More

    ಕಲಿಯೋಣ, ಶ್ರೀಮಂತ ರೈತರಾಗೋಣ..: ಮನಿಮಾತು

    ಕಲಿಯೋಣ, ಶ್ರೀಮಂತ ರೈತರಾಗೋಣ..: ಮನಿಮಾತು

    ಕಲಿಕೆ ಇಲ್ಲದೆ ಗಳಿಕೆ ಸಾಧ್ಯವೇ ಇಲ್ಲ..! ಹೌದು, ನೀವು ಯಾವುದೇ ಕ್ಷೇತ್ರದಲ್ಲಿರಲಿ ನಿರಂತರ ಕಲಿಕೆಯಿಂದ ಮಾತ್ರ ಹೆಸರು, ಹಣ ಗಳಿಸಲು ಸಾಧ್ಯ. ಸಾಧಕರೆಲ್ಲರಲ್ಲೂ ಇರೋ ಒಂದು ಸಾಮಾನ್ಯ ಗುಣ ಕಲಿಕೆ. ನೀವು ಎಷ್ಟು ಕಲಿಯುತ್ತಿರೋ ಅಷ್ಟು ಸೃಜನಶೀಲರಾಗುತ್ತೀರಿ, ನಿಮ್ಮ ಕೆಲಸದಲ್ಲಿ ಪಕ್ವಗೊಳ್ಳುತ್ತೀರಿ, ನಿರ್ದಿಷ್ಟ ಕ್ಷೇತ್ರದಲ್ಲಿ ಕ್ರಿಯಾಶೀಲರಾಗುತ್ತೀರಿ, ಒಂದೊಂದೇ ಮೆಟ್ಟಿಲು ಹತ್ತುತ್ತಾ ಸಾಧನೆ ಮಾಡುತ್ತೀರಿ, ಅದು ಕೃಷಿಯಾಗಲಿ, ಬಿಸಿನೆಸ್ ಆಗಲಿ, ಉದ್ಯೋಗವಾಗಲಿ ಅಥವಾ ಇನ್ಯಾವುದೋ ಕ್ಷೇತ್ರವಾಗಲಿ, ಕಲಿಕೆ ಆದ್ಯತೆಯಾಗಬೇಕು.

    ಕಲಿಯೋಣ, ಸಾಧಕ ಕೃಷಿಕರಾಗೋಣ: ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು ಎನ್ನುವ ಮಾತು ನೀವು ಕೇಳಿರಬೇಕಲ್ಲವೇ. ಕೃಷಿ ಒಂದು ವಿದ್ಯೆ. ಆ ವಿದ್ಯೆಯನ್ನು ಎಷ್ಟು ಶ್ರದ್ಧೆಯಿಂದ ಕಲಿತು ನಾವು ಅಳವಡಿಸಿಕೊಳ್ಳುತ್ತೇವೋ ಅಷ್ಟು ಫಲ ನಮಗೆ ಸಿಗುತ್ತದೆ. ಒಂದೇ ಎಕರೆ ಜಮೀನಿನಲ್ಲಿ ವೈವಿಧ್ಯಮಯ ಕೃಷಿ ಮಾಡಿ ಸುಖವಾಗಿ ಜೀವನ ಮಾಡುತ್ತಿರುವವರಿದ್ದಾರೆ, 10 ಎಕರೆ ಜಮೀನಿದ್ದು ಕೃಷಿಯಲ್ಲಿ ಲಾಭವಿಲ್ಲ ಎಂದು ಸುಮ್ಮನಿರುವವರೂ ಇದ್ದಾರೆ. ಯಾಕೆ ಹೀಗಾಗ್ತಿದೆ ಎಂದು ನೋಡಿದಾಗ ಸಿಗುವ ಉತ್ತರ ಕಲಿಕೆ. ಎಲ್ಲ ಕ್ಷೇತ್ರಗಳಲ್ಲೂ ಕಲಿಕೆ, ಆವಿಷ್ಕಾರಗಳಾಗುತ್ತಿರುವಂತೆಯೇ ಕೃಷಿಯಲ್ಲೂ ಸುಧಾರಣೆ ಆಗಬೇಕು. ನಮ್ಮ ರೈತರು ಹೊಸ ತಲೆಮಾರಿನ ಕೃಷಿಯ ಅಗತ್ಯಗಳನ್ನು ಮನಗಾಣಬೇಕು. ವಿಸ್ತೀರ್ಣದಲ್ಲಿ ಭಾರತಕ್ಕಿಂತ 150 ಪಟ್ಟು ಚಿಕ್ಕದಿರುವ ಇಸ್ರೇಲ್​ನಲ್ಲಿ ಕೃಷಿ ಕ್ರಾಂತಿಯಾಗುತ್ತಿದೆ ಎಂದರೆ ನಮ್ಮಲ್ಲೇಕೆ ಅದು ಸಾಧ್ಯವಿಲ್ಲ? ಕೃಷಿಯಲ್ಲಿ ಸಕ್ಸಸ್ ಕಾಣಬೇಕು ಅಂದ್ರೆ ಮೊದಲನೆಯದಾಗಿ ‘ಅಪ್ಪ ಹಾಕಿದ ಆಲದ ಮರ’ ಅನ್ನೋ ಧೋರಣೆ ಬಿಡಬೇಕು. ‘ಹಳೆ ಬೇರು, ಹೊಸ ಚಿಗುರು ಕೂಡಿದರೆ ಮರ ಸೊಬಗು’ ಎನ್ನುವ ತತ್ವವನ್ನು ಅನ್ನದಾತ ಅಳವಡಿಸಿಕೊಳ್ಳಬೇಕು. ಕೃಷಿ ಕ್ಷೇತ್ರದ ಹೊಸ ಸಾಧ್ಯತೆಗಳನ್ನು ಅವಲೋಕಿಸಿ ಅಳವಡಿಸಿಕೊಳ್ಳಬೇಕು. ಯಾವುದೇ ಬೆಳೆ ಬೆಳೆಯುವ ಮುನ್ನ ಪ್ರಸ್ತುತ ಮಾರುಕಟ್ಟೆ ಅಂದಾಜಿನ ಜತೆಗೆ ಭವಿಷ್ಯದ ಲೆಕ್ಕಾಚಾರ ಮಾಡಿಕೊಳ್ಳಬೇಕು. ಆಗ ಕೃಷಿ ಲಾಭದಾಯಕವಾಗುತ್ತದೆ. ಕೃಷಿಕ ಶ್ರೀಮಂತನಾಗುತ್ತಾನೆ.

    ಇಲ್ಲಿದೆ ಕೃಷಿ ಯೂನಿವರ್ಸಿಟಿ: ಕೃಷಿಯಲ್ಲಿ ಸಾಧನೆ ಮಾಡಬೇಕು ಅಂದ್ರೆ ಹೊಸ ಕಲಿಕೆ ನಿಮ್ಮದಾಗಬೇಕು. ಈ ನಿಟ್ಟಿನಲ್ಲಿ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಹಲವು ಕೋರ್ಸ್​ಗಳನ್ನು ವಿನ್ಯಾಸಗೊಳಿಸಲಾಗಿದೆ. ಕೃಷಿ, ತೋಟಗಾರಿಕೆ, ಪಶು ಸಂಗೋಪನೆ ಮತ್ತು ಕೃಷಿ ಉಪಕಸುಬುಗಳ ಮಾಹಿತಿಯ ಕಣಜವೇ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿದೆ.

    ಕೃಷಿ ಕೋರ್ಸ್​ಗಳು: ಹಣ್ಣಿನ ಬೆಳೆಗಳ ಬಗ್ಗೆ ಮಾಹಿತಿ ನೀಡುವ ಡ್ರಾ್ಯಗನ್ ಫೂ›ಟ್ ಕೋರ್ಸ್, ರಂಬುಟಾನ್ ಕೋರ್ಸ್, ಬಟರ್ ಫೂ›ಟ್ ಕೋರ್ಸ್, ನೇರಳೆ ಹಣ್ಣಿನ ಕೃಷಿ ಕೋರ್ಸ್, ಹಲಸಿನ ಬಗ್ಗೆ ಕೋರ್ಸ್​ಗಳು, ತೈವಾನ್ ಸೀಬೆ ಕೋರ್ಸ್, ಅಂಜೂರ ಕೃಷಿ ಕೋರ್ಸ್, ದಾಳಿಂಬೆ ಕೃಷಿ ಕೋರ್ಸ್, ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿವೆ. ಇಷ್ಟೇ ಅಲ್ಲ, ರೇಷ್ಮೆ ಕೃಷಿ ಕೋರ್ಸ್, ಸಮಗ್ರ ಕೃಷಿ ಕೋರ್ಸ್, ಅರಣ್ಯ ಕೃಷಿ ಕೋರ್ಸ್, ಅಣಬೆ ಕೃಷಿ ಕೋರ್ಸ್, ಹೂವಿನ ಕೃಷಿ ಕೋರ್ಸ್, ನರ್ಸರಿ ಬಿಸಿನೆಸ್ ಕೋರ್ಸ್ ಮತ್ತು 1 ಎಕರೆ ಕೃಷಿ ಭೂಮಿಯಲ್ಲಿ ಒಂದು ಲಕ್ಷ ಗಳಿಸುವುದು ಹೇಗೆ ಎನ್ನುವ ಬಗ್ಗೆ ಕೋರ್ಸ್​ಗಳಿವೆ.

    ಕೃಷಿ ಸಂಬಂಧಿತ ಉಪ ಕಸುಬುಗಳ ಬಗ್ಗೆ ಕೋರ್ಸ್: ಕೋಳಿ ಸಾಕಣೆ ಕೋರ್ಸ್, ಹಂದಿ ಸಾಕಣೆ ಕೋರ್ಸ್, ಕುರಿ ಮತ್ತು ಮೇಕೆ ಸಾಕಾಣಿಕೆ ಕೋರ್ಸ್, ಮೀನು ಕೃಷಿ ಕೋರ್ಸ್, ಹೈನುಗಾರಿಕೆ ಕೋರ್ಸ್, ಕಡಕ್​ನಾಥ್ ಕೋಳಿ ಸಾಕಣೆ ಕೋರ್ಸ್, ಜೇನು ಸಾಕಣೆ ಕೋರ್ಸ್, ಸೀಗಡಿ ಕೃಷಿ ಕೋರ್ಸ್, ಗಾಣದ ಎಣ್ಣೆ ಬಿಸಿನೆಸ್ ಕೋರ್ಸ್ ಹೀಗೆ ಹತ್ತು ಹಲವು ವಿಚಾರಗಳ ಬಗ್ಗೆ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಕೋರ್ಸ್​ಗಳಿವೆ.

    ಕೃಷಿಯ ಜತೆಗೆ ಬಿಸಿನೆಸ್ ಮಾಡುವವರಿಗೂ ಇವೆ ಆಯ್ಕೆಗಳು: ಕೃಷಿಯ ಜತೆ ಜತೆಗೆ ಬಿಸಿನೆಸ್ ಮಾಡಬೇಕು ಎನ್ನುವವರಿಗೂ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿ ಹತ್ತಾರು ಕೋರ್ಸ್​ಗಳಿವೆ. ಫುಡ್ ಟ್ರಕ್ ಬಿಸಿನೆಸ್, ಹಳ್ಳಿಯಿಂದ ಬಿಸಿನೆಸ್ ಕಟ್ಟೋದು, ಹೊಟೇಲ್ ಆರಂಭಿಸೋದು, ಕರಕುಶಲ ವಸ್ತುಗಳ ತಯಾರಿಕೆ ಮತ್ತು ಮಾರಾಟ, ದಿನಸಿ ಅಂಗಡಿ ಆರಂಭಿಸೋದು, ಉಪ್ಪಿನಕಾಯಿ ಬಿಸಿನೆಸ್ ಆರಂಭಿಸೋದು, ಬೇಕರಿ ಶುರು ಮಾಡೋದು, ಹೇರ್ ಕಟ್ಟಿಂಗ್ ಶಾಪ್ ಆರಂಭಿಸೋದು, ಹೋಮ್ ಸ್ಟೇ ಶುರು ಮಾಡೋದು, ನಂದಿನಿ ಮಿಲ್ಕ್ ಪಾರ್ಲರ್ ಫ್ರಾಂಚೈಸಿ ಪಡೆಯೋದು, ತರಕಾರಿ ಅಂಗಡಿ ಪ್ರಾರಂಭ ಮಾಡೋದು, ಸೋಪ್ ತಯಾರಿಕೆ ಬಿಸಿನೆಸ್ ಮಾಡೋದು, ಮನೆಯಿಂದ ಕೇಕ್ ತಯಾರಿಸಿ ಮಾರಾಟ ಮಾಡೋದು, ಹೀಗೆ ಆದಾಯ ಕಂಡುಕೊಳ್ಳುವ ಅನೇಕ ಆಯ್ಕೆಗಳು ಈ ಆಪ್​ನಲ್ಲಿವೆ.

    ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್​ಲೋಡ್ ಮಾಡಿ: ಕೃಷಿ, ಬಿಸಿನೆಸ್, ಜೀವನಕಲೆ ಮತ್ತು ಉದ್ಯೋಗ ಸೃಷ್ಟಿಗೆ ಬೇಕಾದ ನೂರಾರು ಮಾಹಿತಿಗಳು ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿವೆ. ಕನ್ನಡದಲ್ಲೇ ರೂಪಿಸಲಾಗಿರುವ ಆ ಆಪ್​ನಲ್ಲಿ ವಿವಿಧ ಕ್ಷೇತ್ರಗಳು ತಜ್ಞರು, ಸಾಧಕರು ನಿರ್ದಿಷ್ಟ ವಿಷಯಗಳ ಬಗ್ಗೆ ಮಾರ್ಗದರ್ಶನ ಮಾಡಿದ್ದಾರೆ. ಜೀವನ ಕಟ್ಟಿಕೊಳ್ಳೋಕೆ ಮತ್ತು ದುಡಿಮೆ ಕಂಡುಕೊಳ್ಳೋಕೆ ಹಲವಾರು ಮಾರ್ಗಗಳು ಇಂಡಿಯನ್ ಮನಿ ಡಾಟ್ ಕಾಂನ ಫೈನಾನ್ಸಿಯಲ್ ಫ್ರೀಡಂ ಆಪ್​ನಲ್ಲಿವೆ. ಹಾಗಾದ್ರೆ ಇನ್ನೇಕೆ ತಡ, ಈಗಲೇ ಫೈನಾನ್ಸಿಯಲ್ ಫ್ರೀಡಂ ಆಪ್ ಡೌನ್​ಲೋಡ್ ಮಾಡಿ, ಲೈಫ್​ನಲ್ಲಿ ಸಕ್ಸಸ್ ಆಗಿ.

    ಕಲಿಯೋಣ, ಶ್ರೀಮಂತ ರೈತರಾಗೋಣ..: ಮನಿಮಾತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts