More

    ಅಂಚೆ ಇಲಾಖೆಯಿಂದ ಆಯೋಜನೆ ರಾಷ್ಟ್ರೀಯ ಪತ್ರ ಬರಹ ಸ್ಪರ್ಧೆ: ಅ.31ರೊಳಗೆ ಬರೆದು ಕಳಿಸಿ

    ಮಂಡ್ಯ: ಅಂಚೆ ಇಲಾಖೆ ಮಂಡ್ಯ ವಿಭಾಗದಿಂದ ‘ಡಿಜಿಟಲ್ ಇಂಡಿಯಾ ಫಾರ್ ನ್ಯೂ ಇಂಡಿಯಾ’ ಎಂಬ ವಿಷಯದ ಕುರಿತು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ರಾಷ್ಟ್ರಮಟ್ಟದ ಪತ್ರ ಬರಹ ಸ್ಪರ್ಧೆ ಆಯೋಜಿಸಲಾಗಿದೆ.
    18 ವರ್ಷ ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟ ಎರಡು ವಿಭಾಗಗಳಲ್ಲಿ ಕನ್ನಡ, ಇಂಗ್ಲೀಷ್ ಅಥವಾ ಹಿಂದಿಯಲ್ಲಿ ಪತ್ರಗಳನ್ನು ಬರೆಯಬಹುದು. ಶಿಕ್ಷಣ ಸಂಸ್ಥೆಗಳು ತಮ್ಮ ವಿದ್ಯಾರ್ಥಿಗಳನ್ನು ಸ್ಪರ್ಧೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಬಹುದು.
    ಇನ್‌ಲ್ಯಾಂಡ್ ಲೆಟರ್ ಕಾರ್ಡ್‌ಗಳಲ್ಲಿ 500 ಪದ ಮೀರದಂತೆ ಅಥವಾ ಎ4 ಗಾತ್ರದ ಹಾಳೆಯಲ್ಲಿ 1000 ಪದ ಮೀರದಂತೆ ಬರೆಯಬೇಕು. ಒಂದೇ ವಿಷಯದ ಕುರಿತು ಎರಡು ವಯಸ್ಸಿನ ವರ್ಗಗಳಿಗೆ ಬರೆಯಬಹುದು ಪತ್ರವನ್ನು ಅ.31ರೊಳಗೆ ಅಂಚೆ ಅಧೀಕ್ಷಕರು, ಮಂಡ್ಯ ವಿಭಾಗ, ಮಂಡ್ಯ-571401 ವಿಳಾಸಕ್ಕೆ ಕಳುಹಿಸಬೇಕು.
    ಸ್ಪರ್ಧೆಯಲ್ಲಿ ಪ್ರತಿ ವಿಭಾಗದ ಮೂರು ಅತ್ಯುತ್ತಮ ಬರಹಕ್ಕೆ ಬಹುಮಾನ ನೀಡಲಾಗುವುದು. ಮಾಹಿತಿಗೆ ಇಲಾಖೆಯ ವೆಬ್‌ಸೈಟ್ www.karnataka post.gov.in ಯನ್ನು ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts