More

    ನಿಂಬೆ ರಸದಿಂದ ದೇಹದ ಆಕ್ಸಿಜನ್ ನಿಯಂತ್ರಣ; ಕರೊನಾ ವಿರುದ್ಧ ಹೋರಾಡಲು ಡಾ. ವಿಜಯ ಸಂಕೇಶ್ವರ ಸಲಹೆ

    ಹುಬ್ಬಳ್ಳಿ: ಕರೊನಾ ಸೋಂಕಿನ ಅತಿ ವೇಗದಲ್ಲಿ ಹಬ್ಬಲಾರಂಭಿಸಿದೆ. ಸಾವಿರಾರು ಜನರಿಗೆ ಆಕ್ಸಿಜನ್​ ತೊಂದರೆ ಕಂಡುಬರುತ್ತಿದೆ. ಆದರೆ ಈ ರೀತಿಯ ಸಮಸ್ಯೆ ಉಂಟಾದಾಗ ಮನೆ ಮದ್ದಿನಿಂದಲೇ ಅದನ್ನು ಸರಿದೂಗಿಸಿಕೊಳ್ಳಬಹುದು. ಅದರ ಬಗ್ಗೆ ವಿಆರ್​ಎಲ್​ ಸಮೂಹ ಸಂಸ್ಥೆಗಳ ಚೇರ್ಮನ್​ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಸಲಹೆ ನೀಡಿದ್ದಾರೆ.

    ಇಂದು ಹುಬ್ಬಳ್ಳಿಯ ಪತ್ರಕರ್ತರ ಭವನದಲ್ಲಿ ಪತ್ರಿಕಾ ಗೋಷ್ಠಿ ನಡೆಸಿದ ಅವರು, ಕರೊನಾವನ್ನು ನಿಯಂತ್ರಿಸುವಲ್ಲಿ ಮನೆ ಮದ್ದು ಎಷ್ಟು ಪರಿಣಾಮಕಾರಿ ಎನ್ನುವ ಬಗ್ಗೆ ಮಾಹಿತಿ ನೀಡಿದ್ದಾರೆ. “ಕರೊನಾ ಜಗತ್ತಿಗೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಕೋವಿಡ್ ಸೋಂಕಿಗೆ ತುತ್ತಾದವರು ವೈದ್ಯಕೀಯ ಚಿಕಿತ್ಸೆ ಜತೆಗೆ ಮನೆ ಮದ್ದುಗಳನ್ನು ಬಳಸಿದರೆ ಕರೊನಾ ನಿಯಂತ್ರಿಸಬಹುದು. ಮೂಗಿನಲ್ಲಿ ನಾಲ್ಕು ಹನಿ ನಿಂಬೆ ರಸ ಹಾಕುವುದರಿಂದ ಆಕ್ಸಿಜನ್ ಸಮಸ್ಯೆ ನಿಯಂತ್ರಣವಾಗುತ್ತದೆ. ಇದನ್ನು ಸ್ವತಃ ನಾನು ಪ್ರಯೋಗಿಸಿದ್ದೇನೆ. ಪರಿಚಯದ 200 ಜನರ ಮೇಲೆ ಪ್ರಯೋಗ ಮಾಡಿ ಯಶಸ್ಸು ಕಂಡಿದ್ದೇನೆ. ಅರ್ಧ ಗಂಟೆಯಲ್ಲಿ ಉತ್ತಮ ಫಲಿತಾಂಶ ದೊರೆತಿದೆ.” ಎಂದು ತಿಳಿಸಿದ್ದಾರೆ.

    ಕರೊನಾ ಪಾಸಿಟಿವ್ ಆಗಿರುವವರು ಇದನ್ನು ಪ್ರಯೋಗಿಸಿ ಪರಿಣಾಮ ಕಂಡುಕೊಂಡಿದ್ದಾರೆ. ಮೂಗಿನಲ್ಲಿ ನಿಂಬೆರಸ ಹಾಕುವುದರಿಂದ ಲಂಗ್ಸ್​ನಲ್ಲಿರುವ ಕಫ ಹೊರ ಬರುತ್ತದೆ. ಆಕ್ಸಿಜನ್ ಲೆವೆಲ್ ಹೆಚ್ಚಾಗಿ ಉಸಿರಾಟದ ಸಮಸ್ಯೆ ನಿವಾರಣೆಯಾಗುತ್ತದೆ. ಎಲ್ಲರೂ ಬಿಸಿ ನೀರು ಸೇವಿಸಬೇಕು. ನಿತ್ಯ ಬಿಸಿ ನೀರಿನ ಹಬೆ (ಸ್ಟೀಮ್) ತೆಗೆದುಕೊಳ್ಳಬೇಕು ಎಂದು ಅವರು ಮಾಹಿತಿ ನೀಡಿದ್ದಾರೆ.

    ಯಾವಾಗಲೂ ಮಾಸ್ಕ್ ಹಾಕುವುದರಿಂದ ಆಮ್ಲಜನಕ ಸರಿಯಾಗಿ ಸರಬರಾಜು ಆಗುವುದಿಲ್ಲ. ಹಾಗಾಗಿ, ಮಾಸ್ಕ್ ಸರಿಯಾದ ರೀತಿಯಲ್ಲಿ ಬಳಸಬೇಕು. ಒಬ್ಬರೇ ಇದ್ದಾಗ ಮಾಸ್ಕ್ ಬಳಸಬಾರದು. ಜನರ ಮಧ್ಯೆ ಇದ್ದಾಗ ಮಾತ್ರ ಬಳಸಬೇಕು. ಡಾ. ಬಿ.ಎಂ. ಹೆಗಡೆ ಅವರು ಹೇಳುವ ಪ್ರಕಾರ ಮುಖಕ್ಕೆ ಕೊಬ್ಬರಿ ಎಣ್ಣೆ ಹಚ್ಚಿಕೊಳ್ಳಬೇಕು. ಮೂಗಿನಲ್ಲಿ ಕೊಬ್ಬರಿ ಎಣ್ಣೆ ಹಾಕಿದರೆ‌ ಕರೊನಾ ಮಾತ್ರವಲ್ಲ ಯಾವುದೇ ವೈರಸ್ ತಗುಲುವುದಿಲ್ಲ ಎಂದು ಹೇಳಿದ್ದಾರೆ.

    ನಾನು ನಮ್ಮ ಮನೆಯವರು ನಿತ್ಯ ಮೂರು ಬಾರಿ ಸ್ಟೀಂ ತೆಗೆದುಕೊಳ್ಳುತ್ತೇವೆ. ನಾನು ನ್ಯಾಚುರೋಪತಿಗೆ ಹೆಚ್ಚು ಒತ್ತು ಕೊಡುತ್ತೇನೆ. 71 ವರ್ಷದ ನಾನು ದೇಶಾದ್ಯಂತ ಓಡಾಡುತ್ತಿರುತ್ತೇನೆ. ನಿತ್ಯ 100ರಿಂದ 500 ಜನರನ್ನು ಭೇಟಿ ಮಾಡುತ್ತಿರುತ್ತೇನೆ. ಆದರೂ ಸೋಂಕು ತಗುಲಿಲ್ಲ. ಕಾರಣ ಮನೆ‌ಮದ್ದುಗಳನ್ನು ಬಳಸುತ್ತೇನೆ ಎಂದು ಡಾ. ವಿಜಯ ಸಂಕೇಶ್ವರ ಹೇಳಿದರು.

    ರಾಜಧಾನಿಯಲ್ಲಿ ಲಾಕ್​ಡೌನ್​ ವಿಸ್ತರಣೆ! ಇನ್ನೂ ಒಂದು ವಾರ ಯಾರೂ ಮನೆಯಿಂದ ಹೊರಬರುವಂತಿಲ್ಲ!

    ಮಾಸ್ಕ್‌ ಹಾಕಿಲ್ವಾ? ಹೊಡೀರಿ ಬಸ್ಕಿ! ನಡುರಸ್ತೆಯಲ್ಲಿ ನಗರಸಭೆ ಸಿಬ್ಬಂದಿ ಸುಸ್ತೋ ಸುಸ್ತು…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts