More

    ಲೆಮನ್​ ಜ್ಯೂಸ್ ಕುಡಿಯುವಾಗ ಅಪ್ಪಿತಪ್ಪಿ ಈ ತಪ್ಪನ್ನು ಮಾಡ್ಬೇಡಿ​… ಮಾಡಿದ್ರೆ ಆರೋಗ್ಯಕ್ಕೆ ಡೇಂಜರ್​!

    ನಿಂಬೆ ರಸ ಅಥವಾ ಲೆಮನ್​ ಜ್ಯೂಸ್ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಬೇಸಿಗೆಯಲ್ಲಿ ತುಂಬಾ ಶಾಖವನ್ನು ನಿವಾರಿಸಲು ನಿಂಬೆ ನೀರನ್ನು ಹೆಚ್ಚಾಗಿ ಸೇವಿಸಲಾಗುತ್ತದೆ. ಇದು ನಮ್ಮ ದೇಹವನ್ನು ಹೈಡ್ರೇಟ್​ ಆಗಿ ಇರಿಸುತ್ತದೆ. ಇದಿಷ್ಟೇ ಅಲ್ಲದೆ, ತೂಕ ನಿಯಂತ್ರಣಕ್ಕೂ ಸಹಕಾರಿಯಾಗಿದೆ. ಜೀರ್ಣಕ್ರಿಯೆ ಸಮಸ್ಯೆಗಳನ್ನು ಸಹ ನಿವಾರಿಸುತ್ತದೆ.

    ಆದರೆ, ಅತಿ ಹೆಚ್ಚು ಲೆಮನ್​ ಜ್ಯೂಸ್​ ಕುಡಿಯುವುದರಿಂದ ಏನಾಗುತ್ತಾದೆ ಎಂಬುದು ನಿಮಗೆ ತಿಳಿದಿದೆಯಾ? ಯಾವೆಲ್ಲ ಅಡ್ಡ ಪರಿಣಾಮಗಳು ಬೀರಲಿದೆ ಎಂಬುದು ಗೊತ್ತಿದೆಯಾ? ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಸಿಕ್ಕಾಪಟ್ಟೆ ಲೆಮನ್​ ಜ್ಯೂಸ್​ ಕುಡಿದರೆ ಕೆಲವು ಅಡ್ಡಪರಿಣಾಮಗಳು ಸಹ ಬೀರಲಿವೆ. ಆ ಅಡ್ಡ ಪರಿಣಾಮಗಳೇನು ಎಂಬುದನ್ನು ನಾವೀಗ ತಿಳಿಯೋಣ.

    1. ಹೆಚ್ಚು ಲೆಮನ್​​ ಜ್ಯೂಸ್​ ಸೇವಿಸುವುದರಿಂದ ಎದೆಯುರಿ ಉಂಟಾಗುತ್ತದೆ. ಏಕೆಂದರೆ ಇದು ಪೆಪ್ಸಿನ್ ಅನ್ನು ಸಕ್ರಿಯಗೊಳಿಸುತ್ತದೆ. ಈ ಪೆಪ್ಸಿನ್​, ಪ್ರೋಟೀನ್ ಅನ್ನು ಒಡೆಯುವ ಕಿಣ್ವವಾಗಿದೆ. ಇದಿಷ್ಟೇ ಅಲ್ಲದೆ, ಅತಿಯಾದ ಲೆಮನ್​ ಜ್ಯೂಸ್​ ಸೇವನೆಯು ಪೆಪ್ಟಿಕ್ ಹುಣ್ಣುಗೆ ಕಾರಣವಾಗಬಹುದು. ಇದು ಹೆಚ್ಚು ಅಪಾಯಕಾರಿ ಕೂಡ ಹೌದು.

    2. ಲೆಮನ್​ ಜ್ಯೂಸ್​ ಅನ್ನು ಆಗಾಗ ಕುಡಿಯುವುದು ನಿರ್ಜಲೀಕರಣಕ್ಕೆ ಕಾರಣವಾಗಬಹುದು. ಏಕೆಂದರೆ, ನಿಂಬೆ ನೀರು ಕುಡಿಯುವುದರಿಂದ ಮೂತ್ರ ವಿಸರ್ಜನೆ ಹೆಚ್ಚಾಗುತ್ತದೆ. ಇದರಿಂದ ದೇಹದಲ್ಲಿರುವ ನೀರು ಹೊರಹೋಗುತ್ತದೆ. ಈ ಪ್ರಕ್ರಿಯೆಯಲ್ಲಿ, ದೇಹದಲ್ಲಿರುವ ಅನೇಕ ಎಲೆಕ್ಟ್ರೋಲೈಟ್‌ಗಳು ಮತ್ತು ಸೋಡಿಯಂನಂತಹ ಅಂಶಗಳು ಮೂತ್ರದ ಮೂಲಕ ಹೊರಬರುತ್ತವೆ. ಇದು ನಿರ್ಜಲೀಕರಣದ ಸಮಸ್ಯೆಗೆ ಕಾರಣವಾಗುತ್ತದೆ. ಹೆಚ್ಚು ಲೆಮನ್​ ಜ್ಯೂಸ್​ ಸೇವಿಸುವುದರಿಂದ ಪೊಟ್ಯಾಸಿಯಮ್ ಕೊರತೆ ಉಂಟಾಗುತ್ತದೆ.

    3. ಲೆಮನ್​ ಜ್ಯೂಸ್​ ಅನ್ನು ಹೆಚ್ಚಾಗಿ ಸೇವಿಸಿದರೆ ಹೆಚ್ಚಿನ ಪ್ರಮಾಣದ ವಿಟಮಿನ್ ಸಿ ರಕ್ತದಲ್ಲಿನ ಕಬ್ಬಿಣದ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಅಪಾಯಕಾರಿ ಎನ್ನುತ್ತಾರೆ ತಜ್ಞರು. ಕೆಲವು ಸಂದರ್ಭಗಳಲ್ಲಿ ಆಂತರಿಕ ಅಂಗಗಳಿಗೆ ಹಾನಿಯಾಗುವ ಅಪಾಯವೂ ಇದೆ.

    4. ನಿಂಬೆಯಲ್ಲಿ ಸಿಟ್ರಿಕ್ ಆಮ್ಲವಿದೆ. ಇದರಲ್ಲಿ ಸಾಕಷ್ಟು ಪ್ರಮಾಣದ ಆಕ್ಸಲೇಟ್ ಕೂಡ ಇದೆ. ಇದನ್ನು ಹೆಚ್ಚು ಸೇವಿಸುವುದರಿಂದ ಹರಳುಗಳ ರೂಪದಲ್ಲಿ ದೇಹದಲ್ಲಿ ಶೇಖರಣೆಯಾಗಿ, ಮೂತ್ರಪಿಂಡದ ಕಲ್ಲುಗಳು ರಚನೆಯಾಗುವ ಅಪಾಯವಿದೆ.

    5. ಹೆಚ್ಚು ಲೆಮನ್​ ಜ್ಯೂಸ್​ ಕುಡಿಯುವುದರಿಂದ ಮೂಳೆಗಳು ದುರ್ಬಲಗೊಳ್ಳುತ್ತವೆ. ನಿಂಬೆ ಆಮ್ಲೀಯತೆಯನ್ನು ಹೊಂದಿದೆ. ಇದು ಮೂಳೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

    6. ಲೆಮನ್​ ಜ್ಯೂಸ್​ ಅನ್ನು ಅತಿಯಾಗಿ ಸೇವಿಸುವುದರಿಂದ ಅಸಿಡಿಟಿ ಉಂಟಾಗುತ್ತದೆ. ನಿಂಬೆಯಲ್ಲಿ ಹೆಚ್ಚಿನ ಪ್ರಮಾಣದ ಆಮ್ಲವಿದೆ. ಇದನ್ನು ಸೇವಿಸುವುದರಿಂದ ದೇಹದಲ್ಲಿ ಆಮ್ಲದ ಪ್ರಮಾಣ ಹೆಚ್ಚಾಗಿ ಅಸಿಡಿಟಿ ಉಂಟಾಗುತ್ತದೆ.

    7. ಟಾನ್ಸಿಲ್ (ಬಾಯಿಯ ಹಿಂಭಾಗದಲ್ಲಿ ಮತ್ತು ಗಂಟಲಿನ ಮೇಲ್ಭಾಗದಲ್ಲಿ ಇರುವ ದುಗ್ಧರಸ ಗ್ರಂಥಿಗಳು) ಸಮಸ್ಯೆ ಇರುವವರು ಲೆಮನ್​ ಜ್ಯೂಸ್​ ಕುಡಿಯಬಾರದು. ಏಕೆಂದರೆ, ತುಂಬಾ ಹಾನಿಕಾರಕ ಎಂದು ಅಧ್ಯಯನಗಳು ಹೇಳಿವೆ. ಸಂಶೋಧನೆಯ ಪ್ರಕಾರ, ಹೆಚ್ಚು ನಿಂಬೆ ನೀರನ್ನು ಸೇವಿಸುವುದರಿಂದ ಗಂಟಲು ನೋವು ಉಂಟಾಗುತ್ತದೆ. (ಏಜೆನ್ಸೀಸ್​)

    Lemon Juice Benefits: ಪ್ರತಿದಿನ ಬೆಳಗ್ಗೆ ನಿಂಬೆ ರಸ ಕುಡಿದರೆ ಇಷ್ಟೆಲ್ಲ ಅದ್ಭುತ ಪ್ರಯೋಜನಗಳಿವೆ…

    ಅಪ್ಪಿತಪ್ಪಿ ಈ ಆಹಾರಗಳ ಜತೆ ಬಾಳೆಹಣ್ಣು ತಿನ್ನಬೇಡಿ… ತಿಂದ್ರೆ ಆರೋಗ್ಯಕ್ಕೆ ತುಂಬಾ ಡೇಂಜರ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts