More

    ತರಕಾರಿ ಬೀಜ ತಳಿ ಸಂರಕ್ಷಣೆ ಕಾರ್ಯವಾಗಲಿ

    ಶಿರಸಿ: ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಮಲೆನಾಡಿನ ಮನೆಯಂಗಳದಲ್ಲಿ ತರಕಾರಿ ಬೆಳೆಯುವಿಕೆ ಶುರುವಾಗುತ್ತದೆ. ಭದ್ರವಾಗಿ ಇಟ್ಟಿದ್ದ ತರಕಾರಿ ಬೀಜಗಳನ್ನು ಮಹಿಳೆಯರು ಹೊರ ತೆಗೆದು ನೆಡಲಾರಂಭಿಸುತ್ತಾರೆ. ಈ ಅಪರೂಪದ ತಳಿಗಳ ಸಂರಕ್ಷಣೆ, ಇನ್ನಷ್ಟು ಜನರಿಗೆ ತಲುಪುವಂತೆ ಮಾಡಲು ಸ್ಥಳೀಯ ವನಸ್ತ್ರೀ ಸಂಘಟನೆ ಹಾಗೂ ಸಾವಯವ ಒಕ್ಕೂಟವು ನಗರದಲ್ಲಿ ಶುಕ್ರವಾರ ಸಾಂಪ್ರದಾಯಿಕ ತರಕಾರಿ ಬೀಜ ಮೇಳ ಯಶಸ್ವಿಯಾಗಿ ಜರುಗಿತು.

    ಮಲೆನಾಡಿನ ಮೂಲೆ ಮೂಲೆಗಳಿಂದ ಆಗಮಿಸಿದ್ದ ಮಹಿಳೆಯರು 12ಕ್ಕೂ ಅಧಿಕ ಮಳಿಗೆಗಳ ಮೂಲಕ ತರಕಾರಿ ಬೀಜಗಳು, ಅಪರೂಪದ ಹೂವಿನ ಗಿಡಗಳನ್ನು ಮಾರಾಟ ಮಾಡಿದರು. ಖರೀದಿಯೂ ಜೋರಾಗಿ ನಡೆಯಿತು.

    ಕಳೆದ 23 ವರ್ಷಗಳಿಂದ ಅಪರೂಪದ ತರಕಾರಿಗಳನ್ನು ಬೆಳೆಸಿ, ಬೀಜಗಳನ್ನು ಸಂರಕ್ಷಿಸಿಕೊಂಡು ಬಂದ ಮಹಿಳೆ ಕುಸುಮಾ ಭಟ್ ಮೇಳಕ್ಕೆ ಚಾಲನೆ ನೀಡಿ ಮಾತನಾಡಿ, ಕೃಷಿ ಕ್ಷೇತ್ರದ ತಮ್ಮ ಅನುಭವ ಹಂಚಿಕೊಂಡರು.

    ಕೃಷಿ ವಿಜ್ಞಾನ ಕೇಂದ್ರ ಮುಖ್ಯಸ್ಥೆ ಡಾ. ರೂಪಾ ಪಾಟೀಲ ಮಾತನಾಡಿ, ತಳಿ ಸಂರಕ್ಷಣೆ ಅಂದುಕೊಂಡಷ್ಟು ಸುಲಭವಲ್ಲ. ಬಿತ್ತಿದ ತಳಿಯನ್ನು ಪ್ರತಿ ವರ್ಷ ತೆಗೆದು ಸಂರಕ್ಷಣೆ ಮಾಡಿಕೊಳ್ಳುವ ಕಾರ್ಯವಾಗಬೇಕು ಎಂದರು.

    ಪತ್ರಕರ್ತೆ ಶೈಲಜಾ ಗೋರನಮನೆ ಮಾತನಾಡಿ, ಸಾಂಪ್ರದಾಯಿಕ ಬೀಜಗಳ ರಕ್ಷಣೆ ನಮ್ಮ ಜವಾಬ್ದಾರಿ. ಎಲ್ಲಾ ಬೆಳೆಗಳ ಮೂಲ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆ. ಸ್ಥಳೀಯ ತಳಿಗಳ ರಕ್ಷಣೆ ಮತ್ತು ಸ್ಥಳೀಯರಿಗೆ ಲಭ್ಯತೆ ನಮ್ಮ ಉದ್ದೇಶವಾಗಿದೆ ಎಂದರು.

    ಸಾವಯವ ಒಕ್ಕೂಟದ ವಿಶ್ವೇಶ್ವರ ಭಟ್ ಮಾತನಾಡಿ, ಮುಂದಿನ ವರ್ಷ ಯಲ್ಲಾಪುರ ಹಾಗೂ ಸಿದ್ದಾಪುರ ತಾಲೂಕಿನಲ್ಲಿಯೂ ಮೇಳ ಮಾಡುವ ಉದ್ದೇಶವಿದೆ. ಸಾಂಪ್ರದಾಯಿಕ ಬೀಜ ರಕ್ಷಣೆ ಮಾಡುವವರನ್ನು ಗುರುತಿಸುವ ಕಾರ್ಯ ಆಗಬೇಕಿದೆ ಎಂದರು. ರಾಘವ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts