More

    ನಾರಾಯಣ ಗುರುಗಳ ಆದರ್ಶ, ವಿಚಾರ ಬಿತ್ತೋಣ

    ಸೊರಬ: ಬ್ರಹ್ಮ ಶ್ರೀ ನಾರಾಯಣ ಗುರುಗಳ ಆದರ್ಶ ವಿಚಾರಗಳನ್ನು ಸಮಾಜದಲ್ಲಿ ಬಿತ್ತುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ತಾಲೂಕುಗಳಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಮಹಿಳಾ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರ ವೇದಿಕೆ ಜಿಲ್ಲಾ ಮಹಿಳಾ ಸಂಘಟನೆ ಅಧ್ಯಕ್ಷೆ ಪ್ರಭಾವತಿ ಚಂದ್ರಕಾAತ್ ಹೇಳಿದರು.
    ಗುರುವಾರ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರ ವೇದಿಕೆಯ ಮಹಿಳಾ ಸಂಘಟನೆಯ ಪದಾಽಕಾರಿಗಳ ಆಯ್ಕೆಗಾಗಿ ಕರೆಯಲಾಗಿದ್ದ ಸಭೆಯಲ್ಲಿ ಮಾತನಾಡಿ, ನಾರಾಯಣ ಗುರುಗಳ ತತ್ವ, ಸಿದ್ಧಾಂತಗಳನ್ನು 26 ಪಂಗಡಗಳಿರುವ ಈಡಿಗ ಸಮುದಾಯದವರಿಗೆ ತಿಳಿಸಲಾಗುವುದು. ಜಾಗೃತಿ ಜತೆಗೆ ಸಂಘಟನೆ ಮುಖ್ಯ ಉದ್ದೇಶವಾಗಲಿದೆ. ಈಡಿಗ ಸಮಾಜವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಸಂಘಟನೆಯ ಅಗತ್ಯವಿದೆ. ನಮ್ಮ ಸಂಘಟನೆಯು ಹಲವು ಸಂದರ್ಭಗಳಲ್ಲಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
    ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರ ವೇದಿಕೆ ಜಿಲ್ಲಾಧ್ಯಕ್ಷ ಪ್ರವೀಣ್ ಹಿರೇಇಡಗೋಡು ಮಾತನಾಡಿ, ಗುರುಗಳ ವಿಚಾರ, ಆದರ್ಶಗಳನ್ನು ಮೈಗೂಡಿಸಿಕೊಂಡು ಸದೃಢ ಸಮಾಜ ಕಟ್ಟುವಲ್ಲಿ ಪ್ರತಿಯೊಬ್ಬರು ಶ್ರಮಿಸಬೇಕಿದೆ ಎಂದರು.
    ರಾಜ್ಯ ಕಾರ್ಯದರ್ಶಿ ಸುವರ್ಣಾ, ತಾಲೂಕು ಘಟಕದ ಅಧ್ಯಕ್ಷೆ ರಜಿನಿ ನಾಯ್ಕ್, ತಾಪಂ ಮಾಜಿ ಅಧ್ಯಕ್ಷ ಗಣಪತಿ ಎಚ್.ಹುಲ್ತಿಕೊಪ್ಪ, ಶಿವಕುಮಾರ ಬಿಳವಗೋಡು, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವು ಹೊದಲ, ನಾಗರಾಜ್ ಕುಪ್ಪಗಡ್ಡೆ, ಜೆ. ಪ್ರಕಾಶ್ ಇತರರಿದ್ದರು.

    ನೂತನ ಪದಾಽಕಾರಿಗಳು
    ತಾರಾ ಶಿವಾನಂದಪ್ಪ (ಘಟಕದ ಅಧ್ಯಕ್ಷೆ), ಸುಮಾ ಕುಬಟೂರು, ನಾಗರತ್ನಾ, ವಿಶಾಲಾಕ್ಷಮ್ಮ(ಉಪಾಧ್ಯಕ್ಷರು), ಶಾಂತಮ್ಮ ಉಳವಿ(ಗೌರವಾಧ್ಯಕ್ಷೆ), ರತ್ನಮ್ಮ (ಪ್ರಧಾನ ಕಾರ್ಯದರ್ಶಿ), ವನಿತಾ (ಸಹ ಕಾರ್ಯದರ್ಶಿ), ಶಿಲ್ಪಾ (ಖಜಾಂಚಿ), ನಾಗರತ್ನಾ, ಪುಷ್ಪಾವತಿ, ಲಲಿತಾ (ಸಂಘಟನಾ ಕಾರ್ಯದರ್ಶಿ), ಸುಧಾ ಸೋಮಶೇಖರ್ (ಜಿಲ್ಲಾ ಉಪಾಧ್ಯಕ್ಷೆ), ಕಮಲಾಕ್ಷಿ ಸತೀಶ್ (ಸಂಘಟನಾ ಕಾರ್ಯದರ್ಶಿ), ಪಾರ್ವತಿ, ಆಶಾ, ಗಂಗಮ್ಮ, ಮಮತಾ, ಸಣ್ಣಮ್ಮ, ಸುಮಾ, ಲಲಿತಮ್ಮ (ಸದಸ್ಯರು).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts