More

    ಸಂಸ್ಕೃತಿ, ಸಾಹಿತ್ಯ ಚಲನಶೀಲವಾಗಿರಲಿ

    ಸಿದ್ದಾಪುರ: ಆಡಳಿತ ಮಾತ್ರ ಚೆನ್ನಾಗಿದ್ದರೆ ಸಾಲದು. ಸಮಾಜ ಸುಸಂಸ್ಕೃತವಾಗಿ ಕಾಣಲು ಕಲೆ, ಸಂಸ್ಕೃತಿ, ಸಾಹಿತ್ಯ ಅಗತ್ಯ. ಸಮಾಜದ ಎಲ್ಲ ಕ್ಷೇತ್ರಗಳೂ ಚಟುವಟಿಕೆಯಿಂದ ಚಲನಶೀಲವಾಗಿರಬೇಕು ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
    ಪಟ್ಟಣದ ರಾಘವೇಂದ್ರಮಠದ ಪೂರ್ಣಪ್ರಜ್ಞ ಸಭಾಮಂಟಪದಲ್ಲಿ ಡಾ. ಗಜಾನನ ಶರ್ಮ ಹುಕ್ಕಲು ಅವರ ‘ಚೆನ್ನಭೈರಾದೇವಿ’ ಕಾದಂಬರಿಯ ಎರಡನೇ ಆವೃತ್ತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
    ವೇದ, ಉಪನಿಷತ್ತುಗಳು ಹೇಗೆ ಶಾಶ್ವತವೋ ಹಾಗೇ ಉತ್ತಮ ಸಾಹಿತ್ಯವೂ ಶಾಶ್ವತವಾಗಿರುತ್ತದೆ. ದೇಶದ ಇತಿಹಾಸದ ಕುರಿತು ಮತ್ತಷ್ಟು ಅಧ್ಯಯನ ನಡೆಯಬೇಕು. ಯುವಪೀಳಿಗೆಗೆ ಅದರ ಮಹತ್ವದ ಅರಿವು ಮೂಡಿಸಬೇಕು. ಸಮಾಜದಲ್ಲಿ ಇತಿಹಾಸ ಪ್ರಜ್ಞೆ ಜಾಗೃತವಾಗಿರಬೇಕು. ಸುಮಾರು 54 ವರ್ಷಗಳ ಕಾಲ ಉತ್ತರ ಕನ್ನಡ ಜಿಲ್ಲೆಯ ಭಾಗವಾದ ನಗರೆ, ಹಾಡುವಳ್ಳಿ ರಾಜ್ಯವನ್ನು ಆಳಿದ ಗೇರುಸೊಪ್ಪೆಯ ಕಾಳುಮೆಣಸಿನ ರಾಣಿ ಎಂದೇ ಪ್ರಸಿದ್ಧವಾದ ಚೆನ್ನಭೈರಾದೇವಿ ನಮ್ಮ ನೆಲದವಳು. ಅವಳು ತನ್ನ ಆಡಳಿತದ ಕಾಲದಲ್ಲಿ ರಾಜ್ಯವನ್ನು ಸಂಪದ್ಭರಿತವಾಗಿಸುವುದರ ಜತೆಗೆ ನೆಮ್ಮದಿ, ಶಾಂತ ವಾತಾವರಣ ತರಲು ಶ್ರಮಿಸಿದ್ದಳು ಎಂದರು.
    ಕಾಡಿನಲ್ಲಿ ಬೆಳೆಯುತ್ತಿದ್ದ ಉತ್ಕೃಷ್ಟ ಗುಣಮಟ್ಟದ ಕಾಳುಮೆಣಸನ್ನು ನಾಡಿನಲ್ಲೂ ಬೆಳೆಯಬಹುದೆಂದು ತೋರಿಸಿ ಸಾಹಸ ಮೆರೆದವಳು. ಕಾಳುಮೆಣಸನ್ನು ವಿದೇಶಕ್ಕೆ ರಪ್ತು ಮಾಡಿ, ಬೆಳೆಗಾರರ ದುಡಿಮೆಗೆ ಮೌಲ್ಯ ತಂದುಕೊಟ್ಟವಳು. ರಾಣಿ ಚೆನ್ನಭೈರಾದೇವಿಗೆ ಕೊಡಬೇಕಾಗಿದ್ದ ಗೌರವವನ್ನು ನಾವು ಕೊಟ್ಟಿಲ್ಲ. ಇದೀಗ ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ ಗೀತೆಯ ಮೂಲಕ ಮೂರು ಕೋಟಿ ಜನರನ್ನು ತಲುಪಿದ ಸಾಹಿತಿ ಡಾ. ಗಜಾನನ ಶರ್ಮಾ ಚಿನ್ನಭೈರಾದೇವಿಯ ಹೆಸರನ್ನು ಹಸಿರಾಗಿರಿಸಲು ಅವಳ ಕುರಿತಾದ ಬೃಹತ್ ಕಾದಂಬರಿ ಬರೆದಿದ್ದು ಸ್ವಾಗತಾರ್ಹ ಎಂದರು.
    ಚಿಂತಕ ದೇವೇಂದ್ರ ಬೆಳೆಯೂರು ಚೆನ್ನಭೈರಾದೇವಿ ಕೃತಿ ಪರಿಚಯಿಸಿದರು. ಕೃತಿಕಾರ ಡಾ. ಗಜಾನನ ಶರ್ವ, ಲೇಖಕ ಡಾ. ಬೈರಮಂಗಲ ರಾಮೇಗೌಡ, ಅಂಕಿತ ಪುಸ್ತಕ ಪ್ರಕಾಶನದ ಪ್ರಕಾಶ ಕಂಬತ್ತಳ್ಳಿ, ಸಂಸ್ಕೃತಿ ಸಂಪದದ ಪ್ರಮುಖ ವಿಜಯ ಹೆಗಡೆ ದೊಡ್ಮನೆ, ಕೆ.ಜಿ. ನಾಗರಾಜ, ಸಿ.ಎಸ್. ಗೌಡರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕೃತಿಕಾರ ಡಾ. ಗಜಾನನ ಶರ್ಮಾ ಅವರನು ಗೌರವಿಸಲಾಯಿತು. ಪ್ರಯೋಗ ಸ್ವಯಂಸೇವಾ ಸಂಸ್ಥೆಯ ಗಂಗಾಧರ ಕೊಳಗಿ, ಪ್ರಾಚಾರ್ಯ ಪೊ›.ಎಂ.ಕೆ. ನಾಯ್ಕ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts