More

    ರಾಜ್ಯ, ಕೇಂದ್ರ ಸರ್ಕಾರ ಕ್ರಮವಹಿಸಲಿ

    ಕಂಪ್ಲಿ: ಕಾವೇರಿಗಾಗಿ ಕರ್ನಾಟಕ ಬಂದ್ ಬೆಂಬಲಿಸಿ ಇಲ್ಲಿನ ರೈತ ಸಂಘ, ಕನ್ನಡ ಪರ ಒಕ್ಕೂಟ ಸಂಘಟನೆ, ವಿದ್ಯುತ್ ಗುತ್ತಿಗೆದಾರರ ಸಂಘ ಶುಕ್ರವಾರ ಡಾ.ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದವು.

    ಇದನ್ನೂ ಓದಿ: ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ: ಜನವಾದಿ ಮಹಿಳಾ ಸಂಘಟನೆಯಿಂದ ಬೈಕ್ ರ್ಯಾಲಿ

    ಪ್ರಮುಖರಾದ ಬಿ.ವಿ.ಗೌಡ, ಸಿ.ಆರ್.ಹನುಮಂತ, ಬಿ.ರಮೇಶ್, ಬಳೆ ಮಲ್ಲಿಕಾರ್ಜುನ, ಜಿ.ಸಿ.ನಾಗರಾಜ ಮಾತನಾಡಿ, ರಾಜ್ಯದಲ್ಲಿ ಬರಗಾಲ ಆವರಿಸಿದೆ. ಕಾವೇರಿ ಕಣಿವೆ ನೀರಿಲ್ಲದಿದ್ದರೂ ತಮಿಳುನಾಡಿಗೆ ನೀರು ಹರಿಸಬೇಕೆನ್ನುವುದು ಖಂಡನೀಯ.

    ಕೆ.ಆರ್.ಎಸ್ ಜಲಾಶಯದಲ್ಲಿ ದಿನದಿಂದ ದಿನಕ್ಕೆ ನೀರಿನ ಮಟ್ಟ ಕುಸಿಯುತ್ತಿದೆ. ಅಲ್ಲದೆ ರೈತರು ಬೆಳೆದ ಬೆಳೆಗೆ ಮತ್ತು ಬೆಂಗಳೂರು ನಗರಕ್ಕೆ ಕುಡಿವ ನೀರು ಇಲ್ಲ. ಆದ್ದರಿಂದ ತಮಿಳುನಾಡಿಗೆ ನೀರು ಹರಿಸಬಾರದು. ರಾಜ್ಯ, ಕೇಂದ್ರ ಸರ್ಕಾರ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

    ಪದಾಧಿಕಾರಿಗಳಾದ ಹಬೀಬ್ ರೆಹಮಾನ್, ಕೆ.ಎಂ.ಹೇಮಯ್ಯಸ್ವಾಮಿ, ಬಿ.ಗಂಗಾಧರ, ಬಿ.ಸಿದ್ದಪ್ಪ, ಇಸ್ಮಾಯಿಲ್‌ಬೇಗ್, ಕರೇಕಲ್ ಮನೋಹರ, ಎ.ರಂಗಪ್ಪ, ಕೆ.ರಮೇಶ್, ಕೆ.ಗಂಗಾಧರ, ಡಿ.ಮುರಾರಿ, ಶರಣಪ್ಪ, ಎಚ್.ಲಿಂಗೇಶ್, ಕೆ.ತಿಮ್ಮಯ್ಯ, ದೊಡ್ಡಬಸಪ್ಪ, ವೆಂಕಟೇಶ ಚಿತ್ರಗಾರ್, ಎಚ್.ಬಿ.ಗಣೇಶ್ ಇತರರು ಪಾಲ್ಗೊಂಡಿದ್ದರು.

    ಉದ್ಭವ ಮಹಾಗಣಪತಿ ದೇವಸ್ಥಾನದಿಂದ ಡಾ.ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ಸಾಗುವತನಕ ಪ್ರಮುಖ ಬೀದಿಯ ಅಂಗಡಿಗಳು ಮುಚ್ಚಿ ನಂತರ ಎಂದಿನಂತೆ ತೆರೆದವು.

    ಶಾಲಾ ಕಾಲೇಜು, ಕಚೇರಿ, ಬ್ಯಾಂಕ್‌ಗಳು, ಸಾರಿಗೆ ಬಸ್‌ಗಳು ಕಾರ್ಯನಿರ್ವಹಿಸಿದವು. ಪಿಐ ಕೆ.ಬಿ.ವಾಸುಕುಮಾರ್ ನೇತೃತ್ವದ ಸಿಬ್ಬಂದಿ ಭದ್ರತೆ ಒದಗಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts