More

    ವರದಿ ನೆಗೆಟಿವ್​ ಬಂದ್ರೂ ಮೈಮರೆಯುವ ಸಮಯ ಇದಲ್ಲ…ಆದ್ರೂ ರಾಮನಗರಕ್ಕೆ ಸರ್ಕಾರ ಇನ್ನಷ್ಟು ವಿನಾಯಿತಿ ನೀಡಲಿ: ಎಚ್​. ಡಿ.ಕುಮಾರಸ್ವಾಮಿ

    ಬೆಂಗಳೂರು: ಪಾದರಾಯನಪುರ ಗಲಭೆ ಆರೋಪಿಗಳನ್ನು ರಾಮನಗರ ಜೈಲಿಗೆ ಹಾಕಿದ ಸರ್ಕಾರದ ಕ್ರಮವನ್ನು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ತೀವ್ರವಾಗಿ ಖಂಡಿಸಿದ್ದರು.

    ರಾಮನಗರದಲ್ಲಿ ಒಂದೂ ಕರೊನಾ ಪ್ರಕರಣಗಳು ಇರಲಿಲ್ಲ. ಈಗ ಬೇಕೆಂದು ಪಾದರಾಯನಪುರದಿಂದ ಶಂಕಿತರನ್ನು ಕರೆದುಕೊಂಡು ಹೋಗಿ ಅಲ್ಲಿನ ಜೈಲಿನಲ್ಲಿ ಇಡಲಾಗಿದೆ. ಇವರಿಂದ ರಾಮನಗರಕ್ಕೂ ಸೋಂಕು ತಗುಲಿದರೆ ಏನು ಮಾಡುವುದು ಎಂದು ಪ್ರಶ್ನಿಸಿದ್ದರು.

    ಅದರಲ್ಲೂ ಜೈಲಿನಲ್ಲಿದ್ದ ಇಬ್ಬರಿಗೆ ಕರೊನಾ ಪಾಸಿಟಿವ್​ ಬಂದ ಬಳಿಕ ಉಗ್ರ ಪ್ರತಿಭಟನೆಯ ಎಚ್ಚರಿಕೆಯನ್ನೂ ಕೊಟ್ಟಿದ್ದರು. ಆ ಇಬ್ಬರು ಬಂಧಿತರಿಗೆ ಕರೊನಾ ಕಾಣಿಸಿಕೊಂಡ ಬೆನ್ನಲ್ಲೇ ಸರ್ಕಾರ ಎಚ್ಚೆತ್ತುಕೊಂಡು ಎಲ್ಲರನ್ನೂ ಬೆಂಗಳೂರಿಗೆ ಸ್ಥಳಾಂತರ ಮಾಡಿತ್ತು. ಅಷ್ಟಾದ ಮೇಲೆ ಅಲ್ಲಿನ ಜೈಲು ಸಿಬ್ಬಂದಿ, ಆರೋಗ್ಯ, ಪೊಲೀಸ್ ಇಲಾಖೆ ಸೇರಿ ಒಟ್ಟು 68 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಇದೀಗ ಅವರಲ್ಲಿ ಕರೊನಾ ನೆಗೆಟಿವ್ ಬಂದಿದೆ.

    ಈಗ ಮತ್ತೆ ಎಚ್​.ಡಿ.ಕುಮಾರಸ್ವಾಮಿಯವರು ಟ್ವೀಟ್​ ಮಾಡಿದ್ದಾರೆ. ರಾಮನಗರ ಕಾರಾಗೃಹದಲ್ಲಿ ಇರಿಸಲಾಗಿದ್ದ ರಾಜಧಾನಿಯ ಕೈದಿಗಳಿಂದ ಕರೋನಾ ಸೋಂಕು ಭೀತಿಗೊಳಗಾಗಿದ್ದ ನಗರಸಭೆ, ಜೈಲು ಸಿಬ್ಬಂದಿ, ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ ಸೇರಿ 68 ಮಂದಿಯ ವೈದ್ಯಕೀಯ ಪರೀಕ್ಷೆ ವರದಿ ನೆಗೆಟಿವ್ ಬಂದಿರುವುದು ಸಮಾಧಾನ ತಂದಿದೆ.

    ಇನ್ನೂ ಹೆಚ್ಚಿನ ಮುತುವರ್ಜಿ ವಹಿಸುವ ಮೂಲಕ ರಾಮನಗರ ಜಿಲ್ಲೆಯನ್ನು ಕರೊನಾ ಮುಕ್ತ ಜಿಲ್ಲೆಯನ್ನಾಗಿ ಕಾಯ್ದುಕೊಳ್ಳಲು ಎಲ್ಲರೂ ಸಂಕಲ್ಪ ಮಾಡೋಣ. ಸರ್ಕಾರವು ಈ ನಿಟ್ಟಿನಲ್ಲಿ ಹೆಚ್ಚಿನ ಜಾಗ್ರತೆ ವಹಿಸಲಿ. ನೆಗೆಟಿವ್ ವರದಿ ಬಂದಿದೆ ಎಂದು ಮೈಮರೆಯುವ ಸಮಯ ಇದಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.

    ಕೆಲವು ತಾಂತ್ರಿಕ ಕಾರಣಗಳಿಂದ ರಾಮನಗರ ಕೆಂಪುವಲಯವಾಗಿ ಮಾರ್ಪಾಡಾಗಿತ್ತು. ಅದನ್ನೀಗ ಹಸಿರುವ ವಲಯವನ್ನಾಗಿ ಪರಿವರ್ತಿಸಿ, ಲಾಕ್​ಡೌನ್​ನಲ್ಲಿ ಕೆಲವು ವಿನಾಯಿತಿಗಳನ್ನು ಘೋಷಿಸಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸುತ್ತೇನೆ ಎಂದಿದ್ದಾರೆ. 

    ದಿಗ್ಬಂಧನ ಕ್ರಮೇಣ ಸಡಿಲಿಕೆಗೆ ವೈದ್ಯರ ಸಲಹೆ; ಗುಣಮಟ್ಟದ ಪಿಪಿಇ ಕಿಟ್​ ಪೂರೈಕೆಗೆ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts