More

    ಬಿಡುಗಡೆಗೂ ಮುನ್ನವೇ 400 ಕೋಟಿ ರೂ. ಬಾಚಿದ ವಿಜಯ್​ ಅಭಿನಯದ ‘ಲಿಯೋ’

    ಚೆನ್ನೈ: ವಿಜಯ್​ ಅಭಿನಯದ ‘ಲಿಯೋ’ ಚಿತ್ರದ ಚಿತ್ರೀಕರಣ ಕಳೆದ ತಿಂಗಳಷ್ಟೇ ಶುರುವಾಗಿದೆ. ಅದಾಗಲೇ ಚಿತ್ರವು ಹಲವು ಮೂಲಗಳಿಂದ 400 ಕೋಟಿ ರೂ. ಬಾಚಿಕೊಂಡಿದೆ.

    ಇದನ್ನೂ ಓದಿ: ಮತ್ತೆ ಬಂದ ಕಾಶಿನಾಥ್​ ಮಗ; ‘ಸೂರಿ ಲವ್ಸ್ ಸಂಧ್ಯಾ’ ಚಿತ್ರದಲ್ಲಿ ನಟನೆ

    ‘ಮಾಸ್ಟರ್​’ ನಂತರ ವಿಜಯ್​ ಅಭಿನಯದಲ್ಲಿ ಲೋಕೇಶ್​ ಕನಕರಾಜ್​ ನಿರ್ದೇಶಿಸುತ್ತಿರುವ ಚಿತ್ರ ‘ಲಿಯೋ’. ಕಳೆದ ತಿಂಗಳಷ್ಟೇ ಈ ಚಿತ್ರ ಪ್ರಾರಂಭವಾಗಿದ್ದು, ಈಗಾಗಲೇ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲವನ್ನು ಹುಟ್ಟುಹಾಕಿದೆ. ಇನ್ನು, ಬಿಜಿನೆಸ್​ ವಿಷಯದಲ್ಲೂ ಈ ಚಿತ್ರ ಬಹಳ ಮುಂದಿದೆ. ಚಿತ್ರೀಕರಣ ಈಗಷ್ಟೇ ಪ್ರಾರಂಭವಾಗಿದೆ, ಆಗಲೇ ಚಿತ್ರತಂಡವು 400 ಕೋಟಿ ರೂ.ಗಳನ್ನು ಬಾಚಿಕೊಂಡಿದೆ ಎಂದು ಹೇಳಲಾಗುತ್ತಿದೆ.

    ‘ಲಿಯೋ’ ಚಿತ್ರದ ತಮಿಳು, ತೆಲುಗು, ಹಿಂದಿ ಮತ್ತು ಕನ್ನಡದ ಡಿಜಿಟಲ್ ಹಕ್ಕುಗಳನ್ನು ನೆಟ್​ಫ್ಲಿಕ್ಸ್​ ಸಂಸ್ಥೆಯು 240 ಕೋಟಿ ರೂ.ಗಳಿಗೆ ಖರೀದಿಸಿದೆಯಂತೆ. ಚಿತ್ರದ ಸ್ಯಾಟಿಲೈಟ್​ ಹಕ್ಕುಗಳನ್ನು ಸನ್​ ಟಿವಿಯು 70 ಕೋಟಿ ರೂ.ಗೆ ತನ್ನದಾಗಿಸಿಕೊಂಡಿದೆಯಂತೆ. ಸಂಗೀತದ ಹಕ್ಕುಗಳನ್ನು 18 ಕೋಟಿ ರೂ. ಕೊಟ್ಟು ಸೋನಿ ಮ್ಯೂಸಿಕ್​ ಖರೀದಿಸಿದರೆ, ಹಿಂದಿ ಡಬ್ಬಿಂಗ್​ ಹಕ್ಕುಗಳಿಗೆ ದೊಡ್ಡ ಪೈಪೋಟಿ ಇದೆಯಂತೆ. ಈಗಾಗಲೇ ಸಂಸ್ಥೆಯೊಂದು 30 ಕೋಟಿ ರೂ.ಗಳವರೆಗೂ ಕೊಡುವುದಕ್ಕೆ ತಯಾರಿದೆ ಎಂದು ಹೇಳಲಾಗಿದೆ.

    ಇದೆಲ್ಲದರಿಂದಲೇ ನಿರ್ಮಾಪಕರಿಗೆ 240 ಕೋಟಿ ರೂ.ಗಳವರೆಗೂ ವಾಪಸ್ಸಾದರೆ, ಚಿತ್ರಮಂದಿರಗಳ ವಿತರಣಾ ಹಕ್ಕುಗಳು 175 ಕೋಟಿ ರೂ.ಗಳಿಗೆ ಮಾರಾಟವಾಗಿದೆಯಂತೆ. ಓವರ್​ಸೀಸ್​ ಹಕ್ಕುಗಳು 50 ಕೋಟಿ ರೂ.ಗಳಿಗೆ ಮಾರಾಟವಾಗುವ ಅಂದಾಜಿದ್ದು, ಬೇರೆ ರಾಜ್ಯಗಳ ವಿತರಣೆಯ ಹಕ್ಕುಗಳು 35 ಕೋಟಿ ರೂ.ವರೆಗೂ ಮಾರಾಟವಾಗಬಹುದು ಎಂಬ ಸುದ್ದಿ ಇದೆ. ಇವೆಲ್ಲವನ್ನೂ ಸೇರಿಸಿದರೆ, ಚಿತ್ರ ಬಿಡುಗಡೆಗೂ ಮುನ್ನವೇ 400 ಕೋಟಿ ರೂ. ಸಂಪಾದಿಸಿದಂತಾಗುತ್ತದೆ.

    ಇದನ್ನೂ ಓದಿ: ಕೆಸಿಸಿ ಪಂದ್ಯದ ವೇಳೆ ‘ಹೊಯ್ಸಳ’ ಚಿತ್ರದ ಮಾಸ್​ ಹಾಡು ಬಿಡುಗಡೆ …

    ‘ಲಿಯೋ’ ಚಿತ್ರದಲ್ಲಿ ವಿಜಯ್​ ಜತೆಗೆ ಸಂಜಯ್​ ದತ್​, ತ್ರಿಷಾ, ಮಿಸ್ಕಿನ್​, ಗೌತಮ್​ ಮೆನನ್​, ಪ್ರಿಯಾ ಆನಂದ್​ ಮುಂತಾದವರು ನಟಿಸುತ್ತಿದ್ದು, ಈ ಚಿತ್ರಕ್ಕೆ ಕೆಲವು ದಿನಗಳ ಹಿಂದೆ ಚೆನ್ನೈನಲ್ಲಿ ಚಿತ್ರೀಕರಣ ಪ್ರಾರಂಭವಾಗಿದೆ.

    ಬದಲಾವಣೆಗೆ ಇದು ಒಳ್ಳೆಯ ಸಮಯ; ಅಕ್ಷಯ್​ ಕುಮಾರ್​ ಹೀಗೆ ಹೇಳಿದ್ದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts