More

    ಉತ್ತಮ ಸಮಾಜ ನಿರ್ಮಾಣಕ್ಕೆ ಸಂಸ್ಕಾರಿಗಳಾಗೋಣ

    ಬೋರಗಾಂವ: ಯುವಕರು, ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರಬಂದು ಧರ್ಮದ ಹಾದಿಯಲ್ಲಿ ನಡೆಯಬೇಕು ಎಂದು ಉಪನ್ಯಾಸಕ ವೀರೇಶ ಪಾಟೀಲ ಹೇಳಿದರು.

    ಸಮೀಪದ ಶಿರದವಾಡ ಸರ್ಕಾರಿ ಪ್ರೌಢಶಾಲೆಯಲ್ಲಿ ಕನ್ನಡ, ಮರಾಠಿ, ಹಿಂದಿ, ಆಂಗ್ಲ ಭಾಷಾ ಸಂಘದ ವತಿಯಿಂದ ಈಚೆಗೆ ಆಯೋಜಿಸಿದ್ದ ಭಾಷಾ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ತಂದೆ-ತಾಯಿ, ಗುರುಗಳಿಗೆ ಗೌರವ ನೀಡುವ ಮೂಲಕ ಮೊದಲು ಮಾನವರಾಗಿ ಬಾಳುವುದು ಅವಶ್ಯ ಎಂದರು. ಶಿಕ್ಷಕ ಪ್ರಕಾಶ ಕಾಶಿದ, ಅಶೋಕ ಕೇಸರಕರ ಉಪನ್ಯಾಸ ನೀಡಿದರು. ಸಾಧನಾನಂದ ಮಹಾರಾಜ, ಗ್ರಾಪಂ ಅಧ್ಯಕ್ಷೆ ಜಯಶ್ರೀ ಪಾಟೀಲ, ಉಪಾಧ್ಯಕ್ಷ ಶೀತಲ ಲಡಗೆ, ಸದಸ್ಯರಾದ ಅಣ್ಣಾ ಪಾಟೀಲ, ಸುರೇಶ ಖೋತ, ಅಜಿತ ತೋಡಕರ, ದೀಕ್ಷಿತಾ ಕಾಂಬಳೆ, ಯಾಸ್ಮಿನ್ ಚೌಸ್, ಡಾ.ಅಪ್ಪಾಸಾಹೇಬ ಘಾಟಗೆ, ಮುಖ್ಯಾಧ್ಯಾಪಕ ಟಿ.ಟಿ .ನಾಡಕರ್ಣಿ, ಬಾಬಾಸಾಹೇಬ ಘಾಟಗೆ, ಅನಿಲ ಪೂಜಾರಿ, ಅನಿಲ ಜಾಂಗಡೆ ಇತರರಿದ್ದರು. ಸಂತೋಷ ಪಾಟೀಲ ಸ್ವಾಗತಿಸಿದರು. ಸುಭಾಷ ಪಾಟೀಲ ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts