More

    ಜಾನಪದ ಕಲೆ ಸಂರಕ್ಷಣೆಗೆ ಯುವಕರು ಕೈಜೋಡಿಸಲಿ: ಲಕ್ಕಮ್ಮಸಿದ್ದಪ್ಪ ಮನವಿ

    ಕಡೂರು: ಶ್ರಮದ ದಣಿವು ನಿವಾರಣೆಗಾಗಿ ಹುಟ್ಟಿಕೊಂಡ ಕಲಾ ಪ್ರಕಾರ ಎಂದರೆ ಅದು ಜಾನಪದ ಕಲೆ. ಯುವ ಜನತೆ ಜಾನಪದ ಕಲೆ ಸಂರಕ್ಷಣೆಗೆ ಮುಂದಾಗಬೇಕಿದ್ದು, ಸಾಹಿತ್ಯದಲ್ಲೂ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಜಿಪಂ ಮಾಜಿ ಸದಸ್ಯೆ ಲಕ್ಕಮ್ಮ ಸಿದ್ದಪ್ಪ ಅಭಿಪ್ರಾಯಪಟ್ಟರು.
    ಕರ್ನಾಟಕ ಜಾನಪದ ಪರಿಷತ್ ತಾಲೂಕು ಘಟಕದಿಂದ ಯಗಟಿಯಲ್ಲಿ ಜ.16ರಂದು ನಡೆಯುವ ಎರಡನೇ ಜಾನಪದ ತಾಲೂಕು ಸಮ್ಮೇಳನದ ಆಹ್ವಾನ ಪತ್ರಿಕೆಯನ್ನು ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದರು.
    ಪಾಶ್ಚಿಮಾತ್ಯ ಸಂಸ್ಕೃತಿಯ ದಾಳಿಗೆ ಸಿಲುಕಿ ನಲುಗುತ್ತಿರುವ ಜಾನಪದ ಸಂಸ್ಕೃತಿಯ ಪರಂಪರೆಯನ್ನು ಉಳಿಸಿ ಬೆಳೆಸಲು ಪರಿಷತ್ತಿನ ಜಿಲ್ಲಾ, ತಾಲೂಕು ಘಟಕಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ. ಜಾನಪದ ಕಲೆಗಳನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಹಾಗಾಗಿ ಯಗಟಿಯಲ್ಲಿ ನಡೆಯುವ ಜಾನಪದ ಸಮ್ಮೇಳನದಲ್ಲಿ ಹಿರಿಯ ಕಲಾವಿದರನ್ನು ಗೌರವಿಸಲಾಗುವುದು ಎಂದರು.
    ಪರಿಷತ್ ತಾಲೂಕು ಅಧ್ಯಕ್ಷ ಜಗದೀಶ್ವರಾಚಾರ್ ಮಾತನಾಡಿ, 16ರಂದು ಯಗಟಿ ವೀರಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷ ಇ.ಓಂಕಾರಮೂರ್ತಿ ಅವರನ್ನು ಮೆರವಣಿಗೆ ಮೂಲಕ ವೇದಿಕೆಗೆ ಕರೆತರಲಾಗುವುದು. ಯಗಟಿಯ ಪ್ರಮುಖ ಬೀದಿಗಳಲ್ಲಿ ಸಾಗುವ ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಲಿವೆ. ಬಳಿಕ ಸಮ್ಮೇಳನ ಉದ್ಘಾಟನೆ, ವಿಚಾರಗೋಷ್ಠಿ, ಸಮಾರೋಪ ಜರುಗಲಿದೆ. ಕ್ಷೇತ್ರದ ಶಾಸಕ ಕೆ.ಎಸ್.ಆನಂದ್ ಸಮ್ಮೇಳನ ಉದ್ಘಾಟಿಸಲಿದ್ದು, ಮಾಜಿ ಶಾಸಕ ವೈ.ಎಸ್.ವಿ.ದತ್ತ, ಬೆಳ್ಳಿಪ್ರಕಾಶ್ ಹಾಗೂ ನಾಡಿನ ಜಾನಪದ ಕಲಾವಿದರು, ಚಿಂತಕರು, ಗಣ್ಯರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಸಮ್ಮೇಳನಕ್ಕಾಗಿ ವಿವಿಧ ಉಪಸಮಿತಿಗಳನ್ನು ರಚಿಸಿದ್ದು, ಸಿದ್ಧತಾ ಕಾರ್ಯಗಳು ಭರದಿಂದ ಸಾಗುತ್ತಿವೆ ಎಂದು ತಿಳಿಸಿದರು.
    ಸಮ್ಮೇಳನಾಧ್ಯಕ್ಷ ಇ.ಓಂಕಾರಮೂರ್ತಿ, ಯಗಟಿ ಗ್ರಾಪಂ ಮಾಜಿ ಅಧ್ಯಕ್ಷ ಚನ್ನಪಿಳ್ಳೆಗೋವಿಂದಪ್ಪ, ಪರಿಷತ್ ಪದಾಧಿಕಾರಿಗಳಾದ ತಿಪ್ಪೇಶ್, ಚಿಕ್ಕನಲ್ಲೂರು ಜಯಣ್ಣ, ಹೋಬಳಿ ಅಧ್ಯಕ್ಷ ಪರಮೇಶ್, ನಂದೀಶ್ ಬಾಬು, ಕೀರ್ತಿಕುಮಾರ್, ಮಲಿಯಪ್ಪ, ಉಮೇಶ್ ಇತರರಿದ್ದರು.

    ಜಾನಪದ ಎಂದರೆ ಕೇವಲ ಹಾಡುಗಾರಿಕೆ ಅಲ್ಲ. 200ಕ್ಕೂ ಹೆಚ್ಚು ಕಲೆಗಳನ್ನು ಒಳಗೊಂಡ ದೊಡ್ಡ ಕಲಾ ಗ್ರಂಥ ಭಂಡಾರ. ಪರಿಷತ್ತಿನಿಂದ ನಮ್ಮ ಮೂಲ ಕಲೆಗಳನ್ನು ಉಳಿಸುವುದರ ಜತೆಗೆ ಕಲಾವಿದರನ್ನು ಗುರುತಿಸಿ ಗೌರವಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಗ್ರಾಪಂ ಮಟ್ಟದಲ್ಲೂ ಸಮ್ಮೇಳನ ಮಾಡಲು ಚಿಂತಿಸಲಾಗುತ್ತಿದೆ.
    ಜಿ.ಬಿ.ಸುರೇಶ್,
    ಕಜಾಪ ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts