More

    ರಾಜ್ಯೋತ್ಸವ ನಾಡಹಬ್ಬವಾಗಿ ಆಚರಣೆಯಾಗಲಿ

    ರಾವಂದೂರು: ಕನ್ನಡ ರಾಜ್ಯೋತ್ಸವವನ್ನು ಕನ್ನಡಿಗರು ನಾಡಹಬ್ಬವನ್ನಾಗಿ ಆಚರಿಸಬೇಕು ಎಂದು ಕೆಪಿಸಿಸಿ ಸದಸ್ಯ ನಿತಿನ್ ವೆಂಕಟೇಶ್ ತಿಳಿಸಿದರು.

    ಗ್ರಾಮದ ಶ್ರೀ ಭುವನೇಶ್ವರಿ ಆಟೋ ಮಾಲೀಕರು ಮತ್ತು ಚಾಲಕರ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಮತ್ತು ಕನಕ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಪ್ರತಿಯೊಬ್ಬ ಕನ್ನಡಿಗ ಮಾತೃಭಾಷೆಗೆ ಮೊದಲ ಆದ್ಯತೆ ನೀಡಬೇಕು. ವ್ಯಾಪಾರಸ್ಥರು ಮಳಿಗೆಗಳಿಗೆ ಕನ್ನಡದಲ್ಲಿಯೇ ನಾಮಫಲಕ ಹಾಕಿಸಬೇಕು ಎಂದು ಸಲಹೆ ನೀಡಿದರು.

    ಕನಕದಾಸರು ಶ್ರೇಷ್ಠ ಕೀರ್ತನಕಾರ. ಅವರ ಜೀವನ ಚರಿತ್ರೆ ಯುವಕರಿಗೆ ದಾರಿದೀಪವಾಗಲಿ. ಅವರ ತತ್ವ ಮತ್ತು ಆದರ್ಶಗಳನ್ನು ಪಾಲಿಸಬೇಕು ಎಂದು ತಿಳಿಸಿದರು.

    ಶರಣಸಾಹಿತ್ಯ ಪರಿಷತ್‌ನ ರಾವಂದೂರು ಹೋಬಳಿ ಅಧ್ಯಕ್ಷ ಆರ್.ಎಸ್.ಮಹೇಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ.ಸ್ವಾಮಿ ಮಾತನಾಡಿದರು. ಗ್ರಾ.ಪಂ.ಅಧ್ಯಕ್ಷೆ ಸುನೀತವಾಸು, ಬಿಜೆಪಿ ಮುಖಂಡ ಆರ್.ಟಿ.ಸತೀಶ್, ಗ್ರಾ.ಪಂ. ಸದಸ್ಯೆ ಶಿವಕುಮಾರಿ, ತಾ.ಪಂ. ಮಾಜಿ ಸದಸ್ಯ ಆರ್.ಸಿ.ಚಂದ್ರು, ಮುಖಂಡರಾದ ಡಿ.ಎಸ್.ನಂದೀಶ್, ಕೀರ್ತಿ, ಅಂಬಿ, ಆರ್.ಆರ್.ತೋಂಟಪ್ಪ, ವಿಜಯೇಂದ್ರ, ಮಹದೇವ್, ನಿವೃತ್ತ ಯೋಧ ಶಿವು, ಆಟೋ ಚಾಲಕರ ಸಂಘದ ಅಧ್ಯಕ್ಷ ಶ್ರೀನಿವಾಸ್, ಚಂದ್ರು ಮತ್ತಿತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts