More

    ಕೆಂಪೇಗೌಡ ಪ್ರತಿಮೆ,ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ಇರಲಿ ಹಬ್ಬದ ಸಂಭ್ರಮ

    ಕೆಂಪೇಗೌಡ ಪ್ರತಿಮೆ,ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನಕ್ಕೆ ಇರಲಿ ಹಬ್ಬದ ಸಂಭ್ರಮ

    ಚಿತ್ರದುರ್ಗ: ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆ ಅನಾವರಣಕ್ಕಾಗಿ ಕೋಟೆನಾಡು ಚಿತ್ರದುರ್ಗದ ಮಣ್ಣನ್ನು ಹೆಮ್ಮೆಯಿಂದ ವಿಭಿನ್ನವಾಗಿ, ಹಬ್ಬದ ಸಂಭ್ರಮದ ರೀತಿಯಲ್ಲಿ ಸಮರ್ಪಿಸಿ,ಪವಿತ್ರ ಮೃತ್ತಿಕೆ(ಮಣ್ಣು)ಸಂಗ್ರಹ ಅಭಿಯಾನವನ್ನು ಯಶಸ್ವಿಗೊಳಿಸ ಬೇಕೆಂದು ಜಿಲ್ಲಾ ಧಿಕಾರಿ ಜಿ.ಆರ್.ಜೆ. ದಿವ್ಯ ಪ್ರಭು ಹೇಳಿದರು.

    ಡಿಸಿ ಕಚೇರಿಯಲ್ಲಿ ಗುರುವಾರ ನಾಡಪ್ರಭು ಕೆಂಪೇಗೌಡರ 108 ಅಡಿ ಕಂಚಿನ ಪ್ರತಿಮೆ ಮತ್ತು ಕೆಂಪೇಗೌಡ ಥೀಮ್‌ಪಾರ್ಕ್ ಉ ದ್ಘಾಟನೆ ಅಂಗವಾಗಿ ರಾಜ್ಯದ ಎಲ್ಲೆಡೆಯಿಂದ ಪವಿತ್ರ ಮೃತ್ತಿಕೆ ಸಂಗ್ರಹ ಅಭಿಯಾನ ಹಿನ್ನೆಲೆಯಲ್ಲಿ ಕರೆದಿದ್ದ ಸಭೆಯಲ್ಲಿ ಮಾತನಾಡಿ,ಮೃತ್ತಿಕೆ ಸಂಗ್ರಹ ಅಭಿಯಾನ ವ್ಯವಸ್ಥಿತವಾಗಿ ನಡೆಸ ಬೇಕೆಂದು ಅಧೀಕಾರಿಗಳಿಗೆ ಸೂಚಿಸಿದರು.

    ಕಂದಾಯ,ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಗಳು ಸಮನ್ವಯತೆಯೊಂದಿಗೆ ಕಾರ‌್ಯನಿರ್ವಹಿಸಬೇಕು. ನವೆಂಬರ್ 7 ರೊಳಗೆ ಪವಿತ್ರ ಮೃತ್ತಿಕೆ ಸಂಗ್ರಹ ಮಾಡಿ ಕಳುಹಿಸ ಬೇಕಿದೆ ಎಂದರು. ಜಿಲ್ಲೆಯಲ್ಲಿ ಅಭಿಯಾನ ವಾಹನ ಸಂಚಾರ ಮಾರ್ಗನಕ್ಷೆ ತಯಾರಿ ಸಬೇಕು. ಈ ಅಭಿಯಾನದ ಕೆಂಪೇಗೌಡ ರಥವನ್ನು ಕಲಾತಂಡಗಳು ಹಾಗೂ ಪೂರ್ಣ ಕುಂಭ ಕಳಶದೊಂದಿಗೆ ಸ್ವಾಗತಿಸಿ,ಪವಿತ್ರ ಮಣ್ಣನ್ನು ಸಂಗ್ರಹಿಸಬೇಕು. ಅಭಿಯಾನದ ಕುರಿತು ವ್ಯಾಪಕ ಪ್ರಚಾರ ನೀಡ ಬೇಕೆಂದರು.

    ಜಿಪಂ ಡಾ.ರಂಗಸ್ವಾಮಿ ಮಾತನಾಡಿ,ಕೆಂಪೇಗೌಡರಥ ನವೆಂಬರ್ 6 ಅಥವಾ 7 ರಂದು ಹಿರಿಯೂರು ತಾಲೂಕಿಗೆ ಆಗಮಿಸಲಿದೆ ಎಂದರು. ಅಭಿಯಾನಕ್ಕಾಗಿ ಜಿಲ್ಲಾಮಟ್ಟದ ಸಮಿತಿ ರಚಿಸಲಾಗಿದೆ. ಅಭಿಯಾನಕ್ಕೆ ಅ.21ರಂದು ಚಾಲನೆ ನೀಡಲಾಗಿದೆ ಎಂದರು. ಎಸ್ಪಿ ಕೆ.ಪರಶುರಾಮ್,ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣ, ಉಪವಿಭಾಗಾಧಿಕಾರಿ ಆರ್.ಚಂದ್ರಯ್ಯ ಮತ್ತಿತರರ ಅಧಿಕಾರಿಗಳಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts