More

    ಚೈತನ್ಯ ಅನ್ವೇಷಣೆ ಪರಮ ಗುರಿಯಾಗಲಿ

    ಶೃಂಗೇರಿ: ಅಂತರಂಗದಲ್ಲಿರುವ ಚೈತನ್ಯ ಅನ್ವೇಷಣೆ ಪರಮ ಗುರಿಯಾಗಬೇಕು ಎಂದು ಆದಿಚುಂಚನಗಿರಿ ಶೃಂಗೇರಿ ಶಾಖಾಮಠದ ಶ್ರೀ ಗುಣನಾಥ ಸ್ವಾಮೀಜಿ ತಿಳಿಸಿದರು.

    ಗುರುವಾರ ಚುಂಚೋತ್ಸವ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಜೀವನದ ಮೌಲ್ಯಗಳು ಮಾನವೀಯತೆ ನೆಲೆಗಟ್ಟಿನಲ್ಲಿ ಇರಬೇಕು ಎಂಬ ಸಂದೇಶವನ್ನು ಡಾ. ಬಾಲಗಂಗಾಧರನಾಥ ಸ್ವಾಮೀಜಿ ನೀಡಿದ್ದಾರೆ. ಅವರು ಮಾಡಿರುವ ಸತ್ಕಾರ್ಯಗಳು ದೇಶದ ಉನ್ನತೀಕರಣಕ್ಕೆ ಕೊಡುಗೆಯಾಗಿವೆ. ಸ್ವಾಮೀಜಿ ಅವರ ಆದರ್ಶಗಳನ್ನು ನಾವು ಪಾಲಿಸಬೇಕು ಎಂದರು.
    ಡಾ. ಬಾಲಗಂಗಾಧರನಾಥ ಸ್ವಾಮೀಜಿ ನೆನಪಿನಲ್ಲಿ ಶೃಂಗೇರಿ ಶಾಖಾಮಠದಲ್ಲಿ ಆಧ್ಯಾತ್ಮಿಕ ಆಲಯ ಹಾಗೂ ಮ್ಯೂಸಿಯಂ ನಿರ್ಮಾಣ ಪ್ರಕ್ರಿಯೆ ಪ್ರಾರಂಭಗೊಂಡಿದೆ. ಇಲ್ಲಿರುವ ಕೊಳದ ನಡುವೆ ಆಲಯ ಸ್ಥಾಪಿಸಿ ಅದನ್ನು ಪ್ರತಿನಿತ್ಯ ಪೂಜಿಸುವ ಕೈಂಕರ್ಯಕ್ಕೆ ನಾಲ್ಕು ವರ್ಷಗಳ ಒಳಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
    ಚಿಕ್ಕಮಗಳೂರು ಎಐಟಿ ಪ್ರಾಚಾರ್ಯ ಡಾ. ಜಯದೇವ್ ಮಾತನಾಡಿ, ಈಗಿನ ಶಿಕ್ಷಣ ಅಂಕಗಳಿಕೆಗೆ ಸೀಮಿತವಾಗಿದೆ. ಡಾ. ಬಾಲಗಂಗಾಧರನಾಥ ಸ್ವಾಮೀಜಿ ಕೇವಲ 480 ತಿಂಗಳಲ್ಲಿ 500 ವಿದ್ಯಾಸಂಸ್ಥೆ ಕಟ್ಟಿದರು. ನಾಲ್ಕು ದಶಕಗಳ ಹಿಂದೆ ಚಿಕ್ಕಮಗಳೂರಿನಲ್ಲಿ ಇಂಜಿನಿಯರಿಂಗ್ ಕಾಲೇಜು ಆರಂಭಿಸಿ ಗ್ರಾಮೀಣ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲ ಮಾಡಿಕೊಟ್ಟರು. ಬಡವರು, ಅಂಧರ ಬದುಕಿಗೆ ಬೆಳಕಾಗಿ ಅವರು ಮಾಡಿರುವ ಮಹತ್ಕಾರ್ಯಗಳು ಚಿರನೂತನ. ದೇಶಕಂಡ ಅಪರೂಪದ ಅಕ್ಷರ ಸಂತ ಎಂದು ಬಣ್ಣಿಸಿದರು.
    ಕುವೆಂಪು ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ. ನೆಲ್ಲಿಕಟ್ಟೆ ಸಿದ್ದೇಶ್ ಅವರು ಪುಸ್ತಕಗಳನ್ನು ಬಿಡುಗಡೆಗೊಳಿಸಿ ಮಾತನಾಡಿ, ಚುಂಚೋತ್ಸವ ಕೇವಲ ಉತ್ಸವ ಅಲ್ಲ. ವ್ಯಕ್ತಿತ್ವ ವಿಕಸನದ ಉತ್ಸವ. ಸ್ವಾಮೀಜಿ ಅವರ ಜೀವನಚರಿತ್ರೆ ವಿಶ್ವವಿದ್ಯಾಲಯದ ಪಠ್ಯಪುಸ್ತಕವಾಗಬೇಕು. ಅವರ ಜೀವನದರ್ಶನ ಮಕ್ಕಳಿಗೆ ಪ್ರೇರಕಶಕ್ತಿಯಾಗಬೇಕು ಎಂದು ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts