದೇ ಗಡಿ ದಾಟುತ್ತಿದೆ ನಮ್ಮ ಭೂಮಿ! 9ರಲ್ಲಿ 7 ಮಿತಿ ಮೀರಿದ್ದೇಕೆ? ವಿಜ್ಞಾನಿಗಳ ಹೊಸ ಎಚ್ಚರಿಕೆ ಏನು..? Earth
Biryani Pickle

ಮನೆಯ ರುಚಿಯ ಅನುಭವ

ಹೈದರಾಬಾದಿ ಬಿರಿಯಾನಿಯ ರುಚಿಯನ್ನು ಉಪ್ಪಿನಕಾಯಿ ಮೂಲಕ ಮರುಸೃಷ್ಟಿಸುವುದು ಕುಟುಂಬದ ಉದ್ದೇಶವಾಗಿತ್ತು. ಅನ್ನದೊಂದಿಗೆ ಈ ಉಪ್ಪಿನಕಾಯಿಯನ್ನು ಬೆರೆಸಿ ತಿಂದಾಗ ವಿದೇಶದಲ್ಲಿರುವವರಿಗೂ ಮನೆಯ ರುಚಿಯ ಅನುಭವವಾಗಬೇಕು ಎಂಬ ಉದ್ದೇಶ ಇದರ ಹಿಂದಿತ್ತು. ಸರಿಯಾದ ರುಚಿ ಮತ್ತು ಹದವನ್ನು ಪಡೆಯಲು ಸುಮಾರು ಎರಡು ತಿಂಗಳ ಕಾಲ ಪ್ರಯೋಗ ನಡೆಸಲಾಗಿತ್ತು. ಈ ಉಪ್ಪಿನಕಾಯಿಯಲ್ಲಿ 20ಕ್ಕೂ ಹೆಚ್ಚು ಪದಾರ್ಥಗಳನ್ನು ಬಳಸಲಾಗುತ್ತದೆ. ಲವಂಗ, ಬಿರಿಸ್ತಾ ಫ್ರೈಡ್ ಈರುಳ್ಳಿ, ಏಲಕ್ಕಿ, ಗೋಡಂಬಿ ಮತ್ತು ದಾಲ್ಚಿನ್ನಿಯಂತಹ ಮಸಾಲೆಗಳನ್ನು ಇದರಲ್ಲಿ ಬಳಸಲಾಗುತ್ತದೆ ಎಂದು ಅಂಗಡಿ ಮಾಲೀಕ ಶೈಕ್ ಹುಜೈಫಾ ಅಲ್ ಅಮೂದಿ ಅವರು ಟೈಮ್​ ಔಟ್​ಗೆ ತಿಳಿಸಿದ್ದಾರೆ.

ಸಸ್ಯಾಹಾರಿ ಉಪ್ಪಿನಕಾಯಿ

ಬಿರಿಯಾನಿಯಿಂದ ಪ್ರೇರಣೆ ಪಡೆದಿದ್ದರೂ ಈ ಉಪ್ಪಿನಕಾಯಿ ಸಂಪೂರ್ಣ ಸಸ್ಯಾಹಾರಿ. ಖದೀಮ್ ಆಚಾರ್ ಘರ್ ತನ್ನ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ, ಇದು ಬಿರಿಯಾನಿಯ ರುಚಿಯನ್ನು ದೈನಂದಿನ ಊಟಕ್ಕೆ ಹೊಂದುವ ರೀತಿಯಲ್ಲಿ ಮರು ರೂಪಿಸಿದ ಉಪ್ಪಿನಕಾಯಿ ಎಂದು ವಿವರಿಸಿದೆ.

ಉಪ್ಪಿನಕಾಯಿ ವ್ಯಾಪಾರ ಹೇಗಿದೆ?

ಸಸ್ಯಾಹಾರಿ ಉಪ್ಪಿನಕಾಯಿಗಳನ್ನು ವಾರಕ್ಕೆ ಎರಡು ಬಾರಿ ತಾಜಾವಾಗಿ ತಯಾರಿಸಲಾಗುತ್ತದೆ. ಮಾಂಸಾಹಾರಿ ಉಪ್ಪಿನಕಾಯಿಗಳನ್ನು ಕೆಲವು ದಿನಗಳಿಗೊಮ್ಮೆ ಹೊಸದಾಗಿ ಸಿದ್ಧಪಡಿಸಲಾಗುತ್ತದೆ. ರಜಾ ದಿನಗಳಲ್ಲಿ ಅಂಗಡಿಯಲ್ಲಿ ಪ್ರತಿದಿನ ಹತ್ತಾರು ಕಿಲೋಗಳಷ್ಟು ಮಾಂಸಾಹಾರಿ ಉಪ್ಪಿನಕಾಯಿ ಮಾರಾಟವಾಗುತ್ತದೆ ಎಂದು ವರದಿಯಾಗಿದೆ. ಅಂಗಡಿ ಇಂದಿಗೂ ಕುಟುಂಬದವರಿಂದಲೇ ನಡೆಯುತ್ತಿದೆ. ಹುಜೈಫಾ ಮತ್ತು ಅವರ ಇಬ್ಬರು ಸಹೋದರರು ಸೇರಿ ಉಪ್ಪಿನಕಾಯಿಗಳನ್ನು ತಯಾರಿಸುತ್ತಾರೆ. ಅಂಗಡಿಯ ಸ್ಥಳ ಬದಲಾಗಿಲ್ಲ. ಆದರೆ ಕಾಲಕ್ಕೆ ತಕ್ಕಂತೆ ವ್ಯಾಪಾರದಲ್ಲಿ ಬದಲಾವಣೆ ಮಾಡಲಾಗಿದೆ. ಮನೆಯಲ್ಲೇ ತಯಾರಿಸುವ ಉಪ್ಪಿನಕಾಯಿಗಳನ್ನು ಈಗ ವ್ಯಾಕ್ಯೂಮ್-ಸೀಲ್ ಪ್ಯಾಕೆಟ್‌ಗಳಲ್ಲಿ ಕಳುಹಿಸಲಾಗುತ್ತಿದೆ. ಆರ್ಡರ್‌ಗಳಿಗಾಗಿ ವೆಬ್‌ಸೈಟ್ ಮತ್ತು ಇನ್‌ಸ್ಟಾಗ್ರಾಂ ಪುಟವೂ ಇದೆ.

Also Read
ಬರ್ತಿದೆ ವಿಲನ್​ ಗಾಡ್ಜಿಲ್ಲಾ... ಇದು ಯುದ್ಧಕ್ಕಿಂತಲೂ ಭೀಕರ, ಬರದ ಜತೆ ತಟ್ಟಲಿದೆ ಬೆಲೆ ಏರಿಕೆ ಬಿಸಿ, ಡೇಂಜರ್​ ಡಿಸೆಂಬರ್..! Godzilla El Niño
Biryani Pickle

ಖದೀಮ್ ಆಚಾರ್ ಘರ್ ಇದೀಗ ಗ್ರಾಹಕರಿಗಾಗಿ ಉಪ್ಪಿನಕಾಯಿ ಜತೆಗೆ ವಿವಿಧ ಬಗೆಯ ಪಾಪಡ್‌ಗಳನ್ನೂ ಮಾರಾಟ ಮಾಡಲಾಗುತ್ತಿದೆ. ಬಿರಿಯಾನಿ ಪ್ರಿಯರಿಗೆ ಇದು ಹೊಸ ರುಚಿ, ಬಿರಿಯಾನಿಯ ಘಮ, ಮಸಾಲೆ ಮತ್ತು ರುಚಿಯನ್ನು ಉಪ್ಪಿನಕಾಯಿಯ ರೂಪದಲ್ಲಿ ಸವಿಯುವ ಪ್ರಯತ್ನ ಇದೀಗ ಆಹಾರಪ್ರಿಯರಲ್ಲಿ ಕುತೂಹಲ ಮೂಡಿಸಿದೆ. ಮಾವಿನಕಾಯಿ, ನಿಂಬೆ ಉಪ್ಪಿನಕಾಯಿ ನಡುವೆ ಬಿರಿಯಾನಿ ಉಪ್ಪಿನಕಾಯಿ ಹೈದರಾಬಾದ್‌ನ ಈ 70 ವರ್ಷಗಳ ಹಳೆಯ ಅಂಗಡಿಯ ವಿಶೇಷತೆ ನಿಜಕ್ಕೂ ವಿಭಿನ್ನವಾಗಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net