More

    ಅಂಚೆ ಜೀವವಿಮೆ ಸದುಪಯೋಗವಾಗಲಿ

    ಅರಕಲಗೂಡು: ಗ್ರಾಮೀಣ ಜನತೆಗೆ ಜೀವವಿಮಾ ಸೌಲಭ್ಯಗಳನ್ನು ಸುಲಭವಾಗಿ ದೊರಕಿಸಬೇಕೆಂಬ ಉದ್ದೇಶದಿಂದ ಕೇಂದ್ರ ಸರ್ಕಾರ ಗ್ರಾಮೀಣ ಅಂಚೆ ಜೀವವಿಮೆ ಆರಂಭಿಸಿದ್ದು, ಇದರ ಸಂಪೂರ್ಣ ಸದುಪಯೋಗ ಆಗಬೇಕು ಎಂದು ಹೊಳೆನರಸೀಪುರ ಅಂಚೆ ನಿರೀಕ್ಷಕ ನವೀನ್ ಸಿಂಗ್ ಹೇಳಿದರು.

    ತಾಲೂಕಿನ ರಾಮನಾಥಪುರ ಗ್ರಾಮ ಪಂಚಾಯಿತಿ ಆವರಣದಲ್ಲಿ ಭಾರತೀಯ ಅಂಚೆ ಇಲಾಖೆ, ಹಾಸನ ವಿಭಾಗದ ಅಂಚೆ ಅಧೀಕ್ಷಕರ ಕಾರ್ಯಾಲಯ, ಅಂಚೆ ಕಚೇರಿಯ ಉಳಿತಾಯ ಯೋಜನೆಗಳ ವಿಭಾಗದ ಸಹಯೋಗದಲ್ಲಿ ಶುಕ್ರವಾರ ಆಯೋಜಿಸಿದ್ದ ಗ್ರಾಮೀಣ ಅಂಚೆ ಜೀವವಿಮೆ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ದೇಶದಾದ್ಯಂತ ಪಸರಿಸಿರುವ ಸುಮಾರು ಒಂದೂವರೆ ಲಕ್ಷ ಅಂಚೆ ಕಚೇರಿಗಳಲ್ಲಿ ಗ್ರಾಮೀಣ ಅಂಚೆ ಜೀವವಿಮೆ ಮಾಡಿರುವ ಸೌಲಭ್ಯಗಳನ್ನು ಗ್ರಾಮೀಣ ಜನತೆಗಾಗಿ ನೀಡಲಾಗಿದೆ ಎಂದರು.

    ಪಿಡಿಒ ಕುಮಾರಸ್ವಾಮಿ ಮಾತನಾಡಿ, ಭಾರತೀಯ ಅಂಚೆ ಇಲಾಖೆಯಿಂದ ಆಧಾರ್ ಹೊಸ ನೋಂದಣಿ, ವಿಳಾಸ ಬದಲಾವಣೆ, ಬಯೋಮೆಟ್ರಿಕ್, ಮೊಬೈಲ್ ನಂಬರ್ ತಿದ್ದುಪಡಿ ಮಾಡುತ್ತಿದ್ದು, ಇದರ ಉಪಯೋಗವನ್ನು ಗ್ರಾಮೀಣ ಜನರು ಮಾಡಿಸಿಕೊಳ್ಳಲು ಮನವಿ ಮಾಡಿದರು.

    ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪವನಕುಮಾರಿ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಕಾರ್ಯದರ್ಶಿ ಚಲುವಮೂರ್ತಿ, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಅಧ್ಯಕ್ಷ ಎಂ.ಎನ್.ಕುಮಾರಸ್ವಾಮಿ, ಮುಖಂಡ ಕುಮಾರ್, ಅಂಚೆ ಕಚೇರಿಯ ಪೋಸ್ಟ್‌ಮಾಸ್ಟರ್ ಸುರೇಶ್, ಜಮೀರ್, ಸಂತೋಷ, ವಿಶ್ವನಾಥ್, ಸುರೇಶ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts