More

    ಮಕ್ಕಳು ಸಹಪಠ್ಯೆ ಚಟುವಟಿಕೆಗಳೊಂದಿಗೆ ಬೆಳೆಯಲಿ

    ಕಾನಹೊಸಹಳ್ಳಿ: ಶಿಕ್ಷಣ ಕಲಿಕೆಯ ಜತೆಗೆ ಮಕ್ಕಳ ಬಾಲ್ಯಾವಸ್ಥೆಯಲ್ಲಿ ಸಂಗೀತ, ನೃತ್ಯ, ಗಾಯನದಂಥ ಅನೇಕ ಪಠ್ಯೇತರ ಚಟುವಟಿಕೆಗಳೊಂದಿಗೆ ಬೆಳೆದಾಗ ಅವರಲ್ಲಿ ಬೌದ್ಧಿಕಮಟ್ಟ ಹೆಚ್ಚುತ್ತದೆ ಎಂದು ಶ್ರೀ ಶರಣೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷ ಹಾಗೂ ಜಿಪಂ ಮಾಜಿ ಸದಸ್ಯ ಕೆ.ಎಂ.ಶಶಿಧರ ತಿಳಿಸಿದರು.

    ಪಟ್ಟಣದ ವಿದ್ಯಾನಿಕೇತನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಚಿಣ್ಣರ ನೃತ್ಯ, ಸಂಗೀತ ಕಲಿಕೆಯ ಬೇಸಿಗೆ ಶಿಬಿರ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಇದನ್ನೂ ಓದಿ ಬೇಸಿಗೆ ಶಿಬಿರ

    ಮಕ್ಕಳು ಆಟದೊಂದಿಗೆ ಪಾಠ ಕಲಿಸುವತ್ತ ಪಾಲಕರು ಗಮನಹರಿಸಿದಾಗ ಅವರಲ್ಲಿನ ಪ್ರತಿಭೆ ಅನಾವರಣಗೊಳ್ಳಲು ಸಹಕಾರಿಯಾಗಲಿದೆ. ಮಕ್ಕಳಲ್ಲಿನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವುದಕ್ಕೆ ತಿಂಗಳ ಕಾಲ ಆಯೋಜಿಸಿ, ರಾಜ್ಯ ಮಟ್ಟದ ಕಲಾವಿದರಿಂದ ನೃತ್ಯ, ಸಂಗೀತ, ಕರಾಟೆ ಸೇರಿ ನಾನಾ ಚಟುವಟಿಕೆಗಳ ತರಬೇತಿ ನೀಡಲಾಗುವುದು ಎಂದರು.

    ಉತ್ತಮ ಕಾರ್ಯ

    ಲೇಖಕ ಭೀಮಣ್ಣ ಗಜಾಪುರ ಮಾತನಾಡಿ, ಪಟ್ಟಣಗಳಲ್ಲಿ ಸಿಗುವಂಥ ಸೌಲಭ್ಯಗಳು ಹಳ್ಳಿಗಾಡಿನ ಮಕ್ಕಳಿಗೆ ಮರೀಚಿಕೆಯಾಗಲಿವೆ. ಆದರೆ, ಗ್ರಾಮೀಣ ಭಾಗದಲ್ಲಿ ನುರಿತ ಕಲಾವಿದರಿದ್ದು ಹೋಬಳಿ ಕೇಂದ್ರಕ್ಕೆ ಕರೆಸಿ ಬೇಸಿಗೆ ಶಿಬಿರದ ಮೂಲಕ ಮಕ್ಕಳ ಕ್ರಿಯಾಶೀಲ ಚಟುವಟಿಕೆ ಹಾಗೂ ಅವರಲ್ಲಿನ ಪ್ರತಿಭೆಗೆ ಪ್ರೋತ್ಸಾಹ ನೀಡಲು ಶರಣೇಶ್ವರ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಮುಂದಾಗಿರುವುದು ಉತ್ತಮ ಕಾರ್ಯವಾಗಿದೆ ಎಂದರು.
    ಶ್ರೀ ಶರಣೇಶ್ವರ ವಿದ್ಯಾಸಂಸ್ಥೆ ಕಾರ್ಯದರ್ಶಿ ಕೆ.ಎಂ.ಹಷರ್ವರ್ಧನ, ಡಿಕೆ ಡ್ಯಾನ್ಸ್ ತರಬೇತುದಾರ ಕರ್ಣ, ಗಾಯಕ ಮಹೇಶ್, ರಾಘವೇಂದ್ರ, ಕೆಎಂಎಸ್ ಪ್ರಥಮದರ್ಜೆ ಕಾಲೇಜು ಪ್ರಾಚಾರ್ಯ ಸುದರ್ಶನ, ಶಿಕ್ಷಕಿ ಶಾಜೀದಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts