More

    ಶಾಸಕ ಕೌಜಲಗಿ ಗುಣಮುಖ

    ಬೈಲಹೊಂಗಲ: ಕರೊನಾ ಸೋಂಕಿಗೆ ತುತ್ತಾಗಿದ್ದ ಕ್ಷೇತ್ರದ ಶಾಸಕ ಮಹಾಂತೇಶ ಕೌಜಲಗಿ ಗುಣಮುಖರಾಗಿದ್ದು, ಅವರ ಮರು ಪರೀಕ್ಷಾ ವರದಿ ನೆಗೆಟಿವ್ ಬಂದಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ.ಎಸ್.ಎಸ್. ಸಿದ್ದಣ್ಣವರ ಹೇಳಿದ್ದಾರೆ.

    ಈ ಕುರಿತು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕರ ಸಂಪರ್ಕದಲ್ಲಿದ್ದ ಅಧಿಕಾರಿಗಳು, ಕುಟುಂಬಸ್ಥರ ವರದಿಗಳು ಕೂಡ ನೆಗೆಟಿವ್ ಬಂದಿವೆ ಎಂದರು. ನಾನು ಗುಣಮುಖನಾಗಿದ್ದೇನೆ. ಯಾರೂ ಆತಂಕಪಡಬೇಕಿಲ್ಲ ಎಂದು ಸಾಮಾಜಿಕ ಜಾಲತಾಣಗಳ ಮೂಲಕ ಮತಕ್ಷೇತ್ರದ ಜನತೆಗೆ ಶಾಸಕರು ಕೂಡ ಸಂದೇಶ ನೀಡಿದ್ದಾರೆ.

    ಆರು ಪ್ರಕರಣ: ಪಟ್ಟಣದಲ್ಲಿ ಶುಕ್ರವಾರ 2 ಪ್ರಕರಣಗಳು ದಾಖಲಾಗಿದ್ದು, ಎಂ.ಜಿ. ಹೌಸಿಂಗ್ ಕಾಲನಿಯ 55 ವರ್ಷದ ಪುರುಷ, ನೀಲಗಾರ ಗಲ್ಲಿಯ 48 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ. ದೊಡವಾಡ 2, ಖೋದಾನಪುರ 1, ಕಿತ್ತೂರು 1 ಸೇರಿ 6 ಪ್ರಕರಣಗಳು ದೃಢಪಟ್ಟಿವೆ.

    ಯರಗಟ್ಟಿ ವರದಿ: ಗ್ರಾಮದ ಮೂವರು ಗರ್ಭಿಣಿಯರಿಗೆ ಶುಕ್ರವಾರ ಕರೊನಾ ದೃಢಪಟ್ಟಿದೆ. ನಯಾನಗರ 1 ಹಾಗೂ ಇಸ್ಲಾಂಪುರ ಗಲ್ಲಿಯ ಇಬ್ಬರು ಸೇರಿ ಮೂವರು ಗರ್ಭಿಣಿಯರಿಗೆ ಕರೊನಾ ತಗುಲಿರುವ ವರದಿ ಬಂದಿದೆ. ಮೂವರಲ್ಲಿ ಓರ್ವ ಮಹಿಳೆಯ ಹೆರಿಗೆ ಆಗಿದೆ. ಸೋಂಕಿತರ ಮನೆ ಸುತ್ತಲಿನ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ. ಸರ್ಕಾರದ ನಿಯಮದಂತೆ ದೈಹಿಕ ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

    ಗೋಕಾಕ ವರದಿ: ಮೂಡಲಗಿ ಹಾಗೂ ಗೋಕಾಕ ತಾಲೂಕಿನಲ್ಲಿ ಶುಕ್ರವಾರ 11 ಜನರಿಗೆ ಕರೊನಾ ಸೋಂಕು ದೃಢಪಟ್ಟಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ. ಜಗದೀಶ ಜಿಂಗಿ ತಿಳಿಸಿದ್ದಾರೆ. ಗೋಕಾಕ ನಗರದಲ್ಲಿ 2 ಜನರಿಗೆ ಮತ್ತು ಗೋಕಾಕ ತಾಲೂಕಿನ ಧುಪದಾಳ 4, ಅಂಕಲಗಿ 2, ಪುಲಗಡ್ಡಿ 1, ಮಮದಾಪುರ 1 ಹಾಗೂ ಮೂಡಲಗಿ ಪಟ್ಟಣದಲ್ಲಿ 1 ಪಾಸಿಟಿವ್ ಪ್ರಕರಣ ವರದಿಯಾಗಿದೆ. ಸೋಂಕಿತರು ವಾಸವಾಗಿದ್ದ ಸ್ಥಳಗಳನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts