More

    ಸುಲಲಿತ ಜೀವನ ಸೂಚ್ಯಂಕ ಆನ್‌ಲೈನ್ ಸಮೀಕ್ಷೆ, ಮಂಗಳೂರಿಗೆ 20ನೇ ಸ್ಥಾನ

    ಮಂಗಳೂರು: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ವಿವಿಧ ಉಪಕ್ರಮಗಳ ಮೂಲಕ ಸ್ಮಾರ್ಟ್ ಸಿಟಿಗಳಲ್ಲಿ ಆಗಿರುವ ಪ್ರಗತಿ ಪರಿಶೀಲಿಸಲು ಮತ್ತು ಜನರ ಜೀವನ ಮಟ್ಟ, ಸುಸ್ಥಿರ ಪರಿಸರ ಮತ್ತು ಉತ್ತಮ ಪರಿಹಾರರೋಪಾಯಗಳಿಗೆ ಸಂಬಂಧಿಸಿ ನಗರಗಳನ್ನು ಉತ್ತೇಜಿಸುವ ದೃಷ್ಟಿಯಿಂದ 2020ನೇ ಸಾಲಿನಲ್ಲಿ ಆನ್‌ಲೈನ್ ಮೂಲಕ ನಡೆಸಿದ್ದ ಸಮೀಕ್ಷೆ ಫಲಿತಾಂಶ ಗುರುವಾರ ಸಚಿವ ಹರದೀಪ್ ಸಿಂಗ್ ಎಸ್.ಪುರಿ ಪ್ರಕಟಿಸಿದ್ದಾರೆ.

    ಮಂಗಳೂರು ನಗರ ಸುಲಲಿತ ಜೀವನ ಸೂಚ್ಯಂಕದಲ್ಲಿ(10 ಲಕ್ಷಕ್ಕಿಂತ ಕೆಳಗಿನ ಜನಸಂಖ್ಯೆ ನಗರ) 20ನೇ ಸ್ಥಾನ, ಪೌರಾಡಳಿತ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ 42ನೇ ಸ್ಥಾನ ಪಡೆದಿದೆ. ಎರಡೂ ವಿಭಾಗದಲ್ಲಿ ಹತ್ತರೊಳಗೆ ಸ್ಥಾನ ಪಡೆದ ನಗರದ ಹೆಸರನ್ನು ಘೋಷಿಸಿದ ಸಚಿವರು, ಆ ನಗರಗಳ ಆಯುಕ್ತರು ಮತ್ತು ಜನ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು.

    ನವದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಸಚಿವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಂಗಳೂರು ಮಹಾನಗರ ಪಾಲಿಕೆ ಮಂಗಳಾ ಸಭಾಂಗಣದಲ್ಲಿ ಇದರ ವೀಕ್ಷಣೆಗೆ ಅವಕಾಶ ಮಾಡಲಾಗಿತ್ತು. ಮೇಯರ್ ಪ್ರೇಮಾನಂದ ಶೆಟ್ಟಿ, ಉಪಮೇಯರ್ ಸುಮಂಗಳಾ ರಾವ್, ಸ್ಮಾರ್ಟ್ ಸಿಟಿ ಎಂಡಿ ಪ್ರಶಾಂತ್ ಕುಮಾರ್ ಮಿಶ್ರಾ, ಪಾಲಿಕೆ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು, ಸ್ಮಾರ್ಟ್ ಸಿಟಿ ಅಧಿಕಾರಿಗಳು ಉಪಸ್ಥಿತರಿದ್ದರು.

    ಮಂಗಳೂರು ಪಡೆದ ಅಂಕಗಳು: ಸುಲಲಿತ ಜೀವನ ಸೂಚ್ಯಂಕದಲ್ಲಿ 53.59 ಅಂಕದೊಂದಿಗೆ 20ನೇ ಸ್ಥಾನ ಪಡೆದಿದೆ. ಜೀವನ ಗುಣಮಟ್ಟದಲ್ಲಿ 54.78 ಅಂಕ , ಆರ್ಥಿಕ ಸಾಮರ್ಥ್ಯದಲ್ಲಿ 11.96, ಸುಸ್ಥಿರತೆ 50.31, ಸಾರ್ವಜನಿಕರ ಸಹಭಾಗಿತ್ವದಲ್ಲಿ 76.40 ಅಂಕ ಪಡೆದಿದೆ. ಪೌರಾಡಳಿತದ ಕಾರ್ಯಕ್ಷಮತೆ ಸೂಚ್ಯಂಕದಲ್ಲಿ 38.16 ಅಂಕದೊಂದಿಗೆ 42ನೇ ಸ್ಥಾನ ಪಡೆದರೆ. ಸೇವೆಯಲ್ಲಿ 52.61 ಅಂಕ, ಹಣಕಾಸು ವಿಭಾಗದಲ್ಲಿ 56.58, ತಾಂತ್ರಿಕತೆ 18.70, ಯೋಜನೆಯಲ್ಲಿ 15.67 ಮತ್ತು ಆಡಳಿತದಲ್ಲಿ 31.04 ಅಂಕ ಪಡೆದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts