More

    ರೈತರ ಸಾಲ ವಸೂಲಾತಿ ಮುಂದೂಡಲಿ

    ಕೆ.ಆರ್.ನಗರ: ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದು ಸಹಕಾರ ಬ್ಯಾಂಕ್‌ಗಳಲ್ಲಿರುವ ರೈತರ ಸಾಲ ಹಾಗೂ ಬಡ್ಡಿಯನ್ನು ಪೂರ್ಣ ಮನ್ನಾ ಮಾಡಿ ವಸೂಲಾತಿಯನ್ನು 2025ರವರೆಗೆ ಮುಂದೂಡಬೇಕು ಎಂದು ಸಹಕಾರ ಮಹಾ ಮಂಡಳದ ಅಧ್ಯಕ್ಷ ಹಾಗೂ ಶಾಸಕ ಜಿ.ಟಿ.ದೇವೇಗೌಡ ಸರ್ಕಾರವನ್ನು ಒತ್ತಾಯಿಸಿದರು.

    ಪಟ್ಟಣದ ನವನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನ ಪ್ರಧಾನ ಕಚೇರಿಗೆ ಕಾರ್ಯನಿಮಿತ್ತ ಸೋಮವಾರ ಭೇಟಿ ನೀಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಸಹಕಾರ ಕ್ಷೇತ್ರದ ಬ್ಯಾಂಕ್ ಮತ್ತು ಸೊಸೈಟಿಗಳಲ್ಲಿ ರೈತರು ಪಡೆದಿರುವ ಸಾಲ ಮತ್ತು ಬಡ್ಡಿಯನ್ನು ಕಟ್ಟಲಾಗದೆ ಸಂಕಷ್ಟದಲ್ಲಿದ್ದಾರೆ. ಹಲವರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ. ಆದ್ದರಿಂದ ರೈತರ ಹಿತ ಕಾಯುವುದು ನಮ್ಮೆಲ್ಲರ ಜವಾಬ್ದಾರಿ. ಸರ್ಕಾರದ ಆರ್ಥಿಕ ಪರಿಸ್ಥಿತಿ ಬಗ್ಗೆ ಹೇಳುತ್ತಿರುವ ಮುಖ್ಯಮಂತ್ರಿ ಕನಿಷ್ಠ ಬಡ್ಡಿಯನ್ನಾದರೂ ಮನ್ನಾ ಮಾಡಿ ಸಾಲದ ವಸೂಲಾತಿ ಮುಂದೂಡಲಿ ಎಂದು ಆಗ್ರಹಿಸಿದರು.

    ರೈತರು ಮಳೆ ನಂಬಿಕೊಂಡು ವ್ಯವಸಾಯಕ್ಕಾಗಿ ಸಹಕಾರಿ ಬ್ಯಾಂಕ್ ಮತ್ತು ಸೊಸೈಟಿಗಳಲ್ಲಿ ಸಾಲ ಪಡೆದಿದ್ದಾರೆ. ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಬರ ಪರಿಸ್ಥಿತಿ ಅವರಿಸಿದೆ. ಬೆಳೆ ಪರಿಹಾರ ಇನ್ನೂ ಸಿಕ್ಕಿಲ್ಲ. ಈ ಸ್ಥಿತಿಯಲ್ಲಿ ಸಾಲ ವಸೂಲಾತಿಗೆ ಮುಂದಾಗದಿರುವುದು ಸೂಕ್ತ. ಈಗಾಗಲೇ ಅಧಿವೇಶನದಲ್ಲಿ ರೈತರ ಸಾಲ ಮತ್ತು ಬಡ್ಡಿ ಮನ್ನಾ ಹಾಗೂ ವಸೂಲಾತಿ ಮುಂದೂಡುವಂತೆ ಚರ್ಚಿಸಿದ್ದೇನೆ. ರೈತರು ಯಾವುದೇ ಆತಂಕಪಡಬಾರದು. ನಿಮ್ಮ ನೆರವಿಗೆ ಜೆಡಿಎಸ್ ಪಕ್ಷ ಸದಾ ಸಿದ್ಧವಿದೆ. ಈ ವಿಚಾರವಾಗಿ ಸರ್ಕಾರವು ಕೂಡ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂಬ ನಂಬಿಕೆ ಇದೆ ಎಂದರು.

    ನವನಗರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ತಂಬಾಕು ಮಂಡಳಿ ನಿವೃತ್ತ ಅಧಿಕಾರಿ ಕೆ.ಎನ್.ದಿನೇಶ್, ಬ್ಯಾಂಕ್‌ನ ನಿರ್ದೇಶಕರಾದ ವೈ.ಎಸ್.ಕುಮಾರ್, ಕೇಶವ, ಅಪ್ಸರ್ ಬಾಬು, ಮಹಾಲಕ್ಷ್ಮೀ ಸ್ವೀಟ್ಸ್ ಮಾಲೀಕ ಶಿವಕುಮಾರ್, ಮುಖಂಡರಾದ ಮಿರ್ಲೆ ಸುಜಯ್‌ಗೌಡ, ಡಾ.ಶರತ್, ಸೈಯಾದ್ ಅಸ್ಲಂ, ಮಂಜುನಾಥ್, ಮರಿಗೌಡ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts