More

    ಮುನಿಗಳ ಹತ್ಯೆ ಕುರಿತು ತನಿಖೆಯಾಗಲಿ

    ಶಿಕಾರಿಪುರ: ಜೈನ ಸಮಾಜ ಯಾವತ್ತೂ ಅಹಿಂಸೆ ಶಾಂತಿ ಸೌಹಾರ್ದತೆಯನ್ನು ಪ್ರತಿಪಾದಿಸುವ ಸಮಾಜ. ಇಂತಹ ಸಮಾಜದ ಮುನಿಗಳನ್ನು ಬರ್ಭರವಾಗಿ ಹತ್ಯೆ ಮಾಡಿ ಬಿಸಾಕಿರುವುದು ಮಾನವೀಯ ಸಮಾಜ ತಲೆತಗ್ಗಿಸುವಂತಹದು. ಇದು ಅಕ್ಷಮ್ಯ ಅಪರಾಧ ಎಂದು ಜೈನ ಸಮಾಜದ ವಿಜಯರಾಜ್ ಹೇಳಿದರು.
    ಬುಧವಾರ ಸ್ವಸ್ತಿ ಶ್ರೀ 108 ಶ್ರೀ ಕಾಮಕುಮಾರ ನಂದಿ ಮಹಾರಾಜರ ಹತ್ಯೆಯನ್ನು ಖಂಡಿಸಿ ನಡೆದ ಮೌನ ಮೆರವಣಿಗೆಯ ನಂತರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿ ಮಾತನಾಡಿದರು.

    ಜೈನ ಮುನಿಯ ಹತ್ಯೆಯನ್ನು ಇಡೀ ಜಗತ್ತೇ ಖಂಡಿಸುತ್ತಿದೆ. ಸಮಾಜದ ಉದ್ಧಾರ ಬಯಸುವ ಮುನಿಗಳನ್ನು ಹತ್ಯೆ ಮಾಡಿದವರಿಗೆ ಅತ್ಯಂತ ಕಠಿಣ ಶಿಕ್ಷೆಯಾಗಬೇಕು. ಕೃತ್ಯದ ಕುರಿತು ಸಮರ್ಪಕವಾದ ತನಿಖೆಯಾಗಬೇಕು. ಇದನ್ನು ಉಪೇಕ್ಷೆ ಮಾಡಿದರೆ ಸಮಾಜದಲ್ಲಿ ಗುರುಗಳು, ಮಠ ಮಂದಿರಗಳು ಉಳಿಯುವುದೇ ದುಸ್ತರವಾಗುತ್ತದೆ. ಇಂತಹ ಕೃತ್ಯಗಳು ಮುಂದಿನ ದಿನಗಳಲ್ಲಿ ನಡೆಯದಂತೆ ಸರ್ಕಾರ ಜಾಗೃತಿ ವಹಿಸಬೇಕು ಎಂದು ಆಗ್ರಹಿಸಿದರು.
    ಮಹಾವೀರ್ ಮುತ್ತಿನ್, ದೇವರಾಜ್, ವಿನೋದ್ ಕುಮಾರ್, ಅಶೋಕ್ ಕುಮಾರ್ ಗೋಗಿ, ಪಾರಸ್ ಮಲ್, ಶೋಭಾ ಮುತ್ತಿನ, ಜಯಶ್ರೀ ಗೋಗಿ, ಸುಮಾ ಜಿತೇಂದ್ರ, ರಾಜಣ್ಣ, ಚಂದ್ರಜಿತ್, ಪ್ರಮೋದ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts