More

    ಬೆಳೆಗಳಿಗೆ ಸಿಗದ ವೈಜ್ಞಾನಿಕ ಬೆಲೆ

    ಹೊಳೆಹೊನ್ನೂರು: ದೇಶದಲ್ಲಿ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೆರುತ್ತಿವೆ. ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ರೈತ ಸಾಲಗಾರನಾಗಿಯೇ ಮುಂದುವರಿಯುತ್ತಿದ್ದಾನೆ ಎಂದು ರೈತ ಸಂಘದ ಕಾರ್ಯಾಧ್ಯಕ್ಷ ಎಚ್.ಆರ್.ಬಸವರಾಜಪ್ಪ ಬೇಸರ ವ್ಯಕ್ತಪಡಿಸಿದರು.

    ಭದ್ರಾವತಿ ತಾಲೂಕಿನ ಆನವೇರಿಯಲ್ಲಿ ಮಂಗಳವಾರ ಭಾರತ್ ಪೆಟ್ರೋಲಿಯಂ ಮತ್ತು ಗಂಗಾ ಫ್ಯುಯೆಲ್ಸ್​ನಿಂದ ಹಮ್ಮಿಕೊಂಡಿದ್ದ ಕೃಷಿಮೇಳ ಉದ್ಘಾಟಿಸಿ ಮಾತನಾಡಿ, ಸರ್ಕಾರ ರೈತರ ಸಾಲ ಮನ್ನಾ ಮಾಡುವ ಬದಲಿಗೆ ರೈತರಿಗೆ ಬೆಂಬಲ ಬೆಲೆ ನೀಡಿದರೆ ರೈತರೇ ಸರ್ಕಾರಗಳಿಗೆ ಸಾಲ ನೀಡುತ್ತಾರೆ ಎಂದರು.

    ಕೃಷಿಯಲ್ಲಿ ಆಧುನಿಕತೆ ಬಳಸಿಕೊಂಡು ಇಳುವರಿ ಹೆಚ್ಚಿಸಿಕೊಂಡಂತೆ ರೈತನ ಸಾಲವೂ ದ್ವಿಗುಣವಾಗುತ್ತಿದೆ. ಹಿಂದಿನ ಕಾಲದಲ್ಲಿ ಮನೆಯಲ್ಲೇ ತಯಾರಾದ ಬಿತ್ತನೆ ಬೀಜ, ಕೊಟ್ಟಿಗೆ ಗೊಬ್ಬರ ಬಳಸಿ ನಡೆಸಿದ ಕೃಷಿಯಲ್ಲಿ ಲಾಭ ಸಿಗುತ್ತಿತ್ತು. ಆದರೆ ಇಂದು ಯಂತ್ರ ಬಳಸಿ, ದುಬಾರಿ ರಾಸಾಯನಿಕ ಹಾಕಿ ಕೃಷಿಯಲ್ಲಿ ಹಿನ್ನಡೆ ಅನುಭವಿಸುವಂತಾಗಿದೆ ಎಂದು ಹೇಳಿದರು.

    ರಾಸಾಯನಿಕ ಗೊಬ್ಬರ ಬಳಕೆ ವಿಧಾನ ಗೊತ್ತಿಲ್ಲದೆ ರೈತನ ಹಣ ವ್ಯಯವಾಗುತ್ತಿದೆ. ಬಹುರಾಷ್ಟ್ರೀಯ ಕಂಪನಿಗಳು ವಸ್ತುಗಳನ್ನು ಬಿಡುಗಡೆ ಮಾಡಿ ಸುಮ್ಮನಾಗದೆ ವಸ್ತುವಿನ ಬಳಕೆ ಬಗ್ಗೆ ಗ್ರಾಹಕರಿಗೆ ಮಾಹಿತಿ ನೀಡಿಬೇಕು. ಅತಿಯಾದ ರಾಸಯಾನಿಕ ಬಳಕೆಯಿಂದ ವ್ಯವಸಾಯ ಭೂಮಿಯಲ್ಲಿ ಫಲವತ್ತತೆ ರಕ್ಷಣೆ ಕಷ್ಟವಾಗುತ್ತಿದೆ ಎಂದು ತಿಳಿಸಿದರು.

    ಜಿಪಂ ಸದಸ್ಯ ವೀರಭದ್ರಪ್ಪ ಪೂಜಾರ್, ತಾಪಂ ಸದಸ್ಯ ದಿನೇಶ್, ಗ್ರಾಪಂ ಅಧ್ಯಕ್ಷೆ ಸುಜಾತಾ, ಮುಖಂಡರಾದ ಷಡಾಕ್ಷರಪ್ಪ ಗೌಡ, ಮಹೇಂದ್ರ ಗೌಡ, ಈಶಪ್ಪ ಗೌಡ, ಚನ್ನಬಸಪ್ಪ, ಶ್ರೀನಿವಾಸ್, ಸಚಿನ್ ಕುಲಕರ್ಣಿ, ಸಾಗರ್, ರವಿಕಾಂತ್, ಇಮ್ರಾನ್ ಖಾನ್, ರಮೇಶ್ ಗೌಡ, ಜಿ.ಆರ್.ವಾಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts