More

    ಸ್ವಯಂಪ್ರೇರಿತ ರಕ್ತದಾನದ ಅರಿವು ಮೂಡಲಿ: ಮಧು ಬಂಗಾರಪ್ಪ

    ಸೊರಬ: ಗ್ರಾಮೀಣ ಪ್ರದೇಶದಲ್ಲಿ ರಕ್ತದಾನ ಶಿಬಿರ ಆಯೋಜಿಸಿರುವುದರಿಂದ ಜನರಲ್ಲಿ ಸ್ವಯಂಪ್ರೇರಿತ ರಕ್ತದಾನದ ಅರಿವು ಮೂಡಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
    ತಾಲೂಕಿನ ಉದ್ರಿ ಗ್ರಾಮದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಬುಧವಾರ ಉದ್ರಿ ಗ್ರಾಮದ ವೀರಭದ್ರೇಶ್ವರ ಯುವಕ ಸಂಘ, ಆಯುರ್ವೇದ ಆಸ್ಪತ್ರೆ, ಉದ್ರಿ ಗ್ರಾಪಂ ವ್ಯಾಪ್ತಿಯ ಉದ್ರಿ, ವಡ್ಡಿಗೇರಿ, ಕುಮ್ಮೂರು, ಬಿಳಾಗಿ, ಮಂಚಿ, ಗುಡ್ಡೆಕೊಪ್ಪ, ಬಿದರಗೇರಿ, ಯಡಗೊಪ್ಪ, ಯಲವಾಟ, ಚಿಕ್ಕಾವಲಿ ಗ್ರಾಮಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
    ರಕ್ತದಾನ ಮಾಡುವುದು ಶ್ರೇಷ್ಠ ಕಾರ್ಯ. ಒಬ್ಬ ವ್ಯಕ್ತಿ ಮಾಡುವ ರಕ್ತದಾನದಿಂದ ಸಾವು ಬದುಕಿನ ನಡುವೆ ಹೋರಾಡುವ ಜೀವಗಳನ್ನು ಉಳಿಸಲು ಅನುಕೂಲವಾಗುತ್ತದೆ. ಇಂತಹ ಸಮಾಜಮುಖಿ ಕಾರ್ಯಗಳು ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಲು ಸಾಧ್ಯ. ರಕ್ತದಾನ ಮಾಡುವ ಬಗ್ಗೆ ಕೀಳರಿಮೆ ಬೇಡ. ರಕ್ತವನ್ನು ಕೃತಕವಾಗಿ ಉತ್ಪಾದಿಸಲು ಸಾಧ್ಯವಿಲ್ಲ. ಇಂತಹ ಶಿಬಿರದಿಂದ ಇನ್ನಷ್ಟು ಸಮಾಜಮುಖಿ ಕಾರ್ಯಗಳು ನಡೆಯಲಿ. ಗ್ರಾಮೀಣ ಭಾಗದಲ್ಲಿ ಅಗತ್ಯವಿರುವ ಕಾಮಗಾರಿಗಳ ಪಟ್ಟಿ ಮಾಡಿಕೊಡಿ ಎಂದು ತಿಳಿಸಿದರು.
    ಉದ್ರಿ ಆಯುರ್ವೇದ ಆಸ್ಪತ್ರೆ ವೈದ್ಯಾಽಕಾರಿ ಡಾ. ಮಹೇಶ್ ಮಾತನಾಡಿ, ಉದ್ರಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಜನರನ್ನು ಒಗ್ಗೂಡಿಸಿಕೊಂಡು ಸತತ ೪ನೇ ಬಾರಿಗೆ ರಕ್ತದಾನ ಶಿಬಿರ ಯಶಸ್ವಿಯಾಗಿದೆ ಎಂದರು.
    ನಂತರ ರಕ್ತದಾನ ಮಾಡಿದವರಿಗೆ ಜ್ಯೂಸ್ ಹಣ್ಣು ಔಷಧ ಸಸ್ಯ ಹಾಗೂ ಪ್ರಮಾಣಪತ್ರ ವಿತರಿಸಲಾಯಿತು. ಬಂಗಾರಪ್ಪ ಫೌಂಡೇಶನ್‌ನಿAದ ರಕ್ತದಾನ ಮಾಡಿದವರಿಗೆ ಹೂವಿನ ಗಿಡಗಳನ್ನು ವಿತರಿಸಲಾಯಿತು. ಇಒ ಪ್ರದೀಪ್‌ಕುಮಾರ್, ವೈದ್ಯಾಽಕಾರಿ ಡಾ.ಪ್ರಭು ಸಾಹುಕಾರ್, ಡಾ. ಪರಮೇಶ್ವರ, ಮುಖ್ಯ ಶಿಕ್ಷಕ ಕಲೀಲ್ ಅಹಮದ್, ಅಭಿವೃದ್ಧಿ ಅಽಕಾರಿ ಹೊಮೇಶ್, ಗ್ರಾಪಂ ಸದಸ್ಯರಾದ ಮನಸ್ವಿನಿ, ನೂರಜಾನ್, ದಯಾನಂದ ಬಂಗಾರಪ್ಪ, ಯಲ್ಲಪ್ಪ, ಬಸವರಾಜ್, ಕೆರೆಯಪ್ಪ ಯಡಗೊಪ್ಪ, ಯಲ್ಲಪ್ಪ, ಶಿವಪ್ಪ, ನಾಗರಾಜ್, ಮಹೇಶಗೌಡ, ಚಾಲುಕ್ಯ ಪಾಟೀಲ್, ತಾರಕೇಶ್, ದರ್ಶನ್, ದೇಸಾಯಿ ಗೌಡ, ಸದಾ ಪಾಟೀಲ್, ಸತೀಶ ಗೌಡ, ಪ್ರಕಾಶ್, ಪ್ರದೀಪ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts