More

    ಕರುನಾಡಲ್ಲಿ ಕನ್ನಡಿಗನೇ ಸಾರ್ವಭೌಮನಾಗಲಿ

    ಬೆಟ್ಟದಪುರ: ಕನ್ನಡ ರಾಜ್ಯೋತ್ಸವ ಧರ್ಮಗಳ ಹಂಗಿಲ್ಲದ ಹಬ್ಬ. ಇಂತಹ ಪುಣ್ಯಭೂಮಿಯಲ್ಲಿ ಕನ್ನಡಿಗನೇ ಸಾರ್ವಭೌಮನಾಗಬೇಕು ಎಂದು ಪಿರಿಯಾಪಟ್ಟಣ ತಹಸೀಲ್ದಾರ್ ಕುಂಞ ಅಹಮದ್ ಅಭಿಪ್ರಾಯಪಟ್ಟರು.

    ಕನ್ನಡ ಸಾಹಿತ್ಯ ಪರಿಷತ್‌ನ ಬೆಟ್ಟದಪುರ ಹೋಬಳಿ ಘಟಕ ಹಾಗೂ ಅಮೋಘ ವರ್ಷ ಅಮೃತವರ್ಷಿಣಿ ಸೇವಾ ಪ್ರತಿಷ್ಠಾಪನೆ ಪ್ರಸ್ತಾ ವತಿಯಿಂದ ಬುಧವಾರ ಗ್ರಾಮದ ಕುವೆಂಪು ವೃತ್ತದ ಬಳಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಅವರ ಹುಟ್ಟೂರು ಬೆಟ್ಟದತುಂಗ ವ್ಯಾಪ್ತಿಯ ಈ ಪವಿತ್ರ ಸ್ಥಳದಲ್ಲಿ ಕನ್ನಡ ಹಬ್ಬದ ಆಚರಣೆಗೆ ವಿಶೇಷವಿದೆ. ಕನ್ನಡ ಭಾಷೆಯಲ್ಲಿರುವ ಮಹಾಕಾವ್ಯ, ಕೃತಿಗಳನ್ನು ಬೇರೊಂದು ಭಾಷೆಯಲ್ಲಿ ಕಾಣಲು ಸಾಧ್ಯವಿಲ್ಲ ಎಂದರು.

    ಕಸಾಪ ನಿಕಟಪೂರ್ವ ಅಧ್ಯಕ್ಷ ಗೊರಹಳ್ಳಿ ಜಗದೀಶ್ ಮಾತನಾಡಿ, ರಾಜ್ಯದಲ್ಲಿ ಪ್ರಥಮ ಬಾರಿಗೆ ಪಿರಿಯಾಪಟ್ಟಣದ ತಹಸೀಲ್ದಾರ್ ಕಚೇರಿಗೆ ಮಿನಿ ವಿಧಾನಸೌಧ ಎಂಬ ಹೆಸರಿನ ಬದಲು ತಾಲೂಕು ಆಡಳಿತ ಭವನ ಎಂದು ನಾಮಕರಣ ಮಾಡಿದ ಹೆಗ್ಗಳಿಕೆ ಪಿರಿಯಾಪಟ್ಟಣ ಕಸಾಪಗೆ ಸಲ್ಲುತ್ತದೆ ಎಂದರು.

    ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಬಿ.ವಿ.ಮಂಜುನಾಥ್(ಶಿಕ್ಷಣ), ಅಯ್ಯರ್ ಗಿರೀಶ್ (ಗ್ರಾಪಂ ಅಧ್ಯಕ್ಷ), ಪ್ರೀತಿ ಅರಸ್ (ಗ್ರಾಪಂ ಅಧ್ಯಕ್ಷೆ), ಬಿ.ಜೆ.ದೇವರಾಜು(ರೈತ ಮುಖಂಡ), ಶಫಿ ಉಲ್ಲಾ ಷರಿಫ್ (ಕಲಾವಿದ), ಸರಸ್ವತಿ ಶಂಕರ್ (ಉದ್ಯಮಿ), ಚಪ್ಪರದಹಳ್ಳಿ ಪುನೀತ್(ಮಾಧ್ಯಮ), ಗೊರಳ್ಳಿ ಸಿಂಚನಾ(ಕವಯತ್ರಿ) ಅವರನ್ನು ಗಣ್ಯರು ಹಾಗೂ ಪರಿಷತ್‌ನ ಪದಾಧಿಕಾರಿಗಳು ಸನ್ಮಾನಿಸಿದರು.

    ಪಿಎಸ್‌ಐ ಪ್ರಕಾಶ್ ಎಂ.ಎತ್ತಿನಮನಿ, ಡಿಟಿಎಂಎನ್ ವಿದ್ಯಾಸಂಸ್ಥೆ ಅಧ್ಯಕ್ಷ ಚಂದ್ರಶೇಖರ, ಕಸಾಪ ತಾಲೂಕು ಅಧ್ಯಕ್ಷ ನವೀನ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಆಲನಹಳ್ಳಿ ಕೆಂಪರಾಜು, ಕಾರ್ಯದರ್ಶಿ ನಂಜುಂಡಸ್ವಾಮಿ, ಮಹಿಳಾ ಘಟಕದ ಅಧ್ಯಕ್ಷೆ ಆಶಾ ಮಹದೇವ್, ಬೆಟ್ಟದಪುರ ಘಟಕದ ಅಧ್ಯಕ್ಷ ಸುರಗಳ್ಳಿ ವೆಂಕಟೇಶ್, ಗೌರವ ಅಧ್ಯಕ್ಷ ಸಣ್ಣಸ್ವಾಮಿಗೌಡ, ಕಾರ್ಯದರ್ಶಿ ಆಲೂರು ಮಹೇಶ್, ಪುಟ್ಟರಾಜು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts