More

    ಪರರ ಸೇವೆ ಮಾಡಿದರೆ ಜೀವನ ಸಾರ್ಥಕ

    ದಾಂಡೇಲಿ: ಸಮಾಜಕ್ಕೆ ಕೊಡುಗೆ ನೀಡುವ ಉದ್ದೇಶದಿಂದ ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಜೀವನದಲ್ಲಿ ಪರರಿಗಾಗಿ ಸೇವೆ ಮಾಡಿ ಜೀವನ ಸಾರ್ಥಕಗೊಳಿಸುವ ಉದ್ದೇಶ ಲಯನ್ಸ್ ಸದಸ್ಯರದ್ದಾಗಿದೆ ಎಂದು ಲಯನ್ಸ್ ಮಾಜಿ ಪ್ರಾಂತಪಾಲ ಲಯನ್ ಎಂ.ಜೆ.ಎಫ್ ರವಿ ಹೆಗಡೆ ಹೂವಿನಮನೆ ಹೇಳಿದರು.ಸಮೀಪ ನದಿಮನೆ ಹೋಂಸ್ಟೇದಲ್ಲಿ ಭಾನುವಾರ ಆಯೋಜಿಸಿದ್ದ ಲಯನ್ಸ್​ನ ಜಿಲ್ಲೆಯ 7ನೇ ವಿಭಾಗದ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.

    ಮಾಜಿ ಪ್ರಾಂತಪಾಲ ಹರ್ಷ ದೇಸಾಯಿ ಮಾತನಾಡಿ, ಸಮಾಜ ಸೇವೆಗಾಗಿ ಲಯನ್ಸ್ ಸಂಸ್ಥೆ ನೀಡುವ ಅವಕಾಶಗಳನ್ನು ಪ್ರತಿಯೊಬ್ಬ ಸದಸ್ಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

    ನಿಕಟಪೂರ್ವ ಪ್ರಾಂತಪಾಲ ಸುಗಲಾ ಯಲಮೇಳಿ ಮಾತನಾಡಿ, ಲಯನ್ಸ್ ಸಂಸ್ಥೆ ಸದಸ್ಯರು ಹಾಗೂ ಯುವ ಲಿಯೋ ಕ್ಲಬ್ ಸದಸ್ಯರು ಕ್ರೀಯಾಶೀಲರಾಗಿ ಸೇವೆ ಸಲ್ಲಿಸಬೇಕು ಎಂದರು.

    ವಲಯದ ಚೇರ್ಮನ್ ಅರುಣಕುಮಾರ ಜೊತವಾಲ ಅಧ್ಯಕ್ಷತೆ ವಹಿಸಿದ್ದರು. ಉದಯ ವಡವಿ, ಗಿರಿಧರ ದೇಸಾಯಿ, ವೀರೇಶ ಯರಗೇರಿ, ಸೋಮನಾಥ ಕೊಳಗಿ, ಅರವಿಂದ ಸಂಕೊಳ್ಳಿ, ಹೇಮಂತ ಕಿತ್ತೂರ, ಲಯನ್ ರಾಜಶೇಖರ ಪಾಟೀಲ, ಲಯನ್ ಯು.ಎಸ್. ಪಾಟೀಲ, ಶ್ರೀಕಾಂತ ಶಾನಭಾಗ, ಬಾಬಾಜಾನ ನಂದ್ಯಾಳ, ಇತರರು ಉಪಸ್ಥಿತರಿದ್ದರು. ಭಾರತಿ ವಡವಿ, ಶಕುಂತಲಾ ಬಾಲಗುಂದೆ ಹಾಗೂ ಹೇಮಂತ ಕಿತ್ತೂರ ಕಾರ್ಯಕ್ರಮ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts