More

    ಜನಪದ ಕಲೆ ಉಳಿಸುವ ಕರ್ತವ್ಯವಾಗಲಿ

    ನರಗುಂದ: ಜನಪದ ಕಲೆ ಎಲ್ಲರಿಗೂ ಒಲಿಯುವುದಿಲ್ಲ. ಅದು ಜನರಿಂದ ಜನರಿಗೆ ಹರಡುವ ಮೂಲಕ ಅನೇಕ ತತ್ವಗಳು ಭಾರತೀಯರ ಮನದಾಳದಲ್ಲಿ ಇಂದಿಗೂ ನೆಲೆಸಿವೆ. ಇಂತಹ ಜನಪದ ಕಲೆಯನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಬೇಕು ಎಂದು ಪುಣ್ಯಾರಣ್ಯ ಪತ್ರಿವನಮಠದ ಡಾ. ಗುರುಸಿದ್ಧವೀರ ಶಿವಯೋಗಿ ಶಿವಾಚಾರ್ಯರು ಹೇಳಿದರು.

    ಪಟ್ಟಣದ ದಂಡಾಪೂರ ಬಡಾವಣೆಯ ಶ್ರೀಉಡಚಾ ಪರಮೇಶ್ವರಿ ದೇವಸ್ಥಾನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶ್ರೀಬೀರೇಶ್ವರ ಕಲಾ ತಂಡದಿಂದ ಇತ್ತೀಚೆಗೆ ಹಮ್ಮಿಕೊಂಡಿದ್ದ ಜನಪದ ಸಂಭ್ರಮ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

    ನಮ್ಮ ಭಾರತೀಯ ಪರಂಪರೆಯಲ್ಲಿ ಜನಪದ ಎನ್ನುವುದು ವಿಶಿಷ್ಟ ಕಲೆಯಾಗಿದೆ. ಈ ಮಹತ್ವದ ಕಲೆಯ ಉಳಿವಿಗಾಗಿ ಸರ್ಕಾರ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಶ್ರೀಗಳು ತಿಳಿಸಿದರು.

    ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಎಚ್.ಬಿ. ಅಸೂಟಿ ಮಾತನಾಡಿ, ಕಲೆ ಎನ್ನುವುದು ನಾಡಿನ ಪರಂಪರೆಯಲ್ಲಿ ಒಂದಾಗಿದೆ. ಜನಪದ ಶೈಲಿಯ ಹಳೆಯ ಸಂಪ್ರದಾಯಗಳನ್ನು ಪ್ರತಿಯೊಬ್ಬರೂ ಮುಂದುವರೆಸಿಕೊಂಡು ಹೋಗುವ ಸಂಕಲ್ಪ ಮಾಡಬೇಕಾಗಿದೆ ಎಂದು ತಿಳಿಸಿದರು.

    ಮಹೇಶಗೌಡ ಪಾಟೀಲ ಮಾತನಾಡಿದರು. ಪುರಸಭೆ ಮಾಜಿ ಅಧ್ಯಕ್ಷ ದ್ಯಾಮಣ್ಣ ಸವದತ್ತಿ ಮಾತನಾಡಿ, ಜನಪದ ಎಂದರೆ ಜ್ಞಾನದ ದೀವಿಗೆಯಾಗಿದೆ. ಹಳೇ ತಲೆಮಾರಿನ ಎಲ್ಲ ಸಂಗತಿಗಳನ್ನು ಹಾಡಿನ ರೂಪದಲ್ಲಿ ಪ್ರಸ್ತುತ ಪಡಿಸುವ ಜನಪದ ಗಾಯನ ಎಂದಿಗೂ ಅಮರವಾಗುವಂತೆ ನೋಡಿಕೊಳ್ಳಬೇಕಿದೆ ಎಂದು ತಿಳಿಸಿದರು. ನರಗುಂದ ಬ್ಲಾಕ್ ಕಾಂಗ್ರೆಸ್ ಘಟಕದ ಅಧ್ಯಕ್ಷ ಪ್ರವೀಣ ಯಾವಗಲ್ ಮಾತನಾಡಿದರು. ಶ್ರೀ ಬೀರೇಶ್ವರ ಕಲಾ ತಂಡದವರಿಂದ ವಿವಿಧ ಜನಪದ ಗೀತಗಾಯನ ಕಾರ್ಯಕ್ರಮ ಜರುಗಿತು. ಪುರಸಭೆ ಸದಸ್ಯ ಪ್ರಶಾಂತ ಜೋಶಿ, ಪಿಎಲ್​ಡಿ ಬ್ಯಾಂಕ್ ಉಪಾಧ್ಯಕ್ಷ ಉಮೇಶ ಯಳ್ಳೂರ, ಸಾಬಣ್ಣ ಸವದತ್ತಿ, ಫಕೀರಪ್ಪ ಸವದತ್ತಿ, ಗದಿಗೆಪ್ಪ ಸವದತ್ತಿ, ಗೋವಿಂದಪ್ಪ ಕುರಿ, ಸಿದ್ದಪ್ಪ ದುಂಡಿ, ಬೀರಪ್ಪ ದರಗದ, ನಿಂಗಪ್ಪ ಡೋಣಿ, ಶಿವಪ್ಪ ಕತ್ತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts