More

    ಸಂಸ್ಕಾರ, ಸಂಸ್ಕೃತಿ ಅಳವಡಿಸಿಕೊಂಡರೆ ಜೀವನ ಸಾರ್ಥಕ

    ಸಿದ್ದಾಪುರ: ಜೀವನದಲ್ಲಿ ಸಂಸ್ಕಾರ, ಸಂಸ್ಕೃತಿ ಅಳವಡಿಸಿಕೊಂಡಾಗ ಮಾತ್ರ ಜೀವನ ಸಾರ್ಥಕತೆ ಹೊಂದುತ್ತದೆ. ಜೀವನ ಯಜ್ಞಮಯವಾಗದಿದ್ದರೆ ಸ್ವಾರ್ಥವಾಗುತ್ತದೆ ಎಂದು ಲಂಡನ್ ಭಾರತೀಯ ವಿದ್ಯಾಭವನದ ನಿರ್ದೇಶಕ ಡಾ.ಮತ್ತೂರು ನಂದಕುಮಾರ ಹೇಳಿದರು.

    ಪಟ್ಟಣದ ಶಂಕರಮಠದ ಸಭಾಂಗಣದಲ್ಲಿ ಶಿವಮೊಗ್ಗದ ಸಮಾನಸ ಸಂಸ್ಥೆಯು ಶಂಕರಮಠದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಸಪ್ತಸ್ವರ ಘಂಟಾಮಂಟಪದ ಲೋಕಾರ್ಪಣೆ, ಕಲಾ ಸನ್ಮಾನ ಹಾಗು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ವ್ಯಕ್ತಿಯನ್ನು ಲೌಕಿಕ ಬಂಧನದಿಂದ ಬಿಡುಗಡೆಗೊಳಿಸುವುದು ನಿಜವಾದ ಕಲೆ. ಜೀವನದ ಕಷ್ಟಗಳನ್ನು ಪರಿಹರಿಸಿಕೊಳ್ಳುವ ವಿದ್ಯೆ ಕಲಿತಾಗ ನಾವು ಸುಸಂಸ್ಕೃತರಾಗುತ್ತೇವೆ ಎಂದರು.

    ಈ ಸಂದರ್ಭದಲ್ಲಿ ಯಕ್ಷಗಾನದ ಪ್ರಸಿದ್ಧ ಕಲಾವಿದ ವಿನಾಯಕ ಹೆಗಡೆ ಕಲಗದ್ದೆಯವರನ್ನು ಯಕ್ಷನಾಟ್ಯ ಅಭಿನವಾಂತ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

    ಸನ್ಮಾನ ಸ್ವೀಕರಿಸಿ ಮಾತನಾಡಿದ ವಿನಾಯಕ ಹೆಗಡೆ ಕಲಗದ್ದೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ರಾಮಾಯಣ, ಮಹಾಭಾರತದಂಥ ಪುರಾಣಗಳನ್ನು ತಲುಪಿಸಿದ್ದು ಯಕ್ಷಗಾನ. ಭಾಷೆ, ಪ್ರಾಂತ್ಯದ ಹಂಗಿಲ್ಲದ ಯಕ್ಷಗಾನ ವಿಶ್ವಗಾನವಾಗುವ ಅರ್ಹತೆ ಹೊಂದಿರುವಂಥದ್ದು.ನಿಜವಾದ, ಶುದ್ಧವಾದ ಸಂಸ್ಕೃತಿಯ ಯಕ್ಷಗಾನ ಕನ್ನಡ ಭಾಷೆ ಉಳಿಸಿಕೊಂಡು ಬಂದಿರುವಂಥದ್ದು. ಯಕ್ಷಗಾನಕ್ಕೆ ಗೌರವ ತಂದವರಲ್ಲಿ ಕೆರೆಮನೆ ಕುಟುಂಬದ ಕಾರ್ಯ ಮಹತ್ವದ್ದು. ನನ್ನ ಗುರುಗಳಾದ ಶಂಭು ಹೆಗಡೆಯವರ ಮಾರ್ಗದರ್ಶನ, ಮಹಾಗಣಪತಿಯ ಆಶೀರ್ವಾದದಿಂದ 8 ಬಾರಿ ಶಸ್ತ್ರಚಿಕಿತ್ಸೆಯಾದರೂ ಈವರೆಗೂ ಯಕ್ಷಗಾನದಲ್ಲಿ ತೊಡಗಿದ್ದೇನೆ. ಗುರು ಶಂಭು ಹೆಗಡೆಯವರ ಕಲೆಗೆ ಅಪಮಾನವಾಗದ ಹಾಗೇ ನೋಡಿಕೊಳ್ಳಿ ಎಂದು ಹೇಳಿದ್ದನ್ನು ಶಕ್ತಿಮೀರಿ ಪಾಲಿಸಿಕೊಂಡು ಬರುತ್ತಿದ್ದೇನೆ ಎಂದರು.

    ಬೆಂಗಳೂರಿನ ಹೆಬ್ರಾನ್​ನ ಕಾ.ನಿ. ನಿರ್ದೇಶಕ ಪ್ರೀನಂದ್ ಪ್ರೇಮಚಂದ್ರನ್ ಮಾತನಾಡಿದರು. ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ಡಾ. ಸುಮಿತ್ರಾ ಭಟ್ ಅವರ ‘ನೆನಪು ಮಾಸುವ ಮುನ್ನ’ ಪುಸ್ತಕ ಬಿಡುಗಡೆ ಮಾಡಲಾಯಿತು. ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಶಂಕರಮಠದ ಆವರಣದಲ್ಲಿ ಡಾ.ವಿಘ್ನೕಶ ಭಟ್ ಹಾಗೂ ಡಾ. ಸುಮಿತ್ರಾ ಭಟ್ ಅವರ ಪ್ರಾಯೋಜಕತ್ವದಲ್ಲಿ ನಿರ್ವಿುಸಲಾದ ಸಪ್ತಸ್ವರ ಘಂಟಾಮಂಟಪವನ್ನು ದೊಡ್ಮನೆ ವಿಜಯ ಹೆಗಡೆ ಲೋಕಾರ್ಪಣೆ ಮಾಡಿದರು. ವಸುಧಾ ಕರಣಿಕ ನಿರ್ವಹಿಸಿದರು. ಭಾಸ್ಕರ ಹೆಗಡೆ ಮುತ್ತಿಗೆ ಸಹಕರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts