More

    ಸಿಎಎ,ಎನ್‌ಆರ್‌ಸಿ ಕುರಿತು ಸಲ್ಲದ ಗೊಂದಲ,ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಕಿಡಿ

    ಚಿತ್ರದುರ್ಗ: ಬಿಜೆಪಿ ಮುಸ್ಲಿಂ ವಿರೋಧಿ ಅಲ್ಲ. ಕೇಂದ್ರ,ರಾಜ್ಯಸರ್ಕಾರಗಳು ಜಾರಿಗೊಳಿಸಿರುವ ಅನೇಕ ಜನಪರ ಯೋಜನೆಗಳ ಹಾಗೂ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಹಾಗೂ ರಾಷ್ಟ್ರೀಯ ನಾಗರಿಕರ ನೋಂದಣಿ ಕಾಯ್ದೆಗಳ(ಎನ್‌ಆರ್‌ಸಿ)ಕುರಿತು ಪ್ರತಿಪಕ್ಷಗಳು ಸಲ್ಲದ ಗೊಂದಲಗಳನ್ನು ಹುಟ್ಟುಹಾಕುತ್ತಿವೆ ಎಂದು ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.

    ನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಬಿಜೆಪಿ ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಕಾರ‌್ಯಕಾರಣಿ ಪ್ರಥಮ ಸಭೆ ಉದ್ಘಾಟಿ ಸಿ ಮಾತನಾಡಿ,ಈ ದೇಶವನ್ನಾಳಿದ 65 ವರ್ಷ ಅಧಿಕ ಕಾಲ ಆಡಳಿತ ನಡೆಸಿದ ಕಾಂಗ್ರೆಸ್,ಮುಸ್ಲಿಂರನ್ನು ವೋಟ್ ಬ್ಯಾಂಕ್ ಎಂದೇ ಭಾ ವಿ ಸಿದೆ ಹೊರತು,ಅವರ ಏಳಿಗೆ ಯಾವುದೇ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲಿಲ್ಲ. ಗರಿಬೀ ಹಠಾವೋದಿಂದ ಯಾ ರೊಬ್ಬರ ಬಡತನ ನಿವಾರಣೆ ಆಗಲಿಲ್ಲ.

    ಚುನಾವಣೆಗಳು ಎದುರಾದಗಲೆಲ್ಲ ಕಾಂಗ್ರೆಸ್,ಬಿಜೆಪಿ ಅಲ್ಪಸಂಖ್ಯಾತರ ವಿರೋಧಿ ಎಂದು ಅಪ್ರಚಾರದಲ್ಲಿ ತೊಡಗುತ್ತದೆ. ಬಿಜೆಪಿಗೆ ಮುಸ್ಲಿಂರು,ಕ್ರಿಶ್ಚಿಯನ್ ಮತ್ತಿತರ ಅಲ್ಪಸಂಖ್ಯಾತ ವರ್ಗದವರಿಗೆ ಬಿಜೆಪಿಯಿಂದ ಯಾವುದೇ ತೊಂದರೆ ಆಗಿಲ್ಲ. ಉತ್ತರ ಪ್ರದೇಶದಲ್ಲಿ ಮುಸ್ಲಿಂರು ಬಿಜೆಪಿಗೆ ಮತ ಹಾಕುತ್ತಿದ್ದಾರೆ. ಮದ್ರಾಸಾಗಳಲ್ಲಿ ಧಾರ್ಮಿಕ ಶಿಕ್ಷಣದೊಂದಿಗೆ ಕಂಪ್ಯೂಟರ್ ಶಿಕ್ಷಣದ ಅಗತ್ಯವಿದೆ ಎಂದು ಪ್ರಧಾನಿ ಪ್ರತಿಪಾದಿಸಿದ್ದಾರೆ.

    ಹಕ್ಕುಪತ್ರ ಸಹಿತ ನಾನಾ ಯೋಜನೆಗಳನ್ನು ಮುಸ್ಲಿಂರೂ ಸೇರಿದಂತೆ ಎಲ್ಲ ವರ್ಗದ ಬಡವರಿಗೆ ಕೊಡುವ ಮೂಲಕ ಬಿಜೆಪಿ ಎಲ್ಲರ ಪರವಾಗಿರುವ ಪಕ್ಷವೆಂಬುದನ್ನು ವಿಶೇಷವಾಗಿ ಅಲ್ಪಸಂಖ್ಯಾತರಲ್ಲಿ ಮನವರಿಕೆ ಮಾಡಿಕೊಡುವ ಹೊಣೆ ಮೋರ್ಚಾದ ಕಾರ‌್ಯಕರ್ತರು,ಪ್ರಮುಖರ ಮೇಲಿದೆ.

    ದೇಶದ ಅಭಿವೃದ್ಧಿಯಲ್ಲಿ ಅಲ್ಪಸಂಖ್ಯಾತರ ಪಾತ್ರವೂ ಮುಖ್ಯವಾಗಿದೆ. ಬಿಜೆಪಿ ಅಧಿಕಾರಕ್ಕೆ ಪ್ರತಿ ಸಂದರ್ಭದಲ್ಲಿ ಹೆಚ್ಚಿನ ಮೀಸಲು ಕ್ಷೇ ತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸಿದೆ. ಕೋವಿಡ್ ಕಾರಣಕ್ಕೆ ಇಂದು ಪ್ರಪಂಚದ ಅನೇಕ ರಾಷ್ಟ್ರಗಳು ಆರ್ಥಿಕ ಹಿಂಜರಿತಕ್ಕೆ ಸಿಲುಕುತ್ತಿದ್ದರೂ ಭಾರತ ಬ್ರಿಟನ್‌ನನ್ನೇ ಹಿಂದಿಕ್ಕಿದೆ ಎಂದರು.

    ಮೋರ್ಚಾದ ರಾಜ್ಯಾಧ್ಯಕ್ಷ ಸೈಯದ್ ಸಲಾಂಜಿ ಮಾತನಾಡಿ,ಸಿಎಎ,ಎನ್‌ಆರ್‌ಸಿ,ಗೋಹತ್ಯೆ,ಹಿಜಾಬ್,ಆರ್ಟಿಕಲ್ 370ರ ಬಗ್ಗೆ ವಿರೋಧಿಗಳು ಹುಟ್ಟು ಹಾಕುತ್ತಿರುವ ಗೊಂದಲಗಳಿಂದ ದುಗುಡ ಬೇಡ. ಬಾಂಗ್ಲಾದೇಶ,ಪಾಕಿಸ್ತಾನ,ಶ್ರೀಲಂಕಾದಿಂದ ವಲಸೆ ಬಂದ ವರನ್ನು ಗುರುತಿಸಿ ಅವರನ್ನು ಭಾರತದ ಪ್ರಜೆಗಳನ್ನಾಗಿ ಮಾಡಿಕೊಳ್ಳುವುದು ಕಾಯ್ದೆ ಉದ್ದೇಶ.

    ಅಲ್ಪಸಂಖ್ಯಾತರಿಗೆ ಯಾವುದೇ ತೊಂದರೆ ಯಿಲ್ಲ. ಬಿಜೆಪಿ ಪ್ರಣಾಳಿಕೆಯಲ್ಲಿ ಹೇಳಿರುವುದನ್ನು ಈಡೇರಿಸುತ್ತಿದೆ. ಸರ್ಕಾರದ ಯೋಜನೆಗಳನ್ನು ಬಡವರಿಗೆ ತಲುಪಿಸಿ ಪಕ್ಷಕ್ಕೆ ಓಟು ಕೊಡಿಸುವ ಹೊಣೆಗಾರಿಕೆ ಮೋರ್ಚಾದ ಮೇಲಿದೆ ಎಂದರು.

    ಮೋರ್ಚಾದ ಜಿಲ್ಲಾಧ್ಯಕ್ಷ ಸೈಯದ್‌ನವಾಜ್ ಮಾತನಾಡಿ,ಅಲ್ಪಸಂಖ್ಯಾತರು ಬಿಜೆಪಿ ಬೆಂಬಲಿಸುವ ಮೂಲಕ ವಿರೋಧಿಗಳ ಅಪ ಪ್ರ ಚಾರಕ್ಕೆ ತಕ್ಕ ಉತ್ತರ ನೀಡಬೇಕಿದೆ ಎಂದರು. ಬಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ,ಮೋರ್ಚಾ ರಾಜ್ಯಪ್ರಧಾನ ಕಾರ್ಯದರ್ಶಿ ಡಾ.ಅನಿಲ್ ಥಾಮಸ್,ಕಾರ್ಯದರ್ಶಿ ನಯಾಜ್‌ಅಹಮದ್ ಮಾತನಾಡಿದರು. ನರೇಂದ್ರ,ಮೌಲಾಸಾಬ್,ಅಸ್ಗರ್‌ಅಹಮದ್,ಮೊಹಿದ್ದೀನ್ ಮತ್ತಿತರರು ಇದ್ದರು.

    ಎಂದಾದರೂ ತೊಂದರೆ ಆಗಿದಿಯೇ?
    ನಾನು ಹಲವು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ,ನನ್ನಿಂದ ಮುಸ್ಲಿಂರಿಗೆ ಎಂದಾದರೂ ತೊಂದರೆ ಆಗಿದಿಯೇ?ಎಲ್ಲರೂ ಅಣ್ಣ ತಮ್ಮಂದಿರಂತೆ ಬದುಕು ಬೇಕಾಗಿದೆ.
    ತಿಪ್ಪಾರೆಡ್ಡಿ,ಶಾಸಕ,ಚಿತ್ರದುರ್ಗ.
    —–

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts