More

    ಮಹಿಳೆಯರು ಆರ್ಥಿಕವಾಗಿ ಸಬಲರಾಗಲಿ

    ರಬಕವಿ-ಬನಹಟ್ಟಿ: ಇಂದಿನ ದಿನಗಳಲ್ಲಿ ಮಹಿಳೆಯರು ಆರ್ಥಿಕವಾಗಿ ಸಬಲರಾಗುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳುವಂತೆ ಪಿಎಸ್‌ಐ ಶಾಂತಾ ಹಳ್ಳಿ ಹೇಳಿದರು.

    ಬನಹಟ್ಟಿಯ ಶಂಕರಲಿಂಗ ಸಮುದಾಯ ಭವನದಲ್ಲಿ ಸೋಮವಾರ ಸಂಜೆ ಬಣಗಾರ ಮಹಿಳಾ ಸಂಘ ಏರ್ಪಡಿಸಿದ್ದ ಮಹಿಳೆಯರ ಮನರಂಜನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

    ಇಡೀ ಸಂಸಾರದ ಭಾರ ಹೊತ್ತುಕೊಳ್ಳುವ ಮಹಿಳೆ 4 ಗೋಡೆಗಳ ಮಧ್ಯೆ ಜೀವಿಸದೆ ಸ್ವತಂತ್ರವಾಗಿ ಬದುಕುವುದನ್ನು ಹೇಗೆ ನಿಭಾಯಿಸಬೇಕೆಂಬುದರ ಬಗ್ಗೆ ಸಲಹೆಗಳನ್ನು ನೀಡಿದರು.

    ಲೆಕ್ಕ ಪರಿಶೋಧಕ ಪ್ರಭು ಉಮದಿ ಮಾತನಾಡಿ, ಮಹಿಳೆಯರಿಗೆ ಯೋಜನೆಗಳನ್ನು ರೂಪಿಸುವಲ್ಲಿ ಸರ್ಕಾರ ಯಶಸ್ವಿ ಕಂಡಿದೆ. ಇದರ ಸದ್ಬಳಕೆಯೊಂದಿಗೆ ಲಿಂಗ ಸಮಾನತೆ ಹಕ್ಕನ್ನು ಪಡೆಯುವಲ್ಲಿ ಮುಂದಾಗಬೇಕು. ರಾಜಕೀಯದಲ್ಲಿಯೂ ಸಮಾನತೆಯೊಂದಿಗೆ ಮಹಿಳೆಯರ ಹಕ್ಕು ಒದಗಿಸುವಲ್ಲಿ ನ್ಯಾಯ ಒದಗಿಸಿದೆ ಎಂದರು.

    ನಗರಸಭೆ ಮಾಜಿ ಅಧ್ಯಕ್ಷೆ ಅನುರಾಧಾ ಚಿದಾನಂದ ಹೊರಟ್ಟಿ ಅಧ್ಯಕ್ಷತೆ ವಹಿಸಿದ್ದರು. ಅಡಿವೆಪ್ಪ ಜುಂಜಪ್ಪನವರ, ಚನ್ನಪ್ಪ ಗುಣಕಿ, ಮಲ್ಲಿಕಾರ್ಜುನ ತುಂಗಳ ಇತರರಿದ್ದರು.

    ಮಹಿಳಾ ಮುಖಂಡರಾದ ರತ್ನಾ ಕೊಳಕಿ, ಜ್ಯೋತಿ ಗುಣಕಿ, ಆಶಾ ಭೂತಿ, ಕವಿತಾ ಹಿಂಡಿವಳಿ, ರೇವತಿ ಭೂತಿ, ಶಿಲ್ಪಾ ಅಮಟಿ, ಮಧು ಕೊಳಕಿ, ಪೂಜಾ ಜುಂಜಪ್ಪನವರ, ರಿಯಾ ಮಟ್ಟಿಕಲ್ಲಿ, ಜ್ಯೋತಿ ಕೊಳಕಿ, ಸುರೇಖಾ ಕೊಳಕಿ, ರೂಪಾ ಹಿಂಡಿವಳಿ, ರೇಖಾ ಕಿನ್ನಾಳ, ಪಾರ್ವತಿ ಕೊಳಕಿ, ವಾಣಿ ಲುಕ್ಕ, ಸುವರ್ಣ ಹೊರಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts