More

    ಮಾದಕ ವಸ್ತುಗಳ ಸೇವನೆಯಿಂದ ಜನರು ದೂರವಿರಲಿ

    ಬೆಟ್ಟದಪುರ: ಮದ್ಯ ಹಾಗೂ ಮಾದಕ ವಸ್ತುಗಳ ಸೇವನೆಯಿಂದ ಆರೋಗ್ಯ ಹಾಳಾಗಲಿದ್ದು, ಜನರಿಗೆ ಈ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆ ಇದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೊಡಗು ಜಿಲ್ಲಾ ನಿರ್ದೇಶಕಿ ಲೀಲಾವತಿ ಹೇಳಿದರು.

    ಯೋಜನೆಯ ಬೆಟ್ಟದಪುರ ವಲಯ ವತಿಯಿಂದ ಶನಿವಾರ ಗ್ರಾಮದಲ್ಲಿ ಆಯೋಜಿಸಿದ್ದ ಮಹತ್ಮ ಗಾಂಧೀಜಿ ಸ್ಮರಣೆ ಹಾಗೂ ದುಶ್ಚಟಗಳ ವಿರುದ್ಧದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾದಕ ವಸ್ತುಗಳಾದ ತಂಬಾಕು, ಗಾಂಜಾ, ಅಫೀಮು ವಿಷಕಾರಕ ವಸ್ತುಗಳು. ಇಂತಹ ಕೆಟ್ಟ ಅಭ್ಯಾಸದಿಂದ ದೂರವಿರಬೇಕು. ದುಶ್ಚಟ ಮುಕ್ತ ಸಮಾಜಕ್ಕೆ ಮಹಿಳೆಯರ ಪಾತ್ರ ಅಪಾರಚಾದದ್ದು. ಹಾಗಾಗಿ ಮಹಿಳೆಯರು ಆರಂಭಿಕ ಹಂತದಲ್ಲಿ ದುಶ್ಚಟಗಳಿಗೆ ಬಲಿಯಾಗದಂತೆ ತಡೆಗಟ್ಟಬೇಕು ಎಂದು ತಿಳಿಸಿದರು.

    ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಸ್ವಾಮಿನಾಯಕ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಮಾಜದಲ್ಲಿ ಕುಡುಕರ ಸಂಖ್ಯೆ ಹೆಚ್ಚುತ್ತಿದೆ. ಮದ್ಯಸೇವನೆ, ಮಾದಕ ವಸ್ತುಗಳ ಸೇವನೆಯಿಂದ ಹಲವಾರು ಸಂಸಾರ ಬೀದಿಪಾಲಾಗುತ್ತಿವೆ. ದುಶ್ಚಟ ತ್ಯಜಿಸಿ ನೆಮ್ಮದಿ ಜೀವನ ನಡೆಸಿದರೆ ಮಾತ್ರ ಬದುಕು ಕಟ್ಟಿಕೊಳ್ಳಬಹುದು ಎಂದರು.

    ಗಾಂಧೀಜಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಗ್ರಾಪಂ ಸದಸ್ಯೆ ಮಂಜುಳಾ, ಕೊಡಗು ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಬಿ.ಜೆ ದೇವರಾಜು, ಸದಸ್ಯರಾದ ರಾಮಚಂದ್ರ, ಮಲ್ಲೇಶ್, ಮಹದೇವ್. ಅರೋಗ್ಯ ಸಹಾಯಕಿ ದೇವಕಿ, ಉಪನ್ಯಾಸಕ ಲಕ್ಷ್ಮಿಕಾಂತ್, ವಲಯ ಯೋಜನಾಧಿಕಾರಿ ಸಂತೋಷಕುಮಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts