More

    ಪ್ರಾಧ್ಯಾಪಕ ವೃತ್ತಿಯಿಂದ ಹಿರಿತೆರೆಗೆ … ಲೋಹಿತಾಶ್ವ ನಡೆದ ಬಂದ ಹಾದಿ …

    ಬೆಂಗಳೂರು: ಮಂಗಳವಾರ ಸಂಜೆ ನಿಧನರಾದ ಹಿರಿಯ ನಟ ಲೋಹಿತಾಶ್ವ ಅವರನ್ನು ಕನ್ನಡ ಚಿತ್ರರಂಗಕ್ಕೆ ಪರಿಚಯಿಸಿದವರು ನಟ-ನಿರ್ದೇಶಕ ಶಂಕರ್​ ನಾಗ್​ ಎಂಬುದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. ನಾಟಕಗಳಲ್ಲಿ ಲೋಹಿತಾಶ್ವ ಅವರ ಅಭಿನಯವನ್ನು ನೋಡಿ ಮೆಚ್ಚಿದ್ದ ಶಂಕರ್​ ನಾಗ್​, ತಮ್ಮ ‘ಗೀತಾ’ ಚಿತ್ರದಲ್ಲಿ ಅವರಿಗೊಂದು ಪ್ರಮುಖ ಪಾತ್ರ ನೀಡಿದ್ದರು. ಈ ಚಿತ್ರದಲ್ಲಿ ಡಾಕ್ಟರ್​ ಪಾತ್ರ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಲೋಹಿತಾಶ್ವ ಮತ್ತೆಂದೂ ಹಿಂದಿರುಗಿ ನೋಡಲೇ ಇಲ್ಲ. ಅಲ್ಲಿಂದ ಮುಂದೆ ಎರಡು ದಶಕಗಳ ಕಾಲ ಅವರು ಕನ್ನಡ ಚಿತ್ರರಂಗದ ಬಹುಬೇಡಿಕೆಯ ಮತ್ತು ಜನಪ್ರಿಯ ನಟರಾಗಿ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

    ಇದನ್ನೂ ಓದಿ: ‘ಕಂಬ್ಳಿಹುಳ’ ಸಿನಿಮಾ ನೋಡಿ ಪ್ರೇಕ್ಷಕರಿಗೆ ಹೊಸ ಆಫರ್ ಕೊಟ್ಟ ‘ಸಿಂಪಲ್’ ಸುನಿ

    ತುಮಕೂರಿನ ತೊಂಡಗೆರೆ ಮೂಲದ ಲೋಹಿತಾಶ್ವ ಮೂಲತಃ ರೈತ ಕುಟುಂಬದಿಂದ ಬಂದವರು. ಶಾಲೆ, ಕಾಲೇಜಿನಲ್ಲಿದ್ದಾಗಲೇ ಅನೇಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಅವರು, 1960ರಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ ನಟನೆಗೆ ಬಂಗಾರದ ಪದಕ ಪಡೆದುಕೊಂಡವರು. ಕೆಲವು ವರ್ಷಗಳ ಕಾಲ ಓದನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ಬೇಸಾಯದಲ್ಲಿ ತೊಡಗಿಸಿಕೊಂಡಿದ್ದವು. ನಂತರ ಇಂಗ್ಲೀಷ್‌ನಲ್ಲಿ ಎಂ.ಎ ಮಾಡಿ , 1969ರಲ್ಲಿ ಸರ್ಕಾರಿ ಕಾಲೇಜಿನಲ್ಲಿ ಇಂಗ್ಲೀಷ್‌ ಪ್ರಾಧ್ಯಾಪಕರಾದರು. ಮೇಷ್ಟ್ರಾಗಿದ್ದಾಗ ಪಾಠ ಹೇಳುವುದರ ಜತೆಗೆ, ವೈಜ್ಞಾನಿಕವಾಗಿ ಆಲೋಚನೆ ಮಾಡುತ್ತಾ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದ ಅವರು, ಸಮುದಾಯ ತಂಡದ ಜತೆ ನಿಕಟ ಸಂಪರ್ಕ ಹೊಂದಿದ್ದರು. ತುಮಕೂರಿನಲ್ಲಿ ಸಮುದಾಯ ಪ್ರಾರಂಭ ಮಾಡಿ, ಪ್ರದರ್ಶನ ಕಲೆಗಳ ಮುಖಾಂತರ ವೈಜ್ಞಾನಿಕ ವಿಚಾರಧಾರೆಯನ್ನು ಜನರಿಗೆ ತಲುಪಸಿವು ಕೆಲಸ ಮಾಡುತ್ತಾ ಬಂದವರು. ಆ ನಂತರ ಬೆಂಗಳೂರಿಗೆ ಬಂದ ಅವರು ಇಲ್ಲಿನ ರಂಗಭೂಮಿಯಲ್ಲಿ ಸಕ್ರಿಯರಾಗಿದ್ದರು. ‘ಗೀತಾ’ ಚಿತ್ರದ ನಂತರ ವೃತ್ತಿ ಜತೆಗೆ ಅಭಿನಯ ಪ್ರವೃತ್ತಿಯಾಗಿ ಬೆಳೆಯಿತು.

    ಹೀಗೆ ಕನ್ನಡ ಚಿತ್ರರಂಗದಲ್ಲಿ ಬಿಜಿ ನಟರಾಗಿದ್ದ ಅವರು, ಒಂದು ಹಂತದಲ್ಲಿ ರಂಗಭೂಮಿ ಮತ್ತು ಹಿರಿತೆರೆ ಎರಡರಿಂದಲೂ ದೂರಾಗಿದ್ದರು. ಕೆಲವು ವರ್ಷಗಳಿಂದ ಅವರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಂತೆ, ಅವರಿಗೆ ತಂಡ ಚಟುವಟಿಕೆಗಳಲ್ಲಿ ನಂಬಿಕೆ ಕಡಿಮೆಯಾಗಿತ್ತಂತೆ. ಇನ್ನು, ಚಿತ್ರಗಳಲ್ಲಿ ಅವಕಾಶಗಳಿಗೇನೂ ಕಡಿಮೆ ಇರದಿದ್ದರೂ, ಅಲ್ಲಿನ ವ್ಯವಸ್ಥೆ ನೋಡಿದರೆ ಕೆಲಸ ಮಾಡುವುದಕ್ಕೆ ಮನಸ್ಸು ಬರುವುದಿಲ್ಲ ಎಂದು ಬೇಸರದಿಂದಲೇ ಹೇಳಿಕೊಂಡಿದ್ದರು. ನಾಯಕ-ನಾಯಕಿ ಬಿಟ್ಟರೆ ಮಿಕ್ಕವರಿಗೆ ಬೆಲೆ ಇಲ್ಲ ಮತ್ತು ಬೆಲೆ ಇಲ್ಲದ ಕಡೆ ನಾನಿರುವುದಕ್ಕೆ ಇಷ್ಟ ಪಡುವುದಿಲ್ಲ ಎಂದು ಅವರು ಹೇಳಿಕೊಂಡಿದ್ದರು.

    ಇದನ್ನೂ ಓದಿ: ಭಾರತದ ಅತೀ ದೊಡ್ಡ ಪ್ಯಾನ್​ ಇಂಡಿಯಾ ಚಿತ್ರವನ್ನು ನಿರ್ದೇಶಿಸುತ್ತಾರಂತೆ ಶಂಕರ್​!

    ಲೋಹಿತಾಶ್ವ ಅವರು ಸಾಹಿತಿಯಾಗಿಯೂ ಗುರುತಿಸಿಕೊಡವರು. ‘ಮುಖ್ಯಮಂತ್ರಿ’, ‘ಸಂತೆಯಲ್ಲಿ ನಿಂತ ಕಬೀರ’, ‘ಡಾ. ತಿಪ್ಪೇಶಿ’, ‘ಹಾನುಷ್‌’, ‘ಬಣ್ಣದ ತಗಡಿನ ತುತ್ತೂರಿ’ ಮುಂತಾದ ನಾಟಕಗಳು ಮತ್ತು ಅನೇಕ ಭಾಷಾಂತರ, ರೂಪಾಂತರಗಳು ಪ್ರಕಟವಾಗಿವೆ. ಇದಲ್ಲದೆ, ‘ಚಾಪ್ಲಿನ್‌ – ಕಿರು ಪರಿಚಯ’, ‘ಸಲ್ಲಾಪ – ಕಿರು ಹರಟೆಗಳು’ ಕೃತಿಗಳನ್ನು ಅವರು ಸಂಪಾದಿಸಿದ್ದಾರೆ. ಸಾಹಿತ್ಯ ಅಕಾಡೆಮಿಯ ವತಿಯಿಂದ ಲಕ್ಷ್ಮೀಪತಿ ಕೋಲಾರ ಸಂಪಾದಿಸಿದ ಕವನ ಸಂಕಲನದಲ್ಲಿ ‘ಅಮ್ಮ ಸಾಯುವುದಿಲ್ಲ’ ಎಂಬ ಅವರ ಕವನ ಸಹ ಪ್ರಕಟವಾಗಿದೆ.

    ಹಿರಿಯ ನಟ ಟಿ.ಎಸ್​.ಲೋಹಿತಾಶ್ವ ನಿಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts