More

    ಗ್ರಾಮೀಣ ಪ್ರದೇಶಕ್ಕೂ ಸ್ಕೇಟಿಂಗ್ ತಲುಪಲಿ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ನಗರದ ಮಕ್ಕಳಿಗೆ ಮಾತ್ರ ಸೀಮಿತ ಎನಿಸಿರುವ ಸ್ಕೇಟಿಂಗ್ ತರಬೇತಿ ಬರುವ ದಿನಗಳಲ್ಲಿ ಗ್ರಾಮೀಣ ಮಕ್ಕಳಿಗೂ ತಲುಪುವಂತಾಗಬೇಕು ಎಂದು ಡಿಡಿಪಿಐ ಎಸ್.ಎಸ್. ಕೆಳದಿಮಠ ಹೇಳಿದರು.
    ನಗರದ ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಧಾರವಾಡ ರೋಲರ್ ಸ್ಕೇಟಿಂಗ್ ರಿಂಕ್‌ನಲ್ಲಿ ಮಂಗಳವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸ್ಕೇಟಿಂಗ್ ಸ್ಪರ್ಧೆ ಹಾಗೂ ರಾಜ್ಯ ಮಟ್ಟದ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದ ಅವರು, ಇತರ ಕ್ರೀಡೆಗಳಿಗಿಂತ ಭಿನ್ನವಾಗಿರುವ ಸ್ಕೇಟಿಂಗ್ ಗ್ರಾಮೀಣ ಪ್ರದೇಶಕ್ಕೂ ತಲುಪಬೇಕು. ಈ ಆಟದಿಂದ ಮಕ್ಕಳು ಕ್ರಿಯಾಶೀಲರಾಗುವುದಲ್ಲದೇ, ದೈಹಿಕವಾಗಿಯೂ ಸಮರ್ಥರಾಗುತ್ತಾರೆ ಎಂದರು.
    ಆರ್‌ಎಂಎಸ್‌ಎ ಯೋಜನಾಧಿಕಾರಿ ಎಸ್.ಎಂ. ಹುಡೇದಮನಿ, ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಸದಲಗಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಬಿ. ಬಸಾಪುರ, ಹಿರಿಯ ದೈಹಿಕ ಶಿಕ್ಷಣ ಶಿಕ್ಷಕ ಸುನೀಲ ಹೊಂಗಲ, ಸ್ಕೇಟಿಂಗ್ ತರಬೇತುದಾರರಾದ ಮಲ್ಲಿಕಾರ್ಜುನ ಕಾಡಪ್ಪನವರ, ಶಶಿಧರ ಪಾಟೀಲ, ಅಕ್ಷಯ ಸೂರ್ಯವಂಶಿ, ವಿರುಪಾಕ್ಷ ಕಮ್ಮಾರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts