More

    ರಾಜ್ಯ ಸರ್ಕಾರ ಶ್ವೇತಪತ್ರ ಹೊರಡಿಸಲಿ

    ಶಿವಮೊಗ್ಗ: ಮೂರು ತಿಂಗಳ ಲೇಖಾನುದಾನಕ್ಕೆ ಕಾಂಗ್ರೆಸ್ ಆರೋಪಗಳ ಸುರಿಮಳೆಗೈದು ಜಂತರ್‌ಮಂತರ್‌ನಲ್ಲಿ ಪ್ರತಿಭಟನೆ ಮಾಡಿದೆ. ಇದು ಪೂರ್ವನಿಯೋಜಿತ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದ್ದಾರೆ.
    ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಬಿಜೆಪಿ ಮಹಿಳಾ ಮೋರ್ಚಾನೂತನ ಅಧ್ಯಕ್ಷ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಪಾರದರ್ಶಕ ಆಡಳಿತ ನೀಡಿದ್ದು, ಇದೇ ಮೊದಲ ಬಾರಿಗೆ 10 ವರ್ಷಗಳ ಶ್ವೇತ ಪತ್ರವನ್ನು ಸದನದಲ್ಲಿ ಮಂಡಿಸಿದೆ. ಆದರೆ ರಾಜ್ಯ ಸರ್ಕಾರ ಹುಳುಕನ್ನು ಹುಡುಕುತ್ತಿದೆ. ಕೇಂದ್ರ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಯತ್ನಿಸುತ್ತಿದೆ.. ಸಂಸದ ಡಿಕೆ. ಸುರೇಶ್ ದೇಶ ವಿಭಜನೆಯ ಮಾತನಾಡಿದರೆ, ಡಿ.ಕೆ.ಶಿವಕುಮಾರ್ ಅವರಿಗೆ ಬೆಂಬಲ ನೀಡುತ್ತಿದ್ದಾರೆ. ರಾಜ್ಯ ಸರ್ಕಾರ ಕೂಡ ಶ್ವೇತಪತ್ರ ಹೊರಡಿಸಲಿ. ರಾಜ್ಯದ ಜನರಿಗೆ ನಿಜಸ್ಥಿತಿ ಗೊತ್ತಾಗಲಿ. ಭಾಗ್ಯದ ಹೆಸರಿನಲ್ಲಿ ಸರ್ಕಾರ ಖಜಾನೆ ಖಾಲಿ ಮಾಡಿ ಕುಳಿತಿದ್ದು ಜನರ ಗಮನ ಬೇರೆಗಡೆ ಸೆಳೆಯಲು ಆರೋಪಿಸುತ್ತಿದ್ದಾರೆ ಎಂದರು.
    ಪುರುಷ ಪ್ರಧಾನ ರಾಜಕೀಯ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿ ಮಹಿಳೆಯರಿಗೆ ಅವಕಾಶ ನೀಡಿದವರು ಪ್ರಧಾನಿ ಮೋದಿ. ಅಬ್ದುಲ್ ಕಲಾಂ ಅವರಿಗೆ ಭಾರತ ರತ್ನ ನೀಡಿದವರು, ಓರ್ವ ಮಹಿಳೆಯನ್ನು ರಾಷ್ಟ್ರಪತಿಯನ್ನಾಗಿ ಆಯ್ಕೆ ಮಾಡಿದ್ದು ನಮ್ಮ ಬಿಜೆಪಿ. ಹಿಂದಿನಿಂದಲೂ ಮಹಿಳೆಯರಿಗೆ ವಿಶೇಷ ಸ್ಥಾನಮಾನ ಗೌರವವನ್ನು ನೀಡುತ್ತ ಬಂದಿದೆ. ತಮ್ಮ ಮಾತೃ ಹೃದಯದ ಮೂಲಕ ಎಲ್ಲರ ವಿಶ್ವಾಸವನ್ನು ಗಳಿಸಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು, ಪಕ್ಷದ ಬೆಳವಣಿಗೆಗೆ ಎಲ್ಲರು ಒಟ್ಟಾಗಿ ಕೆಲಸ ಮಾಡಬೇಕು ಎಂದರು.
    ಪ್ರಪಂಚದ ದೊಡ್ಡ ಪ್ರಜಾಪ್ರಭುತ್ವದ ಭಾರತದಲ್ಲಿ ನಾನು ಮೊದಲ ಬಾರಿಗೆ ಸಂಸದರಾದಾಗ ಪಾರ್ಲಿಮೆಂಟ್‌ನ ಅಧ್ಯಕ್ಷರಾಗಿ ಮೀರಾ ಕುಮಾರಿ, ಪ್ರತಿಪಕ್ಷ ನಾಯಕನಾಗಿ ಸುಷ್ಮಾ ಸ್ವರಾಜ್, ಆಡಳಿತ ಪಕ್ಷದ ನಾಯಕಿಯಾಗಿ ಸೋನಿಯಾ ಗಾಂಧಿ ಇದ್ದರು. ಮಹಿಳೆಯರು ಈ ದೇಶದಲ್ಲಿ ಎಲ್ಲ ರಂಗಗಳಲ್ಲಿ ಪ್ರಮುಖ ಪಾತ್ರ ವಹಿಸಿ ಆದರ್ಶ ಪ್ರಾಯರಾಗಿದ್ದಾರೆ ಎಂದರು.
    ಈ ಬಾರಿ ಲೋಕಸಭೆಯಲ್ಲಿ ಬಿಜೆಪಿಗೆ 400ಕ್ಕೂ ಹೆಚ್ಚು ಸ್ಥಾನ ಸಿಗಲಿದೆ ಎಂದು ಈಗಾಗಲೇ ಪ್ರಧಾನಿ, ಈ ದೇಶದ ಜನರು ಆತ್ಮವಿಶ್ವಾಸ ಹೊಂದಿದ್ದಾರೆ. ರಾಜ್ಯ ಸರ್ಕಾರ ಯಾವುದೇ ಭಾಗ್ಯ ಕೊಡಲಿ, ಆದರೆ ಭಾಗ್ಯಲಕ್ಷ್ಮೀ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ತೆರಿಗೆ ವಿನಾಯಿತಿ, ಗರ್ಭಿಣಿಯರಿಗೆ 6 ತಿಂಗಳ ರಜೆ, ಮಹಿಳಾ ಸ್ವಾವಲಂಬನೆಗೆ ಆರ್ಥಿಕ ನೆರವು ಸೇರಿದಂತೆ ಅನೇಕ ಯೋಜನೆಗಳನ್ನು ನೀಡಿದ್ದು ಬಿಜೆಪಿ ಸರ್ಕಾರ ಎಂಬುವುದನ್ನು ಬಿಜೆಪಿ ಮಹಿಳಾ ಬಿಜೆಪಿ ಮೋರ್ಚಾ ಮನೆ ಮನೆಗೆ ತಲುಪಿಸಬೇಕು ಎಂದರು.
    ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷರಾಗಿ ಗಾಯತ್ರಿ ಮಲ್ಲಪ್ಪ ಅಧಿಕಾರ ಸ್ವೀಕರಿಸಿದರು. ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ಶಾಸಕರಾದ ಎಸ್.ಎನ್.ಚನ್ನಬಸಪ್ಪ, ಡಿ.ಎಸ್.ಅರುಣ್, ಪ್ರಮುಖರಾದ ಎಸ್.ದತ್ತಾತ್ರಿ, ಎಂ.ಬಿ.ಹರಿಕೃಷ್ಣ, ಮಾಲತೇಶ್, ಎಂ.ಶಂಕರ್, ಮಂಗಳಾ ನಾಗೇಂದ್ರ, ಜ್ಯೋತಿ ರಘು, ಶಿವರಾಜ್ ಹಾಗೂ ಬಿಜೆಪಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.
    ಮೋರ್ಚಾ ಪದಾಧಿಕಾರಿಗಳು: ಗಾಯತ್ರಿ ಮಲ್ಲಪ್ಪ (ಅಧ್ಯಕ್ಷೆ), ಮಂಗಳಾ ನಾಗೇಂದ್ರ, ಜ್ಯೋತಿ ರಘು (ಪ್ರಧಾನ ಕಾರ್ಯದರ್ಶಿ), ಸುಧಾ ಶಿವಪ್ರಸಾದ್, ಸುಲೋಚನಾ ಪ್ರಕಾಶ್, ವೀಣಾ ನಾಗರಾಜ್, ಕವಿತಾ ಜಯಣ್ಣ, ವಿಜಯಲಕ್ಷ್ಮೀ ಸತೀಶ್ (ಉಪಾಧ್ಯಕ್ಷರು), ಸೀತಾಲಕ್ಷ್ಮೀ, ಶರಧಿ ಪೂರ್ಣೇಶ್, ಸುಮಿತ್ರಾ ರಂಗನಾಥ್, ವನಜಾಕ್ಷಿ ಸುರೇಶ್, ಲೀಲಾ ಶಂಕರ್ (ಕಾರ್ಯದರ್ಶಿ), ಪದ್ಮಾ ಸುರೇಶ್ (ಖಜಾಂಚಿ), ಶಾರದಾ ಬೊಮ್ಮನಕಟ್ಟೆ, ಪಿ.ಎಸ್.ಪುಷ್ಪಲತಾ, ರೂಪಾ ಮಾಲತೇಶ್ ಶಿವಮೊಗ್ಗ, ರಶ್ಮಿ, ನಾಗರತ್ನಾ, ಲತಾ ಪ್ರಭಾಕರ್, ಮಂಜುಳಾ ಕೇರ್ತೋಜಿ ರಾವ್, ಗೌರಮ್ಮ ಭಂಡಾರಿ, ಶಾರದಾ ರಂಗನಾಥ್, ಗೀತಾ, ಸುಧಾಮಣಿ, ನಿರ್ಮಲಾ, ನೇತ್ರಾ ಸಂತೋಷ್ (ಜಿಲ್ಲಾ ಸಮಿತಿ ಸದಸ್ಯರು).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts