More

    ಬಿಲ್ಲವ ಸಮುದಾಯಕ್ಕೆ ಪ್ರಾತಿನಿಧ್ಯ ದೊರೆಯಲಿ

    ಬಾಳೆಹೊನ್ನೂರು: ಹಿಂದುಳಿದ ವರ್ಗವಾದ ಬಿಲ್ಲವ, ಈಡಿಗ ಸಮುದಾಯಕ್ಕೆ ಎಲ್ಲ ರಾಜಕೀಯ ಪಕ್ಷಗಳು ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕು ಎಂದು ಜಿಲ್ಲಾ ಬ್ರಹ್ಮ ಶ್ರೀನಾರಾಯಣಗುರು ಒಕ್ಕೂಟದ ಅಧ್ಯಕ್ಷ ಎಚ್.ಎಂ.ಸತೀಶ್ ಹೇಳಿದರು.
    ಪಟ್ಟಣದ ಬಿಲ್ಲವ ಸಮಾಜ ಸೇವಾ ಸಂಘದಿಂದ ಭಾನುವಾರ ಆಯೋಜಿಸಿದ್ದ ಅಪ್ಪೆ ಮಂತ್ರ ದೇವತೆ ಎಂಬ ತುಳು ನಾಟಕ ಪ್ರದರ್ಶನದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಇತ್ತೀಚೆಗಷ್ಟೆ ಹಿಂದುಳಿದ ವರ್ಗಗಳ ಆಯೋಗ ಸಲ್ಲಿಸಿರುವ ಜಾತಿಗಣತಿ ವರದಿ ಪ್ರಕಾರ 15 ಲಕ್ಷಕ್ಕೂ ಹೆಚ್ಚು ಬಿಲ್ಲವ, ಈಡಿಗ ಸಮುದಾಯದವರು ರಾಜ್ಯದಲ್ಲಿ ನೆಲೆ ನಿಂತಿದ್ದಾರೆ ಎಂದು ತಿಳಿಸಲಾಗಿದೆ. ಈ ಹಿಂದೆ ರಾಜ್ಯದಲ್ಲಿ ಸಮುದಾಯದ ಆರು ಸಂಸದರು ರಾಜ್ಯವನ್ನು ಪ್ರತಿನಿಸುತ್ತಿದ್ದರು. ಆದರೆ ಇಂದು 15 ಲಕ್ಷ ಸಮುದಾಯದವರಿದ್ದರೂ ಸಹ ಸಮಾಜಕ್ಕೆ ಸೂಕ್ತ ರಾಜಕೀಯ ಸ್ಥಾನಮಾನಗಳು ಲಭಿಸಿಲ್ಲ ಎಂದರು.
    ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಸಹ ಸಮುದಾಯದವರಿಗೆ ಯಾವುದೇ ರಾಜಕೀಯ ಪಕ್ಷಗಳು ಕಳೆದ ಸಂಸತ್ ಚುನಾವಣೆಯಲ್ಲಿ ಟಿಕೆಟ್ ನೀಡಿಲ್ಲ. ಈ ಹಿಂದೆ ಸಮುದಾಯದ ಮುಖಂಡರಾಗಿದ್ದ ಜನಾರ್ಧನ ಪೂಜಾರಿ, ಎಸ್.ಬಂಗಾರಪ್ಪ ಅವರು ಸಂಸದರಾಗಿ ಸಮಾಜವನ್ನು ತುತ್ತತುದಿಗೆ ನಿಲ್ಲಿಸುವ ಪ್ರಯತ್ನ ಮಾಡಿದ್ದರು ಎಂದು ತಿಳಿಸಿದರು.
    ಈ ಹಿನ್ನೆಲೆಯಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಮ್ಮ ಸಮುದಾಯ ಬಾಂಧವರಿಗೆ ಲೋಕಸಭೆಗೆ ಟಿಕೆಟ್ ನೀಡಬೇಕು ಎಂಬುದು ನಮ್ಮ ಆಗ್ರಹವಾ. ಈ ಬಗ್ಗೆ ಇದೇ ಮಾ.10ರಂದು ದಕ್ಷಿಣ ಕನ್ನಡದಲ್ಲಿ ನಡೆಯಲಿರುವ ಬಿಲ್ಲವ ರಾಷ್ಟ್ರೀಯ ಮಹಾಮಂಡಳದ ರಜತ ಮಹೋತ್ಸವದಲ್ಲಿ ನಿರ್ಣಯವನ್ನು ಕೈಗೊಳ್ಳಲಿದೆ.
    ಕೊಪ್ಪ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಸಂದೀಪ್ ಸೇರಿದಂತೆ ಹಲವು ಗಣ್ಯರನ್ನು ಸನ್ಮಾನಿಸಲಾಯಿತು. ಬಿಲ್ಲವ ಸಂಘದ ಅಧ್ಯಕ್ಷ ಎಂ.ಜೆ.ಮೋಹನ್, ಗೌರವಾಧ್ಯಕ್ಷ ಸತೀಶ್ ಅರಳೀಕೊಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಎಂ.ಎಸ್.ಚನ್ನಕೇಶವ್, ಮಾಜಿ ಸದಸ್ಯ ಪಿ.ಆರ್.ಸದಾಶಿವ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts