More

    ಎಲ್‌ಐಸಿ 130 ಕೋಟಿ ರೂ.ಪ್ರೀಮಿಯಂ, ಪ್ರಥಮ ತ್ರೈಮಾಸಿಕ ಅವಧಿಯಲ್ಲಿ ಉಡುಪಿ ವಿಭಾಗ ಸಾಧನೆ

    ಉಡುಪಿ: ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಜಿಲ್ಲೆಗಳನ್ನು ಒಳಗೊಂಡ ಭಾರತೀಯ ಜೀವವಿಮಾ ನಿಗಮ (ಎಲ್‌ಐಸಿ) ಉಡುಪಿ ವಿಭಾಗ ಪ್ರಸಕ್ತ ಆರ್ಥಿಕ ವರ್ಷದ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ ಕಳೆದ ಆ.15ಕ್ಕೆ ಅಂತ್ಯಗೊಂಡಂತೆ 32,058 ಪಾಲಿಸಿ ವಿಕ್ರಯಿಸಿ 130.62 ಕೋಟಿ ರೂ.ಪ್ರಥಮ ಪ್ರೀಮಿಯಂ ಆದಾಯ ಗಳಿಸಿದೆ ಎಂದು ಎಲ್‌ಐಸಿ ಉಡುಪಿ ವಿಭಾಗಾಧಿಕಾರಿ ಬಿಂದು ರಾಬರ್ಟ್ ತಿಳಿಸಿದ್ದಾರೆ.

    ಕೋವಿಡ್-19 ಅವಧಿಯಲ್ಲೂ ಎಲ್‌ಐಸಿ ಉತ್ತಮ ಸಾಧನೆ ಮಾಡಿದೆ. ಮಾ.31ಕ್ಕೆ ಅಂತ್ಯಗೊಂಡ ಆರ್ಥಿಕ ವರ್ಷದಲ್ಲಿ 1 ಲಕ್ಷ 64 ಸಾವಿರ ಪಾಲಿಸಿ ವಿಕ್ರಯಿಸಿ 379 ಕೋಟಿ ರೂ.ಪ್ರಥಮ ಪ್ರೀಮಿಯಂ ಸಂಗ್ರಹಿಸಲಾಗಿದೆ. 1 ಲಕ್ಷ 70 ಸಾವಿರದ 359 ಪಾಲಿಸಿಗಳ 913.36 ಕೋಟಿ ರೂ.ದಾವೆ ಪಾವತಿಸಲಾಗಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ 1 ಲಕ್ಷ 69 ಸಾವಿರದ 419 ಪಾಲಿಸಿಗಳ 900 ಕೋಟಿ ರೂ.ದಾವೆ ಪಾವತಿ ಮಾಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


    ಆರ್ಥಿಕ ವರ್ಷದಲ್ಲಿ ಗುಂಪು ವಿಮೆಯಲ್ಲಿ 1.01 ಜೀವಿತಗಳಿಗೆ 430 ಸ್ಕೀಮ್‌ಗಳ ಮೂಲಕ 1,773 ಕೋಟಿ ರೂ. ಪ್ರಥಮ ಪ್ರೀಮಿಯಂ ಆದಾಯ ಸಂಗ್ರಹಿಸಲಾಗಿದೆ. ಪ್ರಸಕ್ತ ವರ್ಷದಲ್ಲಿ 19 ಸ್ಕೀಮ್‌ಗಳ ಮೂಲಕ 10.98 ಲಕ್ಷ ಜೀವಿತಗಳಿಂದ 875.14 ಕೋ. ರೂ. ಪ್ರಥಮ ಪ್ರೀಮಿಯಂ ಸಂಗ್ರಹಿಸಲಾಗಿದೆ.

    ಸೂಕ್ಷ್ಮ ವಿಮಾ ಯೋಜನೆಯಡಿ 52,373 ಜೀವಿತಗಳಿಂದ 42.08 ಕೋ. ಪ್ರಥಮ ಪ್ರೀಮಿಯಂ ಸಂಗ್ರಹಿಸಲಾಗಿದ್ದು, 721 ಪಾಲಿಸಿಗಳಿಗೆ 1.36 ಕೋ. ರೂ. ಮರಣ ದಾವೆ ನೀಡಲಾಗಿದೆ. ಸಂಸ್ಥೆಯ ಸಾಧನೆಯಲ್ಲಿ ಮಾರುಕಟ್ಟೆ ವ್ಯವಸ್ಥಾಪಕರಾದ ವೆಂಕಟರಮಣ ಶೀರೂರು ಮತ್ತು ಸದಾನಂದ ಕಾಮತ್ ಸಹಕರಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts