More

    ದೇಶದಲ್ಲಿ ಏಕ ರೀತಿ ಕಾನೂನು ಜಾರಿಯಾಗಲಿ

    ರಾಯಚೂರು: ಭ್ರಷ್ಟತೆ ತೊಲಗಿದಾಗ ಮಾತ್ರ ದೇಶ ರಾಜರಾಜ್ಯವಾಗಲು ಸಾಧ್ಯವಾಗಲಿದೆ. ಎಲ್ಲರಿಗೂ ಸಮಾನವಾದ ಕಾನೂನು ಜಾರಿಯಾದರೆ ಮಾತ್ರ ರಾಮರಾಜ್ಯದ ಕನಸು ನನಸಾಗಲಿದೆ ಎಂದು ಉಡುಪಿ ಲಿಮಾರು ಮಠದ ಪೀಠಾಪತಿ ವಿದ್ಯಾೀಶ ತೀರ್ಥರು ಹೇಳಿದರು.
    ಸ್ಥಳೀಯ ಜೋಡು ವೀರಾಂಜಿನೇಯ ದೇವಸ್ಥಾನದಲ್ಲಿ 9 ದಿನಗಳ ಕಾಲ ಹಮ್ಮಿಕೊಂಡಿರುವ ಶ್ರೀ ರಾಮೋತ್ಸವ ಕಾರ್ಯಕ್ರಮಕ್ಕೆ ಮಂಗಳವಾರ ಚಾಲನೆ ನೀಡಿ ಆಶೀರ್ವಚನ ನೀಡಿ, ಯಾವಾಗ ನಾವು ತ್ಯಾಗಿಗಳಾಗುತ್ತೇವೆಯೋ ಆಗ ಹೃದಯದಲ್ಲಿ ರಾಮ ಬಂದು ನೆಲೆಸುತ್ತಾನೆ ಎಂದರು.
    ತ್ರೇತಾಯುಗದಲ್ಲಿ ದಶರಥ ಮಹಾರಾಜ ಸಂತಾನಕ್ಕಾಗಿ ಯಜ್ಞ ಮಾಡಿದ. ಅದೇ ರೀತಿ ರಾಜನಾದವನು ದೇಶಕ್ಕಾಗಿ ಯಜ್ಞ ಮಾಡಿದರ ಲವಾಗಿ ಅಯೋಧ್ಯೆಯಲ್ಲಿ ರಾಮ ಪ್ರತಿಷ್ಠಿತನಾಗಿದ್ದಾನೆ. ರಾಮದೇವರು ದಂಡಕಾರಣ್ಯಕ್ಕೆ ಬಂದದ್ದು ದುಷ್ಟರ ಉಪಟಳ ದೂರ ಮಾಡಲು. ರಾಮೋತ್ಸವವನ್ನು ನಿರ್ಭೀತಿಯಿಂದ ಆಚರಿಸುವ ಕಾಲ ಬಂದಾಗ ಅದು ರಾಮರಾಜ್ಯವಾಗಲಿದೆ ಎಂದು ಹೇಳಿದರು.
    ಲಿಮಾರು ಮಠದ ಕಿರಿಯ ಪೀಠಾಪತಿ ವಿದ್ಯಾರಾಜೇಶ್ವರ ತೀರ್ಥರು ಅನುಗ್ರಹ ಸಂದೇಶ ನೀಡಿ, ಭಕ್ತರನ್ನು ಹುಡುಕಿಕೊಂಡು ಭಗವಂತ ಬರುತ್ತಾನೆ. ಭಕ್ತರಿಗ ಎಬರುವ ಆಪತ್ತನ್ನು ಪರಿಹರಿಸಿ ಸಂಪತ್ತನ್ನು ನೀಡುವುದು ರಾಮನ ಸಂಕಲ್ಪ. ಅನಿಷ್ಟವನ್ನು ನಾಶಮಾಡಿ ಇಷ್ಟಾರ್ಥ ಕೊಡುವವವನೇ ರಾಮನಾಗಿದ್ದಾನೆ ಎಂದರು.
    ಇದಕ್ಕೂ ಪೂರ್ವದಲ್ಲಿ ಬನ್ನಿಕಾಳಿಕಾಂಬ ದೇವಸ್ಥಾನದಿಂದ ಜೋಡು ವೀರಾಂಜಿನೇಯ ದೇವಸ್ಥಾನದವರೆಗೆ ಶೋಭಾಯಾತ್ರೆ ನಡೆಸಲಾಯಿತು. ಕಾರ್ಯಕ್ರಮದಲ್ಲಿ ರಾಮೋತ್ಸವ ಸಮಿತಿ ಅಧ್ಯಕ್ಷ ನರಸಿಂಗರಾವ್ ದೇಶಪಾಂಡೆ, ಉಪಾಧ್ಯಕ್ಷ ದಾನಪ್ಪ ಯಾದವ, ಕಾರ್ಯಾಧ್ಯಕ್ಷ ವೇಣುಗೋಪಾಲ ಇನಾಮದಾರ್, ವಿಷ್ಣುತೀರ್ಥ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts