More

    ಸ್ವಚ್ಛತೆ ನಮ್ಮೆಲ್ಲರ ಆದ್ಯತೆಯಾಗಲಿ

    ವಿಜಯಪುರ: ಸ್ವಚ್ಛತೆ ಎಂಬುದು ನಾಗರಿಕ ಜೀವನದ ಆದ್ಯತೆಯಾಗಬೇಕು. ನಾವು ವಾಸಿಸುವ ಸ್ಥಳ ಶುಚಿಯಾಗಿಟ್ಟುಕೊಂಡರೆ ಮಹಾತ್ಮ ಗಾಂಧೀಜಿ ಅವರ ಆಶಯವಾದ ಸ್ವಚ್ಛ ಭಾರತದ ಪರಿಕಲ್ಪನೆ ಸಾಕಾರವಾಗುತ್ತದೆ. ಇನ್ನು ಮುಂದೆ ಪ್ರತಿ ತಿಂಗಳ ಮೊದಲನೆ ಶನಿವಾರ ಸ್ವಚ್ಛ ಶನಿವಾರ ಎನ್ನುವ ಪರಿಕಲ್ಪನೆ ಹಮ್ಮಿಕೊಳ್ಳಲಾಗುವುದೆಂದು ಜಿಪಂ ಸಿಇಒ ರಿಶಿ ಆನಂದ ಹೇಳಿದರು.

    ಜಿಪಂ ಆವರಣದಲ್ಲಿ ಶನಿವಾರ ನಡೆದ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ಜಿಪಂ ಕಾರ್ಯಾಲಯದ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಇನ್ಮುಂದೆ ಕಚೇರಿಯಲ್ಲಿ ಸ್ವಚ್ಛ ಶನಿವಾರ ಎಂಬ ಪರಿಕಲ್ಪನೆ ಪರಿಚಯಿಸುತ್ತಿದ್ದು, ಅದರ ಅಂಗವಾಗಿ ಪ್ರತಿ ತಿಂಗಳ ಮೊದಲನೇ ಶನಿವಾರ ಜಿಪಂ ಕಾರ್ಯಾಲಯದ ಒಳ ಮತ್ತು ಹೊರ ಆವರಣವನ್ನು ಎಲ್ಲ ಅಧಿಕಾರಿಗಳು ಸಿಬ್ಬಂದಿ ಸ್ವಚ್ಛಗೊಳಿಸುವ ಮೂಲಕ ಮಾದರಿ ಕಚೇರಿಯಾಗಿ ಮಾಡುವ ಸದುದ್ದೇಶ ಹೊಂದಲಾಗಿದೆ ಎಂದರು.

    ಸ್ವಚ್ಛತಾ ಕಾರ್ಯಕ್ಕೆ ಕಛೇರಿಯ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಪ್ರತಿ ತಿಂಗಳು ಮೊದಲನೆ ಶನಿವಾರದಂದು ಸಮಯಕ್ಕೆ ಸರಿಯಾಗಿ ಹಾಜರಿದ್ದು, ಕಾರ್ಯಾಲಯದ ಸೊಬಗನ್ನು ಹೆಚ್ಚಿಸಲು ಕೈಜೋಡಿಸಬೇಕು. ನಮ್ಮ ಸುತ್ತಲಿನ ಪರಿಸರ ಸಂರಕ್ಷಣೆ ಮಾಡಿದಾಗ ಮಾತ್ರ ನಾವು ಆರೋಗ್ಯದಿಂದರಲೂ ಸಾಧ್ಯ ಎಂದು ತಿಳಿಸಿದರು.

    ಜಿಪಂ ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಉಪಕಾರ್ಯದರ್ಶಿ ಬಿ.ಎಸ್​. ಮೂಗನೂರಮಠ, ಯೋಜನಾ ನಿರ್ದೇಶಕ ಸಿ. ಆರ್​. ಮುಂಡರಗಿ, ಸಹಾಯಕ ಕಾರ್ಯದರ್ಶಿ ಅನುಸೂಯಾ ಚಲವಾದಿ, ಜಿಪಂ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts