More

    ಮುಂಬೈನಲ್ಲಿ ನನ್ನ ಜೀವಕ್ಕೆ ಅಪಾಯವಿದೆ; ಹೈಕೋರ್ಟ್ ಮೊರೆ ಹೋದ ರವಿ ಪೂಜಾರಿ

    ಬೆಂಗಳೂರು: ಶಬನಮ್ ಡೆವಲಪರ್ಸ್ ಉದ್ಯೋಗಿಗಳ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಗ್ಯಾಂಗ್‌ಸ್ಟರ್ ರವಿ ಪೂಜಾರಿ ತನ್ನನ್ನು ಮುಂಬೈ ಪೊಲೀಸರ ವಶಕ್ಕೆ ನೀಡಿ ಸೆಷನ್ಸ್ ಕೋರ್ಟ್ ಹೊರಡಿಸಿರುವ ಆದೇಶ ರದ್ದುಕೋರಿ ಹೈಕೋರ್ಟ್ ಮೊರೆ ಹೋಗಿದ್ದಾನೆ.

    ಮುಂಬೈನಲ್ಲಿ ತನಗೆ ಸಾಕಷ್ಟು ವಿರೋಧಿಗಳು, ಶತ್ರುಗಳಿದ್ದು ಅವರಿಂದ ತನ್ನ ಜೀವಕ್ಕೆ ಅಪಾಯವಿದೆ. ಕರ್ನಾಟಕದ ಪ್ರಕರಣಕ್ಕಾಗಿ ಮಾತ್ರವೇ ತನ್ನನ್ನು ಹಸ್ತಾಂತರ ಮಾಡಲಾಗಿದೆ. ಆದರೆ, ಮುಂಬೈ ಪೊಲೀಸರು ಬೇರೆ ಪ್ರಕರಣದಲ್ಲಿ ತಮ್ಮ ಕಸ್ಟಡಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅಗತ್ಯವಿದ್ದರೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಲು ಅವಕಾಶವಿದೆ. ಆದ್ದರಿಂದ, ತನ್ನನ್ನು ಮುಂಬೈ ಪೊಲೀಸರ ವಶಕ್ಕೆ ಒಪ್ಪಿಸಿ ನ.13ರಂದು ಬೆಂಗಳೂರಿನ 62ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಹೊರಡಿಸಿರುವ ಆದೇಶ ರದ್ದುಪಡಿಸಬೇಕೆಂದು ರವಿ ಪೂಜಾರಿ ಮನವಿ ಮಾಡಿದ್ದಾನೆ.

    ಒಂದು ವೇಳೆ, ಈ ಅರ್ಜಿ ಪುರಸ್ಕರಿಸಿ ವಿಚಾರಣಾ ನ್ಯಾಯಾಲಯದ ಆದೇಶ ರದ್ದುಪಡಿಸದಿದ್ದರೆ, ಶೀಘ್ರ ವಿಚಾರಣೆ ಪೂರ್ಣಗೊಳಿಸಲು, ಮುಂಬೈಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ ತನಗೆ ಸೂಕ್ತ ಭದ್ರತೆ ಒದಗಿಸಲು ಹಾಗೂ ಸುರಕ್ಷಿತವಾಗಿ ಬೆಂಗಳೂರು ಕಾರಾಗೃಹಕ್ಕೆ ಕರೆತರಲು ಮುಂಬೈ ಪೊಲೀಸರಿಗೆ ನಿರ್ದೇಶಿಸಬೇಕು ಎಂದೂ ರವಿ ಪೂಜಾರಿ ತನ್ನ ಅರ್ಜಿಯಲ್ಲಿ ಕೋರಿದ್ದಾನೆ. ಅರ್ಜಿ ಇನ್ನಷ್ಟೇ ಹೈಕೋರ್ಟ್ ಮುಂದೆ ವಿಚಾರಣೆಗೆ ಬರಬೇಕಿದೆ.

    ರಾತ್ರೋರಾತ್ರಿ ಮನೆಯಲ್ಲೇ ಸೊಸೆಯನ್ನು ಕೊಚ್ಚಿ ಹಾಕಿದ ಮಗ! ಇದರ ಬೆನ್ನಲ್ಲೇ ಮತ್ತೊಂದು ಆಘಾತ

    ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ರದ್ದು! ಇದು ಹೈಕೋರ್ಟ್​ ಆದೇಶ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts